ಬಿಳಗೂಲಿ ಗ್ರಾಮದ ಕಳಸದಮ್ಮ ದೇವಾಲಯದ ಲೋಕಾರ್ಪಣೆ ಪ್ರಯುಕ್ತ ಕಾವೇರಿ ನದಿ ದೇವರ ಉತ್ಸವ

 ರಾಮನಾಥಪುರ:-   ಬಿಳಗೂಲಿಯ ಶ್ರೀ ಕಳಸದಮ್ಮ ಮತ್ತು ಶ್ರೀ ಬೀರಲಿಂಗೇಶ್ವರಸ್ವಾಮಿ ಸೇವಾ ಸಮಿತಿಯಿಂದ ನಡೆದ ಶ್ರೀ ಕಳಸದಮ್ಮ ಮತ್ತು ಶ್ರೀ ಬೀರಲಿಂಗೇಶ್ವರಸ್ವಾಮಿ ಮೂರ್ತಿಗೆ ಕಾವೇರಿ ನದಿಯಲ್ಲಿ ತೀರ್ಥಸ್ಥಾನ, ಗಣಪತಿ ಹೋಮ, ಪುಣ್ಯಹ, ನವಗ್ರಹ ಸಹಿತ ದೇವಾತಾ ಪೂಜೆಗಳ ನಂತರ ನಡೆದ ಉತ್ಸವದಲ್ಲಿ ವೀರಗಾಸೆ, ಮಂಗಳವಾಧ್ಯದ ಜೊತೆಯಲ್ಲಿ ಸುಮಂಗಲೆಯರು ಕಳಸ ಹೊತ್ತು ಕಾವೇರಿ ನದಿ ತಟದಿಂದ ರಾಮನಾಥಪುರದ ಬಸವೇಶ್ವರ ವೃತ್ತದಲ್ಲಿ ಮೆರವಣೆಗೆ ಸಾಗಿ ಬಿಳಗೂಲಿ ಗ್ರಾಮದ ದೇವಾಲಯಕ್ಕೆ ತಲಪಿತ್ತು.



ರಾಮನಾಥಪುರ ಹೋಬಳಿ ಬಿಳಗೂಲಿ ಗ್ರಾಮದಲ್ಲಿ ನೂತನವಾಗಿ ಜೀಣೋದ್ದಾರವಾಗಿರುವ ಶ್ರೀ ಕಳಸದಮ್ಮನವರ ದೇವಾಲಯದ ರಾಜಗೋಪುರದ ಲೋಕಾರ್ಪಣೆ ಸಂದರ್ಭದಲ್ಲಿ, ಗಣಪತಿ ಹೋಮ, ಪುಣ್ಯಹ, ನವಗ್ರಹ ಸಹಿತ ದೇವಾತಾ ಪೂಜೆಗಳ ನಂತರ ನಡೆದ ಉತ್ಸವದಲ್ಲಿ ವೀರಗಾಸೆ, ಮಂಗಳವಾಧ್ಯದೊAದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ವಿಶೇಷ ಪೂಜಾ ಕೈಕರ್ಯಗಳು ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಹುಚ್ಚೇಗೌಡ, ಪುಟ್ಟವೀರೇಗೌಡ, ರವಿ, ರಮೇಶ್, ಚಿಕ್ಕೇಗೌಡ, ಕಳಸೇಗೌಡ, ಅಣ್ಣೇಗೌಡ, ದೇವರಾಜು, ರಾಮು, ಬೀರೇಗೌಡ ಮುಂತಾದವರು ಭಾಗವಹಿಸಿದ್ದರು. 


Post a Comment

Previous Post Next Post