ಬೇಲೂರು: ಇಲ್ಲಿನ ಪುರಸಭೆ ಆಡಳಿತ ಮಂಡಳಿ ಅವಧಿ ಮುಗಿದು ೨ ವರ್ಷ ಕಳೆದ ನಂತರ ಇದೀಗ ಚುನಾವಣೆ ನಡೆದಿದೆ.
೨೩ ವಾರ್ಡುಗಳಿಗೆ ಒಂದೆರಡು ಕಡೆ ಅಲ್ಪ ಪ್ರಮಾಣದ ಮಾತಿನ ಚಕಮಕಿ ಹೊರತುಪಡಿಸಿ ಶಾಂತಿಯುತವಾಗಿ ನಡೆದ ಚುನಾವಣೆಯಲ್ಲಿ ಶೇ.೮೩ ಮತದಾನವಾಗಿದೆ. ಬೆಳಿಗ್ಗೆ ೭ ಗಂಟೆಯಿAದ ಆರಂಭವಾದ ಮತದಾನ ಕೋವಿಡ್ ಹಿನ್ನಲೆಯಲ್ಲಿ ಸಂಜೆ ೬ ಗಂಟೆಯವರಗೆ ನಡೆಯಿತು. ಮತದಾರರು ಮಾಸ್ಕ್ ಧರಿಸಿ ಸಾಮಾಜಿಕ ಅಂತದಲ್ಲಿ ಮತದಾನ ಮಾಡಿದರು. ಮತದಾನ ಕೇಂದ್ರದಲ್ಲಿ ಸ್ಯಾನಿಟೈಸರ್ ಬಳಕೆ ಮಾಡಲಾಯಿತು.
ಮತದಾನ ಕೇಂದ್ರದ ಸುತ್ತ ೧೪೪ ಸೆಕ್ಷನ್ ಜಾರಿ ಇದ್ದುದರಿಂದ ಮತದಾನ ಕೇಂದ್ರದ ಸಮೀಪ ಅಭ್ಯರ್ಥಿಗಳ ಪರವಾಗಿ ಶಾಮಿಯಾನ, ಕುರ್ಚಿ, ಟೇಬಲ್ ಹಾಕುವುದನ್ನು ನಿರ್ಭಂದಿಸಲಾಗಿತ್ತು. ಆದರೂ ಸಾಕಷ್ಟು ದೂರದಲ್ಲಿ ಮತದಾರರಿಗೆ ಮತಪಟ್ಟಿಯ ಸಂಖ್ಯೆ ಬರೆದುಕೊಡುವಲ್ಲಿ ಅಭ್ಯರ್ಥಿ ಬೆಂಬಲಿಗರು ನಿರತರಾಗಿದ್ದರು. ಅಭ್ಯರ್ಥಿಗಳು ಸಹ ಮತದಾನ ಕೇಂದ್ರದಿAದ ೧೦೦ ಮೀಟರ್ ದೂರವಿರಬೇಕೆಂಬ ಸೂಚನೆಯಿಂದ ಕೆಲವರು ಅಸಮಾದಾನಗೊಂಡು ಮಾತಿನ ಚಕಮಕಿ ನಡೆಸಿದ್ದು ಕಂಡುಬAತು.
ಮತದಾನ ಕೇಂದ್ರಕ್ಕೆ ಎಸಿ ಗಿರೀಶ್‌ನಂದನ್, ಡಿವೈಎಸ್‌ಪಿ ನಾಗೇಶ್, ತಹಸೀಲ್ದಾರ್ ನಟೇಶ್ ಆಗಮಿಸಿ ವೀಕ್ಷಿಸಿದರು. ಎಲ್ಲಾ ಮತದಾನ ಕೇಂದ್ರದ ಬಳಿ ಬಿಗಿಪೊಲೀಸ್ ಬಂಧೂಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮತದಾನ ಪೂರ್ಣಗೊಂಡ ನಂತರ ಮತಪೆಟ್ಟಿಗೆಗಳನ್ನು ಮತ ಎಣಿಕೆ ಕೇಂದ್ರವಾದ ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡಕ್ಕೆ ತರಲಾಯಿತು.
ಎಣಿಕೆ ಕೇಂದ್ರದಲ್ಲಿ ಏಪ್ರಿಲ್ ೩೦ ರಂದು ಎಣಿಕೆ ನಡೆಯಲಿದ್ದು ಪೂರ್ವ ಸಿದ್ದತೆಯಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಸಿಪಿಐ ಶ್ರೀಕಾಂತ್ ಅವರು ಪಿಎಸ್‌ಐ ಎಸ್‌ಜಿ.ಪಾಟೀಲ್ ಜತೆ ಎಣಿಕೆ ಕೇಂದ್ರದಲ್ಲಿನ ಭದ್ರತಾ ವ್ಯವಸ್ಥೆ, ಸಿಸಿ ಕ್ಯಾಮರಾ ಅಳವಡಿಕೆ ಪರಿಶೀಲಿಸಿದರಲ್ಲದೆ ಕೆಲವೊಂದು ಸಲಹೆಗಳನ್ನು ನೀಡಿದರು. ೧೪೪ ಸೆಕ್ಷನ್ ಜಾರಿಯಲ್ಲಿ ಇರುವುದರಿಂದ ಮತ ಎಣಿಕೆ ಕೇಂದ್ರದಲ್ಲಿ ಅಭ್ಯರ್ಥಿ ಹಾಗೂ ಏಜೆಂಟ್ ಒಬ್ಬರಿಗೆ ಮಾತ್ರವೆ ಅವಕಾಶ ಇದ್ದು, ವಿಜಯೋತ್ಸವ, ಪಟಾಕಿ ಸಿಡಿಸುವುದು, ಮೆರವಣಿಗೆ ಇತ್ಯಾದಿ ಯಾವುದೂ ಇರುವುದಿಲ್ಲ ಹಾಗೂ ಬೆಂಬಲಿಗರು ಒಂದೆಡೆ ಸೇರುವುದಕ್ಕೆ ಅವಕಾಶ ಇಲ್ಲವೆಂದು ತಿಳಿದುಬಂದಿದೆ.