ಗೋವು ಮಾಂಸ, ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಿ ವಿಶ್ವಹಿಂದೂ ಎಸ್ಪಿಗೆ ಮನವಿ.

ಹಾಸನ: ಸರಕಾರದ ಮಹತ್ತರವಾದ ಗೋಹತ್ಯೆ ನಿಷೇಧ ಕಾನೂನು ಇದ್ದರೂ ಯಾವ ಭಯವಿಲ್ಲದೇ ಗೋವುಗಳ ಮಾಂಸ ಮಾರಾಟವನ್ನು ಮಾಡಲಾಗುತ್ತಿದ್ದು, ರಾತ್ರುಇ ಸಮಯದಲ್ಲಿ ಮಾದಕ ವ್ಯಸನಿಗಳು ಗಾಂಜಾ ಸೇವೆಸಿ ದಾಂಧಲೆ ಮಾಡುತ್ತಿದ್ದಾರೆ. ಇನ್ನು ಮರಳು ಗಣಿಗಾರಿಕೆ ವೇಳೆ ಸಿಕ್ಕಿದ ಶ್ರೀಚನ್ನಕೇಶವ ವಿಗ್ರಹವನ್ನು ಕದ್ದು ಸಾಗಣಿಕೆ ಮಾಡಿದ ದೂರಿನ ಬಗ್ಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ವಿಶ್ವಹಿಂದೂ ಪರಿಷದ್ ಮತ್ತು ಬಜರಂಗದಳದಿAದ ಎಸ್ಪಿ ಶ್ರೀನಿವಾಸ್ ಗೌಡರಿಗೆ ಮನವಿ ಸಲ್ಲಿಸಲಾಯಿತು.


      ಶುಕ್ರವಾರ ಬೆಳಿಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಆವರಣಕ್ಕೆ ಬಂದ ಅವರು, ಸರ್ಕಾರದ ಮಹತ್ತರವಾದ ಗೋ ಹತ್ಯೆ ನಿಷೇಧ ಕಾಯ್ದೆ -೨೦೨೦ ನ್ನು ರಾಜ್ಯಾಧ್ಯಂತ ಜಾರಿಯಲ್ಲಿದ್ದರೂ ಯತವತ್ತು ಜಾರಿ ಮಾಡಲು ವಿಫಲರಾಗಿದ್ದು, ಸಾರ್ವಜನಿಕವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದಾರೆ. ಸಕಲೇಶಪುರದ ತಾಲ್ಲೂಕಿನಾದ್ಯಂತ ಗೋವುಗಳ ಕಳ್ಳತನ ಮತ್ತು ಕುಶಾಲನಗರ ಬಡಾವಣೆಯಲ್ಲಿ ತಬಾರಕ್ ಮನೆಯಲ್ಲಿ ಗುಲ್ಲು ಎಂಬುವವನ ಮನೆಯಲ್ಲಿ ಮಹಿಳೆಯರು ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದರು ಯಾವುದೇ ಕ್ರಮವಹಿಸುತ್ತಿಲ್ಲ. ನಗರ ಠಾಣೆಯ ಪೋಲಿಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು ಸಹ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ದೂರಿದರು.

      ಸಕಲೇಶಪುರ ನಗರದಲ್ಲಿ ೨೦೨೧ ಮಾರ್ಚ್ ೩೦ ರಂದು ರಾತ್ರಿ ವೇಳೆ ಮಾದಕ ವ್ಯಸನಿ ಗಾಂಜಾ ಸೇವಿಸಿ ನಗರದ ಟೋಲ್‌ಗೇಟ್ ಬಳಿ ಮಾಡಿದ ಧಾಂಧಲೆಯಿAದ ಸಾರ್ವಜನಿಕರೇ ನೀಡಿದ ದೂರನ್ನು ಆಧಾರಿಸಿ ಬಂಧಿಸದೆ ಮಾದಕ ವ್ಯಸನಿಗಳಿಂದ ಹಣ ಪಡೆದು ಬಿಡುಗಡೆ ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. ಸಕಲೇಶಪುರ ನಗರದ ಚಂಪಕನಗರ ಬಡಾವಣೆಯ ಟೋಲ್‌ಗೇಟ್ ಬಳಿ ಇಬ್ಬರು ಮುಸ್ಲಿಂ ಯುವಕರು ಗಾಂಜಾದ ಮತ್ತಿನಲ್ಲಿ ಸಿಕ್ಕ ಸಿಕ್ಕ ಮಹಿಳೆಯರ ಮೇಲೆ ಬೀಳುತ್ತಿದ್ದರು. ಹಾಗೂ ಅದರಲ್ಲಿ ಒಬ್ಬ ಗಾಂಜಾ ಪೆಡ್ಲರ್ ಆಗಿದ್ದು, ಬಾಟಲಿಗಳನ್ನು ಹೊಡೆದು ಜನರಿಗೆ ತೊಂದರೆ ನೀಡುತ್ತಿದ್ದಾರೆ. ಸಾರ್ವಜನಿಕರ ದೂರವಾಣಿ ಮುಖಾಂತರ ತಿಳಿಸಿದ್ದಾರೆ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಂದು ಕರೆದುಕೊಂಡು ಹೋಗಿ ಯಾವುದೇ ವಿಚಾರಣೆ ಮಾಡದೆೆ ಬಿಡುಗಡೆ ಮಾಡಿರುವುದನ್ನು ನೋಡಿದರೇ ಹಣ ಪಡೆದು ಬಿಟ್ಟು ಕಳುಹಿಸಿದ್ದಾರೆ ಎಂದು ಅನುಮಾನಿಸಿದರು. ಗಾಂಜಾ ಮಾದಕ ವ್ಯಸನಿಗಳಿಗೆ ನೇರವಾಗಿ ಬೆಂಬಲ ನೀಡುತ್ತಿರುವುದು ನಿಜಕ್ಕು ಆತಂಕಕಾರಿ ಬೆಳವಣಿಗೆಯಾಗಿದೆ. ಮಾದಕ ವ್ಯಸನಿಗಳ ಮೇಲೆ ಕ್ರಮ ವಸಿಸದೆ ಹಿಂಬಾಗಿಲಿನಿAದ ಕೃತ್ಯಕ್ಕೆ ವ್ಯಸನಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.

        ೨೦೨೧ ಮಾರ್ಚ್ ೨೪ ರಂದು ಸಕಲೇಶಪುರದ ಹಾಲೇಬೇಲೂರಿಲ್ಲಿ ಮರಳು ಗಣಿಗಾರಿಕೆ ಮಾಡುವಾಗ ಸಿಕ್ಕದ ಶ್ರೀಚನ್ನಕೇಶವ ವಿಗ್ರಹವನ್ನು ಕದ್ದು ಸಾಗಾಣಿಕೆ ಮಾಡಲು ಮಾಡಿದ ಯತ್ನದ ವಿರುದ್ಧ ನೀಡಿದ ದೂರನ್ನು ತಿರಸ್ಕರಿಸಿ, ಕಳ್ಳರ ಪರವಾಗಿ ನಿಂತಿದ್ದಾರೆ. ಹಾಲೇಬೇಲೂರಿಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿರುವ ಮುಫೀಜ್ ಮತ್ತು ಜಾಕೀರ್ ಎಂಬುವವರ ಮೇಲೆ ಲಿಖಿತ ದೂರು ನೀಡಿದರು ಸಹ ಯಾವುದೇ ಕ್ರಮ ವಹಿಸಿರುವುದಿಲ್ಲ. ಹಿಟಾಚಿ ಚಾಲಕ ಕಣ್ಮರೆಯಾಗಿರುವುದು ಕಳ್ಳ ಸಾಗಾಣಿಕೆಯ ಅನುಮಾನ ಇನ್ನಷ್ಟು ಹೆಚ್ಚಿಸುತ್ತದೆ . ಸಕಲೇಶಪುರದ ಹಿಂದೂ ಮುಖಂಡರ ವಿರುದ್ಧ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವುದಲ್ಲದೆ ಶೇರ್ ಮಾಡಿರುವವರ ವಿರುದ್ಧ ಕ್ರಮ ಜರುಗಿಸಿ ಅದನ್ನು ಸೈಬರ್ ಕ್ರೆöÊಂಗೆ ವರ್ಗಾಯಿಸಿ ಎಂದು ಹೇಳಿದರೆ ಎಫ್.ಐ.ಆರ್ ಮಾಡದೆ ಎನ್.ಸಿ ಯು ನೀಡದೆ ಕಾನೂನು ವ್ಯವಸ್ಥೆ ದುರುಪಯೋಗ ಮಾಡಿಕೊಂಡಿರುವ ಇಲಾಖ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

      ಸಕಲೇಶಪುರ ತಾಲ್ಲೂಕಿನಲ್ಲಿ ಯವುದೇ ಸಣ್ಣ ಸಣ್ಣ ಗಾಯವಾದರೂ ಹಿಂದೂಗಳ ಮೇಲೆ ಮುಸ್ಲಿಂಮರು . ದೂರು ನೀಡಿದರೆ ಪ್ರಕರಣ ದಾಖಲಿಸಿ ಬಂಧನ ಮಾಡುತ್ತಿರುವುದು ಕಾನೂನು ವಿರುದ್ಧವಾಗಿದ್ದು, ಯುವಕರ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಇದರಿಂದ ಕುಟುಂಬಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಆತಂಕವ್ಯಕ್ತಪಡಿಸಿದರು. ಒಂದು ವರ್ಷದಲ್ಲಿ ಈ ರೀತಿಯಾದ ಅನೇಕ ಕೇಸ್ ಹಾಕಿ ದಾಖಲಿಸುತ್ತಿರುವುದು ನೋವುಂಟುಮಾಡುತ್ತಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿ ದಾಖಲೆಗಳನ್ನು ಪರಿಶೀಲಿಸಬೇಕು. ಮತ್ತು ಕ್ರಮ ಕೈಗೊಳ್ಳಲು ತಡವಾದ ಬಗ್ಗೆ ಮತ್ತು ಕಾನೂನು ಕಾಪಾಡಲು ವಿಫಲರದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸಿ ಭ್ರಷ್ಟಚಾರದ ಕೂಪವಾಗಿರುವ ಪೋಲಿಸ್ ಠಾಣೆಗಳಲ್ಲಿ ನ್ಯಾಯ ಸಮ್ಮತವಾಗಿ ಜನ ಸಾಮಾನ್ಯರಿಗೆ ನ್ಯಾಯ ದೊರಕಿಸಲು ಆದೇಶಿಸಬೇಕು ಎಂದು ಮನವಿ ಮಾಡಲಾಯಿತು.

      ಇದೆ ವೇಳೆ ಭಜರಂಗದಳದ ರಾಜ್ಯ ಸಹ ಸಂಚಾಲಕ ಸಕಲೇಶಪುರದ ರಘು, ವಿಶ್ವಹಿಂದೂ ಪರಿಷದ್ ತಾಲೂಕು ಅಧ್ಯಕ್ಷ ವಿಶ್ವನಾಥ್ ಶೆಟ್ಟಿ, ತಾಲೂಕು ಕಾರ್ಯದರ್ಶಿ ಮಂಜುನಾಥ್ ಕಬ್ಬಿನಗದ್ದೆ, ಬಜರಂಗದಳದ ಸಂಯೋಜಕ ಶ್ರೀಜಿತ್ ಗೌಡ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post