ಹಾಸನ: ಕರ್ತವ್ಯನಿರತರಾಗಿದ್ದ ಸೆಕ್ಯುರಿಟಿ ಧರ್ಮೇಶ್ (೩೮) ವರ್ಷ ಎಂಬುವರು ಸಾವನಪ್ಪಿದ ಹಿನ್ನಲೆಯಲ್ಲಿ ಸಿಐಟಿಯು ನೇತೃತ್ವದಲ್ಲಿ ಹಿಮ್ಸ್ ಆಸ್ಪತ್ರೆ ಮುಂದೆ ಭದ್ರತಾ ಸಿಬ್ಬಂದಿಗಳು ಧರಣಿ ನಡೆಸಿದರು.
ಹಾಸನ ಮೆಡಿಕಲ್ ಕಾಲೇಜು ಮತ್ತು ಜಿಲ್ಲಾ ಸರಕಾರಿ ಆಸ್ಪತ್ರೆಯ ಹೊರಗುತ್ತಿಗೆ ಸೆಕ್ಯುರಿಟಿ ಸಿಬ್ಬಂದಿ ತಮ್ಮ ಜೊತೆ ಕೆಲಸ ಮಾಡುತ್ತಿದ್ದ ತಿರುಪತಿಹಳ್ಳಿಯ ಧರ್ಮೇಶ್ ೩೮ ವರ್ಷ ಎಂಬ ವ್ಯಕ್ತಿಯು ಕೊರೊನಾದಿಂದ ಗುರುವಾರದಂದು ಮರಣ ಹೊಂದಿದು, ಕೋವಿಡ್ ಸಮಯದಲ್ಲಿ ನಮಗೆ .ಸರಿಯಾದ ಮಾಸ್ಕ್. ಸ್ಯಾನಿಟೈಸರ್ ಮತ್ತು ಮರಣ ಹೊಂದಿದ ಸೆಕುರಿಟಿ ಸಿಬ್ಬಂದಿಗೆ ಕೊರೊನಾ ವಾರಿಯರ್ ಎಂದು ಪರಿಗಣಿಸಿ ಸೂಕ್ತ ಪರಿಹಾರ ವಿತರಣೆ ಮಾಡಬೇಕೆಂದು ಸೆಕ್ಯುರಿಟಿ ಸಿಬ್ಬಂದಿಗಳು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಸಿ.ಐ.ಟಿ.ಯು ಜಿಲ್ಲಾಧ್ಯಕ್ಷರಾದ ಧರ್ಮೇಶ್ ನೇತೃತ್ವದಲಿ ಧರಣಿ ಮಾಡಲಾಯಿತು.
ಪ್ರತಿಭಟನೆ ಸ್ಥಳಕ್ಕೆ ಬಂದ ಹಿಮ್ಸ್ ನಿರ್ದೇಶಕ ಬಿ.ಸಿ. ರವಿಕುಮಾರ್ ರವರು ಕೊರೊನಾ ಸಂದರ್ಭದಲ್ಲಿ ಎಲ್ಲಾ ಸಿಬ್ಬಂದಿಗೆ ಕೊವೀಡ್ ಕರ್ತವ್ಯಕ್ಕೆ ತೊಂದರೆಯಾಗದAತೆ ಪರಿಕರಗಳನ್ನು ಕೂಡಲೆ ವಿತರಣೆ ಮಾಡುವುದಾಗಿ ಹೇಳಿದ ಅವರು, ಪರಿಹಾರ ನೀಡುವ ಬಗ್ಗೆ ಮತ್ತು ಧರ್ಮೇಶ್ ಪತ್ನಿಗೆ ಕೆಲಸ ಕೊಡುವ ಬಗ್ಗೆ ಹಿರಿಯ ಅಧಿಕಾರಿಗಳ ಬಳಿ ಮಾತನಾಡುವುದಾಗಿ ಭರವಸೆ ನೀಡಿ ಸೆಕ್ಯುರಿಟಿ ಸಿಬ್ಬಂದಿಗಳ ಮನವೊಲಿಸುವುದರಲ್ಲಿ ಯಶಸ್ವಿಯಾದರು.