ಹಾಸನ: ದಿನೆ ದಿನೆ ಕೊರೋನಾ ಸ್ಪೋಟ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹಾಸನದಲ್ಲಿ ಮೇ.೪ರ ವರೆಗೆ ಅಗತ್ಯ ವಸ್ತುಗಳ ಹೊರತಾಗಿ ಉಳಿದ ಎಲ್ಲಾ ವ್ಯಾಪಾರ, ವಹಿವಾಟು ಬಂದ್ ಮಾಡುವುದರ ಮೂಲಕ ಹಾಸನವನ್ನು ಲಾಕ್‌ಡೌನ್ ಮಾಡಲು ಸರಕಾರದ ಆದೇಶದಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚನೆ ನೀಡಿದ್ದಾರೆ.
ವ್ಯಾಪಕವಾಗಿ ಕೊರೋನಾ ಹರಡುತ್ತಿರುವುದರಿಂದ ಸರಕಾರದ ಆದೇಶದಂತೆ ಮೇ.೪ರ ವರೆಗೂ ಹಾಸನ ಜಿಲ್ಲೆಯಾದ್ಯಂತ ಕಠಿಣ ರೂಲ್ಸ್ ಜಾರಿ ಮಾಡಲಾಗಿದ್ದು, ಬಟ್ಟೆ ಅಂಗಡಿ, ಎಲೆಕ್ಟಾçನಿಕ್ ಶಾಪ್ ಗಳು ಸೇರಿ ಜೀವನಾವಶ್ಯಕ ಅಲ್ಲದ ಎಲ್ಲಾ ಅಂಗಡಿಗಳ ಬಂದ್ ಮಾಡುವಂತೆ ಆದೇಶಿಸಲಾಗಿದೆ. ದಿನಸಿ, ಹಾಲು, ಮಾಂಸ, ಮೀನು ಮಾರಾಟ ಹಾಗೂ ಕೃಷಿ ಮತ್ತು ಕಟ್ಟಡ ನಿರ್ಮಾಣ ಸಂಬAಧದ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರವೇ ಅವಕಾಶ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದ ಬೆನ್ನಲ್ಲೇ ಗುರುವಾರದಂದು ಬೆಳಗಿನಿಂದಲೇ ಪೊಲೀಸ್ ಇಲಾಖೆ, ನಗರಸಭೆ, ಗೃಹಸೇವಾದಳ ಇತರರು ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದರು. ಈಲ್ಲಾಧಿಕಾರಿಗಳ ಕ್ರಮ ದಿಂದಾಗಿ ವರ್ತಕರು ಕಂಗಾಲಾಗಿದ್ದಾರೆ. ರಾಜ್ಯ ಸರಕಾರ ವೀಕೆಂಡ್ ಕರ್ಪ್ಯೂ ನಡೆಸಲು ಆದೇಶಿಸಿದೆ. ಆದರೆ ಜಿಲ್ಲಾಡಳಿತ ನಿತ್ಯದ ಕಪ್ರ‍್ರ್ಯಗೆ ಮುಂದಾಗಿರುವುದಕ್ಕೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರಸಭೆ ಆಯುಕ್ತರಾದ ಕೃಷ್ಣಮೂರ್ತಿ ನೇತೃತ್ವದಲ್ಲಿ ದಾಳಿ ನಡೆಸಿದಾಗ ಅಂಗಡಿ ಮುಗ್ಗಟ್ಟು ಬಂದ್ ಮಾಡಿಸುವಾಗ ಎಸ್.ಆರ್.ಎಸ್. ಜ್ಯವಲರಿ ಶಾಪ್ ಒಳಗೆ ಸುಮಾರು ೪೦೦ಕ್ಕೂ ಹೆಚ್ಚು ಜನರು ಚಿನ್ನ ಬೆಳ್ಳಿ ಖರೀದಿಯಲ್ಲಿ ತೊಡಗಿರುವುದು ಕಂಡು ಬಂದಿತು. ಎಲ್ಲರನ್ನು ಹೊರಗೆ ಕಳುಹಿಸಿದರೂ ಕೆಲಸ ಮಾಡುವವರೆ ನೂರಾರು ಸಂಖ್ಯೆಯಲ್ಲಿ ಇದ್ದರು. ಕೊರೋನಾ ವೇಳೆಯಲ್ಲಿ ಇಷ್ಟೊಂದು ಜನರನ್ನು ಒಂದು ಕಡೆ ಇರುವುದಕ್ಕೆ ಅಧಿಕಾರಿಗಳು ಆಕ್ರೋಶವ್ಯಕ್ತಪಡಿಸಿ ೫೦ ಸಾವಿರ ರೂ ದಂಢ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದರು.
ಇದೆ ವೇಳೆ ನಗರಸಭೆ ಆರೋಗ್ಯಾಧಿಕಾರಿಗಳಾದ ಆದೀಶ್, ಮಂಜುನಾಥ್, ಪ್ರಸಾದ್, ಸೂಪರವೈಸರ್ ಸುಹಾಸ್, ಮಾರ್ಷಲ್ಸ್ ಎಂಬ ಹೆಸರಿನಲ್ಲಿ ರಚಿಸಿರುವ ತಂಡದ ಬಿ.ಜಿ. ಮಂಜೂಳಾ, ಹೆಚ್.ಎನ್. ಮಹಾದೇವ್, ನರಸಿಂಹ ಮೂರ್ತಿ, ಪ್ರೇಮ, ಪುಟ್ಟರಾಜು, ಕುಮಾರ್ ಇತರರು ಉಪಸ್ಥಿತರಿದ್ದರು.