ಗಿಡಗಳನ್ನು ನೆಡುವುದರ ಮೂಲಕ ಸ್ವಾಮೀಜಿಯವರ ಹುಟ್ಟು ಹಬ್ಬ ಆಚರಿಸಿದರು.

 
ಆಲೂರು : ತ್ರಿವಿಧ ದಾಸೋಹಿ, ನಡೆದಾಡಿದ ದೇವರು ಡಾ. ಶ್ರೀ. ಶಿವಕುಮಾರ ಸ್ವಾಮೀಜಿಯವರ 114 ನೇ ಹುಟ್ಟು ಹಬ್ಬವನ್ನು ಪಟ್ಟಣದ ಹಳೆ  ಕೋರ್ಟ್ ಸರ್ಕಲ್ ನಲ್ಲಿನ ಉದ್ಯಾನವನದಲ್ಲಿ ಡಾ. ಶಿವಕುಮಾರ ಸ್ವಾಮೀಜಿಯವರ ಭಕ್ತ ವೃಂದ, ಅಭಿಮಾನಿ ಬಳಗದ ವತಿಯಿಂದ ಗಿಡಗಳನ್ನು ನೆಡುವುದರ ಮೂಲಕ ಆಚರಿಸಿದರು.

ಈ ಸಂದರ್ಭದಲ್ಲಿ ಭಕ್ತ ವೃಂದದ ಹೇಮಂತ್, ಉಮೇಶ್ , ಕೆ.ಹರೀಶ್, ಹುಲ್ಲಹಳ್ಳಿ ನಾಗರಾಜು,ಕೃಷ್ಣಮೂರ್ತಿ ಅಬ್ಬನ, ತಾಂಡೇಶ್ , ದರ್ಶನ್, ಮುಕ್ತೇಶ್ ಸೇರಿದಂತೆ ಇತರರು ಇದ್ದರು.

Post a Comment

Previous Post Next Post