ಹಾಸನ: ಕೊರೋನಾ ಎಂಬ ಮಹಾಮಾರಿ ಆವರಿಸಿ ಜನರು ತತ್ತರಿಸಿ ಹೋಗಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಮತ್ತು ಸರಕಾರಿ ಇಲಾಖೆಯವರಿಗೆ ಜಾಗೃತಿ ಮೂಡಿಸಲು ಮಾರ್ಷಲ್ಸ್ ಎಂಬ ಹೆಸರಿನಲ್ಲಿ ಒಂದು ತಂಡ ರಚಿಸಿದ್ದು, ಹಾಗೂ ನಗರಸಭೆ ಆರೋಗ್ಯಾಧಿಕಾರಿಗಳು ಜಂಠಿಯಾಗಿ ಸೇರಿ ಮಾಸ್ಕ್ ಹಾಕದವರಿಗೆ ದಂಢ ವಿಧಿಸುವ ಮೂಲಕ ಚುರುಕು ಮುಟ್ಟಿಸಿದರು.
ನಗರದ ಕಟ್ಟಿನಕೆರೆ ಮಾರ್ಕೇಟ್, ದೇವಿಗೆರೆ ವೃತ್ತ, ಕಸ್ತೂರಿಬಾ ರಸ್ತೆ, ಸಹ್ಯಾದ್ರಿ ವೃತ್ತ, ಅರಳೇಪೇಟೆ ರಸ್ತೆ, ಹೊಸಲೈನ್ ಭಾಗಗಳಲ್ಲಿ ಸಂಚರಿಸುವಾಗ ಬಹುತೇಕ ಮಂದಿ ಮಾಸ್ಕ್ ಹಾಕದಿರುವುದು ಕಂಡು ಬಂದಿತು. ಈ ವೇಳೆ ಎಚ್ಚರಿಕೆ ನೀಡಿ ದಂಢ ವಿಧಿಸುವಾಗ ಮಾತಿನ ವಾಗ್ವಾದಗಳ ಘಟನೆ ಹೆಚ್ಚು ಕಂಡು ಬಂದಿತು. ಅನೇಕರು ದಂಢ ಹಾಕಲು ಬಂದ ಅಧಿಕಾರಿಗಳಿಗೆ ಅವಾಜ್ ಹಾಕುತ್ತಿದ್ದರು. ಇನ್ನು ಹೊಸಲೈನ್ ರಸ್ತೆಯಲ್ಲಿರುವ ರೆವಿನ್ಯೂ ಕಛೇರಿಗೆ ತೆರಳಿದರೇ ಅಲ್ಲಿನ ಬಹುತೇಕ ಅಧಿಕಾರಿಗಳು ಯಾರು ಮಾಸ್ಕ್ ಹಾಕದೆ ಗುಂಪು ಸೇರಿಸಿಕೊಂಡು ಕರ್ತವ್ಯದಲ್ಲಿ ತೊಡಗಿದ್ದರು. ಇನ್ನು ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಕೂಡ ಮಾಸ್ಕ್ ಧರಿಸದೆ ಕರ್ತವ್ಯದಲ್ಲಿ ತೊಡಗಿದ್ರು. ಈ ವೇಳೆ ಬಂದಿದ್ದ ಮಾರ್ಷಲ್ಸ್ ಅಧಿಕಾರಿಗಳು ಎಚ್ಚರಿಕೆ ನೀಡಿ ವಿಚಾರ ವಿನಿಮಯ ಮಾಡಿಕೊಂಡರು. ಇದೆ ರೀತಿ ಮಾಸ್ಕ್ ಧರಿಸದೆ ಇದ್ದರೇ ದಂಢ ವಿಧಿಸುವುದಾಗಿ ಎಚ್ಚರಿಸಿ ಹೊರ ಬಂದರು.
ಮಾಸ್ಕ್ ದಂಢ ವಿಧಿಸುವುದಕ್ಕಾಗಿಯೇ ಮಾರ್ಷಲ್ಸ್ ಎಂಬ ಹೆಸರಿನಲ್ಲಿ ರಚಿಸಿರುವ ತಂಡದ ಬಿ.ಜಿ. ಮಂಜೂಳಾ, ಹೆಚ್.ಎನ್. ಮಹಾದೇವ್, ನರಸಿಂಹ ಮೂರ್ತಿ, ಪ್ರೇಮ, ಪುಟ್ಟರಾಜು, ಕುಮಾರ್ ಹಾಗೂ ನಗರಸಭೆಯ ಆರೋಗ್ಯ ನಿರೀಕ್ಷಕ ಪ್ರಸಾದ್, ಸೂಪರವೈಸರ್ ಸುಹಾಸ್ ಇತರರು ಉಪಸ್ಥಿತರಿದ್ದರು.