ಎಂ.ಜಿ. ರಸ್ತೆಯಲ್ಲೂ ಫುಡ್ ಪಾರ್ಕ್ ನಿರ್ಮಾಣ ಅಂಗಡಿ ತೆರವಿಗೆ ಹೋದಾಗ ಪಿಶ್ ಅಂಗಡಿ ಕುಟುಂಬದಿಂದ ಅಡ್ಡಿ


ಹಾಸನ: ನಗರದ ಜಿಲ್ಲಾ ಕ್ರೀಡಾಂಗಣದ ಹಿಂಬಾದ ಎಂ.ಜಿ. ರಸ್ತೆ ಬದಿ ಪುಡ್ ಕೋರ್ಟ್ ನಿರ್ಮಾಣ ಮಾಡುವ ಹಿನ್ನಲೆಯಲ್ಲಿ ಅಂಗಡಿ ತೆರವಿಗೆ ಹೋದಾಗ ಓರ್ವ ಪಿಶ್ ಹೋಟೆಲ್ ಮಾಲೀಕ ಮತ್ತು ಕುಟುಂಬದವರು ಧರಣಿ ಕುಳಿತು ಅಡ್ಡಿಪಡಿಸಿದ ಘಟನೆ ನಡೆದಿದೆ.      


       ಈಗಾಗಲೇ ಕ್ಷೇತ್ರದ ಶಾಸಕರು ಮಹಾರಾಜ ಪಾರ್ಕ್ ಮುಂಬಾಗ ಸುಸರ್ಜಿತವಾದ ಫುಡ್ ಕೋರ್ಟ್ ನಿರ್ಮಿಸಿ ಮುಗಿಯುವ ಹಂತಕ್ಕೆ ಬಂದಿದ್ದು, ಅದರಂತೆ ಎಂ.ಜಿ. ರಸ್ತೆ ಬಳಿ ಇಂತಹದೆಯಾದ ಉತ್ತಮವಾದ ಪುಡ್ ಕೋರ್ಟ್ ಮಾಡುವ ನಿಟ್ಟಿನಲ್ಲಿ ಪಂಚಾಯಿತಿ ಸಬ್ ಕಛೇರಿಯಿಂದ ಯುವಜನ ಕ್ರೀಡಾ ಇಲಾಖೆ ವಸತಿಗೃಹದವರೆಗೂ ಪುಡ್ ಕೊರ್ಟ್ ನಿರ್ಮಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಸತ್ಯಮಂಗಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಟರಾಜು ಮತ್ತು ಬಿಜೆಪಿ ಮುಖಂಡ ಸದಸ್ಯರಾದ ಪುನೀತ್ ಮೊದಲು ಇದ್ದ ಅಂಗಡಿಗಳನ್ನು ತೆರವು ಮಾಡಲು ಮುಂದಾದರು. ಈ ಭಾಗದಲ್ಲಿದ್ದವರೆಲ್ಲಾ ಖಾಲಿ ಮಾಡಿದರು. ಸರಕಾರದಿಂದ ನಾನು ಈ ಪಿಶ್ ಹೋಟೆಲ್ ಇಟ್ಟಿದ್ದೇನೆ. ಈಗಾಗಲೇ ೭ ಲಕ್ಷ ಸಾಲ ಮಾಡಿ ಹಣ ತೀರಿಸುತ್ತಿದ್ದು, ಏನಾದರೂ ಹೋಟೆಲ್ ಖಾಲಿ ಮಾಡಿದರೇ ಸಾಲ ಕಟ್ಟುವುದು ಹೇಗೆ ಎಂದು ವಾಗ್ವಾದ ನಡೆಸಿ ತನ್ನ ಹೋಟೆಲ್ ಮುಂದೆ ತಾನು ಮತ್ತು ತನ್ನ ಹೆಂಡತಿ ಮತ್ತು ಹೆಣ್ಣು ಮಗು ಸೇರಿ ಧರಣಿಗೆ ಕುಳಿತು ದಲಿತರ ಮೇಲೆ ದೌರ್ಜನ್ಯ ಮಾಡುತ್ತಿದ್ದೀರಿ ಎಂದು ಆಕ್ರೋಶವ್ಯಕ್ತಪಡಿಸಿದರು. ಈ ಮಾತನ್ನು ಕೇಳಿದ ಪುನೀತ್ ರವರು, ನಾವೇನು ದಲಿತರ ಮೇಲೆ ದೌರ್ಜನ್ಯ ಮಾಡಿಲ್ಲ. ಇಲ್ಲಿರುವುದು ಒಂದೆ ಜಾತಿ ಅದು ಮನುಷ್ಯ ಜಾತಿ, ಒಂದೆ ಧರ್ಮ. ಏನಾದರೂ ಮಾತನಾಡಿದರೇ ದಲಿತರ ಮೇಲೆ ದೌರ್ಜನ್ಯ ಎಂದು ಹೇಳುತ್ತೀರಾ ಎಂದು ಅಸಮಧಾನ ವ್ಯಕ್ತಪಡಿಸಿದರು. ಈ ವೇಳೆ ದಲಿತ ಮುಖಂಡರಾದ ಜಗದೀಶ್ ಚೌಡವಳ್ಳಿ ಪಿಶ್ ಹೋಟೆಲ್ ಮಾಲೀಕನ ಪರವಾಗಿ ನಿಂತರು. ಕೊನೆಯಲ್ಲಿ ಇಂದು ಶುಕ್ರವಾರ ಒಂದು ದಿವಸ ಕಾಲಾವಕಾಶ ಕೊಡಲಾಗುವುದು ಎಂದು ಅಧಿಕಾರಿಗಳು ಹೇಳಿ ಹೊರಟರು. ಆದರೇ ಪಿಶ್ ಅಂಗಡಿ ಮಾಲೀಕ ವೆಂಕಟೇಶ್ ರವರು ಪಿಶ್ ಮಹಾಮಂಡಳಿ ಹೇಳುವವರೆಗೂ ಇಲ್ಲಿಂದ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದಾರೆ.

     ಸತ್ಯಮಂಗಲ ಗ್ರಾಪಂ ಪಿಡಿಓ ನಟರಾಜು ಮಾಧ್ಯಮದವರ ಜೊತೆ ಮಾತನಾಡಿ, ಸಹ್ಯಾದ್ರಿ ಮುಂಬಾಗ ಇರುವ ಫುಡ್ ಕೋರ್ಟನ್ನು ಎಂ.ಜಿ. ರಸ್ತೆಯಲ್ಲೂ ನಿರ್ಮಾಣ ಮಾಡಲು ಹೊರಟಿದ್ದಾರೆ. ಇಲ್ಲೇನು ಅನಧಿಕೃತವಾಗಿ ಯಾವ ಯಾವ ಅಂಗಡಿಗಳಿದ್ದವು ಎಲ್ಲಾವನ್ನು ತೆರವುಗೊಳಿಸಲಾಗಿದೆ. ಕೊನೆಯದಾಗಿ ಇಲ್ಲಿದ್ದ ಪಿಶ್ ಮಹಾಮಂಡಳಿಯಿAದ ನೀಡಲಾಗಿತ್ತು. ಅವರಿಗೂ ಕೂಡ ನೋಟಿಸ್ ನೀಡಲಾಗಿ ಮತ್ತು ಪಿಶ್ ಹೋಟೆಲ್ ನಡೆಸುವ ವೆಂಕಟೇಶ್ ಬಳಿಯೂ ಮಾತನಾಡುತ್ತೇವೆ ಅಂಗಡಿ ತೆರವುಗೊಳಿಸಿ ಎಂದು ಹೇಳಿದ್ದರು. ಅದರಂತೆ ತೆರವು ಮಾಡಲು ಬಂದಾಗ ಕುಟುಂಬ ಸಮೇತ ಬಂದ ನಮ್ಮ ಕೆಲಸಕ್ಕೆ ಅಡ್ಡಿಪಡಿಸುತ್ತಿರುವುದಾಗಿ ಹೇಳಿದರು. ಶಾಸಕರಿಂದ ನಿರ್ಮಿಸುತ್ತಿರುವ ಫುಡ್ ಕೋರ್ಟ್ ನಿರ್ಮಾಣವಾದ ಮೇಲೆ ಅವರಿಗೂ ಸ್ಥಳಾವಕಾಶ ಮಾಡಿಕೊಡಲಾಗುವುದು ಎಂದು ನೊಟಿಸ್ ನಲ್ಲಿ ತಿಳಿಸಿದ್ದರೂ ಇಷ್ಟು ದಿವಸಗಳಿಂದ ನಮಗೆ ಸಹಕಾರ ಕೊಡುತ್ತಿರಲಿಲ್ಲ. ದಿನಾಂಕ ತಿಳಿಸಿದಂತೆ ನಾವು ತೆರವು ಮಾಡಲು ಬಂದಿದ್ದೇವೆ ನಾವು ಯಾರ ಮೇಲು ದೌರ್ಜನ್ಯ ಏನು ಮಾಡುತ್ತಿಲ್ಲ. ಪಂಚಾಯಿತಿವತಿಯಿAದ ಸೌಜನ್ಯವಾಗಿ ಮಾತನಾಡಿ ಬಗೆಹರಿಸಲು ಪ್ರಯತ್ನ ಮಾಡಲಾಗುತ್ತಿರುವುದಾಗಿ ತಿಳಿಸಿದರು. 


Post a Comment

Previous Post Next Post