ಹಾಸನ ಜಿಲ್ಲೆಯಲ್ಲಿಂದು ಹೊಸದಾಗಿ ೭೮ ಕೋವಿಡ್ ಪ್ರಕರಣಗಳು ಪತ್ತೆ

ಹಾಸನ ಏ.೦೧ :- ಜಿಲ್ಲೆಯಲ್ಲಿಂದು ಹೊಸದಾಗಿ ೭೮ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ ೨೯೫೪೮ ಏರಿಕೆಯಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ೪೮೭ ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.


ಈವರೆಗೆ ೨೮,೫೮೯ ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ೧೦ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್-೧೯ ನಿಂದ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು ೪೭೨ ಮಂದಿ ಸಾವನ್ನಪ್ಪಿದ್ದಾರೆ. 

ಇಂದು ಪತ್ತೆಯಾದ ೭೮ ಕೋವಿಡ್ ಪ್ರಕರಣಗಳಲ್ಲಿ ಹಾಸನ ತಾಲ್ಲೂಕಿನಲ್ಲಿ  ೩೭ ಮಂದಿ, ಅರಸೀಕೆರೆ ತಾಲ್ಲೂಕಿನಲ್ಲಿ ೧೪ ಮಂದಿ, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ೫ ಮಂದಿಗೆ, ಅರಕಲಗೂಡು ತಾಲ್ಲೂಕಿನಲ್ಲಿ ೩ ಮಂದಿ,  ಬೇಲೂರು ತಾಲ್ಲೂಕಿನಲ್ಲಿ ೫ ಮಂದಿ, ಹೊಳೆನರಸೀಪುರ ತಾಲ್ಲೂಕಿನಲ್ಲಿ ೮ ಮಂದಿ,s ಆಲೂರು ತಾಲ್ಲೂಕಿನಲ್ಲಿ ೧ ಮಂದಿ, ಸಕಲೇಶಪುರ  ತಾಲ್ಲೂಕಿನಲ್ಲಿ ೫ ಮಂದಿಗೆ ಕೋವಿಡ್-೧೯ ದೃಡ ಪಟ್ಟಿದೆ ಎಂದು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಅವರು ತಿಳಿಸಿದ್ದಾರೆ.


Post a Comment

Previous Post Next Post