ಹಾಸನ: ಮಗನ ಚಿಕಿತ್ಸೆಯ ಹಣವನ್ನು ಕಟ್ಟಲೆಂದು ತಳ್ಳುವ ನಾಲ್ಕು ಚಕ್ರದ ಹಣ್ಣಿನ ಗಾಡಿಯನ್ನು ಮಾರಿ ನಂತರ ಏನು ವ್ಯವಹಾರ ಮಾಡುವುದು ಎಂದು ತಲೆ ಮೇಲೆ ಕೈಇಟ್ಟುಕೊಂಡು ಕುಳಿತಿದ್ದವರಿಗೆ ಜನಪ್ರಿಯ ಆಸ್ಪತ್ರೆಯವತಿಯಿಂದ ಹೊಸ ತಳ್ಳುವ ಗಾಡಿ ಕೊಡಿಸಲಾಗಿದೆ ಎಂದು ಆಸ್ಪತ್ರೆಯ ಛರ‍್ಮನ್ ಡಾ. ಅಬ್ದೂಲ್ ಬಶೀರ್ ರವರು ತಿಳಿಸಿದ್ದಾರೆ.
ಆಲೂರಿನ ನವೀದ್ ಪಾಷ ಎಂಬುವರ ಮಗ ಶಾಹಿದ್ ಪಾಷ ಎಂಬುವನಿಗೆ ಅಪಘಾತವಾಗಿ ಹಾಸನ ನಗರದ ಜನಪ್ರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಚಿಕಿತ್ಸೆ ವೆಚ್ಚ ಭರಿಸಲು ತನ್ನ ಬಳಿ ಹಣ ಇಲ್ಲದಿರುವಾಗ ತನ್ನ ಬಳಿ ಇದ್ದ ಜೀವನೋಪಾಯದ ನಾಲ್ಕು ಚಕ್ರದ ತಳ್ಳುವ ಗಾಡಿಯನ್ನು ಮಾರಿ ಬಂದ ಹಣವನ್ನು ಆಸ್ಪತ್ರೆಗೆ ಕಟ್ಟಿದ್ದರು. ಇದ್ದ ಗಾಡಿಯನ್ನು ಮಾರಾಟ ಮಾಡಿರುವುದರಿಂದ ಮುಂದೆ ಜೀವನ ಸಾಗಿಸಲು ಯಾವ ಕೆಲಸ ಮಾಡುವುದು ಎಂದು ಯೋಚನೆಯಲ್ಲಿ ಕುಳಿತಿದ್ದಾಗ ನಾನು ವಿಚಾರಿಸಿ ಧೈರ್ಯ ತುಂಬಿದ್ದೆನು. ಅದರಂತೆ ಆತನು ತನ್ನ ವ್ಯವಹಾರ ಮಾಡುತ್ತಿದ್ದ ತಳ್ಳುವ ನಾಲ್ಕು ಚಕ್ರದ ಗಾಡಿ ಮತ್ತು ಹಣ್ಣುಗಳ ಸಮೇತ ಆಸ್ಪತ್ರೆವತಿಯಿಂದ ಕೊಡಲಾಗಿದೆ ಎಂದು ಜನಪ್ರಿಯ ಆಸ್ಪತ್ರೆಯ ಛರ‍್ಮನ್ ಡಾ. ಅಬ್ದೂಲ್ ಬಶೀರ್ ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಇದೆ ವೇಳೆ ಸ್ವಾತಂತ್ರö್ಯ ಹೋರಾಟಗಾರ ಹೆಚ್.ಎಂ. ಶಿವಣ್ಣ, ಸಮಾಜಸೇವಕ ಅಮ್ಜಾದ್ ಖಾನ್, ಶಬೀರ್ ಅಹಮದ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್, ಕಾರ್ಯದರ್ಶಿ ಸೀತರಾಮು, ಹಾಗೂ ಇತರರು ಪಾಲ್ಗೊಂಡಿದ್ದರು.