ಹಾಸನ :- ಫ್ರೂಟ್ಸ್ ಹಾಗೂ ಕುಟುಂಬ ತಂತ್ರಾAಶದಲ್ಲಿ ಅಂಕಿಅAಶಗಳ ನೋಂದಣಿಯಲ್ಲಿ ನಿಗದಿತ ಗುರಿ ಸಾಧಿಸದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲೆಯ ಎಲ್ಲಾ ತಹಸೀಲ್ದಾರ್‌ಗಳೊಂದಿಗೆ ಫ್ರೂಟ್ ಹಾಗೂ ಕುಟುಂಬ ತಂತ್ರಾAಶ ನೊಂದಣಿ ಹಾಗೂ ಇನ್ನಿತರ ವಿಷಯಗಳ ಕುರಿತು ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಕುಟುಂಬ ತಂತ್ರಾAಶಕ್ಕೆ ಹಿಮ್ಸ್ನಲ್ಲಿ ಆಸ್ಪತ್ರೆಯಲ್ಲಿ ಮರಣ ಹೊಂದಿದವರ ವಿವರವನ್ನು ತಾಲ್ಲೂಕುವಾರು ವಿಂಗಡನೆ ಮಾಡಿ ನೀಡಲಾಗಿದ್ದು ಅವುಗಳ ನೊಂದಣಿಯನ್ನು ಇನ್ನೆರಡು ದಿನಗಳಲ್ಲಿ ನೊಂದಣಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಈಗಾಗಲೇ ಮರಣ ಹೊಂದಿದ ವ್ಯಕ್ತಿಯ ಪಡಿತರ ಪಟ್ಟಿಯಿಂದ ರದ್ದುಗೊಳಿಸಲು ಮಾಹಿತಿಯನ್ನು ಪಡೆಯಲು ನ್ಯಾಯಬೆಲೆ ಅಂಗಡಿ ಮಾಲೀಕರ ಜೊತೆ ಸಭೆ ನಡೆಸಿ ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸಿ ಕುಟುಂಬ ತಂತ್ರಾAಶದಲ್ಲಿ ನೋಂದಣಿ ಮಾಡಲು ತಿಳಿಸಿದರು.
ಫ್ರೂಟ್ ಹೊಂದಿದವರ ಮಾಹಿತಿ ಹೊಂದಿಲ್ಲದವರು ಮಾಹಿತಿಯನ್ನು ಈಗಾಗಲೇ ನೀಡಲಾಗಿದೆ ಅದರ ಮಾಹಿತಿಯಂತೆ ಆದಷ್ಟು ವೇಗವಾಗಿ ದಾಖಲೆಗಳನ್ನು ಸಂಗ್ರಹಿಸಿ ನೊಂದಾಯಿಸುವAತೆ ತಿಳಿಸಿದರು.
ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ, ಪಶುಸಂಗೋಪನೆ, ಮೀನುಗಾರಿಕೆ ಹಾಗೂ ಇತರೆ ಇಲಾಖೆಗಳ ಮೂಲಕ ರೈತರ ಮಾಹಿತಿಯನ್ನು ಫ್ರೂಟ್ಸ್ ನೋಂದಣಿ ಮಾಡುವಂತೆ ತಿಳಿಸಿದರಲ್ಲದೆ ಎಫ್.ಐ.ಡಿ ಹೊಂದದೇ ಇರುವ ರೈತರಿಗೆ ಪಹಣಿ, ಬ್ಯಾಂಕ್ ಖಾತೆ ಬುಕ್‌ಗಳನ್ನು ತೆಗೆದುಕೊಂಡು ಹೊಸದಾಗಿ ನೋಂದಣಿ ಮಾಡಿ ಎಂದರು.
ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಅವರು ಮಾತನಾಡಿ ಬಾಕಿ ಉಳಿದಿರುವ ಫ್ರೂಟ್ ಹಾಗೂ ಕುಟುಂಬ ತಂತ್ರಾAಶದ ನೋಂದಣಿಗಳು ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿ ವೇಗವಾಗಿ ನೊಂದಣಿ ಕಾರ್ಯ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಸರ್ಕಾರದ ನಿರ್ದೇಶನದಂತೆ ಯಾವುದೇ ಜಾತ್ರೆಗಳು ಧಾರ್ಮಿಕ ಹಬ್ಬಗಳು ಉತ್ಸವಗಳು ಆಚರಣೆಯನ್ನು ಕಡ್ಡಾಯವಾಗಿ ನಿಷೇಧ ಮಾಡಿ ಆಚರಣೆಗೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ಎಲ್ಲಾ ತಾಲ್ಲೂಕು ತಹಸಿಲ್ದಾರ್‌ಗಳಿಗೆ ಸೂಚನೆ ನೀಡಿದರು.
ಈಗಾಗಲೇ ಬೇಸಿಗೆ ಕಾಲ ಆರಂಭವಾಗಿದ್ದು ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗದAತೆ ಮುಂಜಾಗ್ರತೆ ವಹಿಸಿ ಸಮಸ್ಯೆ ಇರುವ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಅಗತ್ಯ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲು ಮಾಹಿತಿಯನ್ನು ತ್ವರಿತವಾಗಿ ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಬಿ.ಎ.ಜಗದೀಶ್ ಹಾಗೂ ಗಿರೀಶ್ ನಂದನ್, ಜಂಟಿ ಕೃಷಿ ನಿರ್ದೇಶಕರಾದ ರವಿ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಯೋಗೇಶ್, ತಹಸೀಲ್ದಾರ್ ಶಿವಶಂಕರಪ್ಪ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.