ಕೊಣನೂರು : ಹೋಬಳಿಯ ವಿವಿಧೆಡೆಗಳಲ್ಲಿ ನೋಡಲ್ ಅಧಿಕಾರಿ ರಾಜೇಶ್ ಮತ್ತು ಟಾಸ್ಕ್ ಫೋರ್ಸ್ ತಂಡದವರು ದಾಳಿ ನಡೆಸಿ ಕೋವಿಡ್ ನಿಯಮ ಉಲ್ಲಂಘಿಸಿದವರಿಗೆ, ಮಾಸ್ಕ್ ಹಾಕದೆ ಅನಗತ್ಯವಾಗಿ ಓಡಾಡುವವರಿಗೆ ದಂಢ ವಿಧಿಸಿದರು.
ಅರಸೀಕಟ್ಟೆಗೆ ಮುಂದಿನ ೧೪ ದಿನ ಭಕ್ತರು ಬಾರದಂತೆ ಮನವಿ : ಧಾರ್ಮಿಕ ಕ್ಷೇತ್ರಗಳಿಗೆ ಸರಕಾರ ನಿರ್ಭಂಧ ಹೇರಿರುವುದರಿಂದ ಸಮೀಪದ ಅರಸೀಕಟ್ಟೆ ಪುಣ್ಯ ಕ್ಷೇತ್ರಕ್ಕೆ ಭಕ್ತರು ಬಾರದಂತೆ ಹಾಗೂ ಮುಂದಿನ ೧೪ ದಿನ ಸಾರ್ವಜನಿಕರು ಅನವಶ್ಯಕವಾಗಿ ಓಡಾಡದೇ, ಅಂಗಡಿ ಮಾಲೀಕರು ಬೆಳಿಗ್ಗೆ ೧೦ ಗಂಟೆಯ ನಂತರ ಬಾಗಿಲು ತೆರೆಯದೇ ಜನತಾ ಲಾಕ್‌ಡೌನನ್ನು ಯಶಸ್ವಿಗೊಳಿಸಬೇಕು ಎಂದು ನೋಡಲ್ ಅಧಿಕಾರಿ ರಾಜೇಶ್ ರವರು ಮನವಿ ಮಾಡಿದ್ದಾರೆ.
ಮಂಗಳವಾರದ ದಂಡದ ವಿವರ : ಇಂದು ಮಂಗಳವಾರ ಮದ್ಯಾಹ್ನದ ವೇಳೆಗೆ ಹೋಬಳಿಯ ವಿವಿಧೆಡೆಗಳಲ್ಲಿ ನೋಡಲ್ ಅಧಿಕಾರಿ ರಾಜೇಶ್ ಮತ್ತಿತರರ ಅಧಿಕಾರಿಗಳು ಸಂಚಾರ ನಡೆಸಿ ನಿಯಮ ಮೀರಿ ಸಮಾರಂಭ ನಡೆಸುತ್ತಿದ್ದವರಿಗೆ ೧೨ ಸಾವಿರ ರೂ ದಂಡ, ಮಾಸ್ಕ್ ಧರಿಸದಿದ್ದವರಿಗೆ ೨೨೦೦ ರೂ ದಂಡ ಹಾಗೂ ಕರ್ಫ್ಯೂ ಉಲ್ಲಂಘಿಸಿದವರಿಗೆ ೧೦೦೦ ದಂಡ ಹೀಗೆ ಒಟ್ಟು ೧೫೨೦೦ ರೂ ದಂಡ ವಿಧಿಸಿದ್ದಾರೆ.