ಹಾಸನ: ನಗರದ ಹೊಸಲೈನ್ ರಸ್ತೆಯಲ್ಲಿರುವ ಷರೀಪ್ ಚ್ಯಾರಿಟಬಲ್ ಕಟ್ಟಡದಲ್ಲಿ 100 ಹಾಸಿಗೆ ಉಳ್ಳ ತಾತ್ಕಲಿಕ ಕೊರೋನಾ ಕೇರ್ ಕೇಂದ್ರವನ್ನು ಇಂದು ಶುಕ್ರವಾರ ಬೆಳಿಗ್ಗೆ 11:30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯರವರು ಉದ್ಘಾಟಿಸಲಿದ್ದಾರೆ ಎಂದು ಹಾಸನ್ ಹ್ಯುಮೇನಿಟೇರಿಯನ್ ಸರ್ವಿಸ್ ಎಂಬ ಸ್ವಯಮ್ ಸೇವಾ ಸಂಸ್ಥೆಯ ಸದಸ್ಯರು ಹಾಗೂ ವೈದ್ಯರಾದ ಕೆ.ಆರ್. ಶರೀಫ್ ತಿಳಿಸಿದರು.
ಪತ್ರಿಕಾ
ಗೋಷ್ಠಿಯಲ್ಲಿ ಗುರುವಾರದಂದು ಮಾತನಾಡಿ, ಈಗಿನ ಸಂದಿಗ್ಧ ಹಾಗೂ ಗಂಭೀರ ಪರಿಸ್ಥಿತಿಯಲ್ಲಿ ಇಡೀ ವಿಶ್ವವು ಸಾಂಕ್ರಾಮಿಕ ಕೊರೊನದಿಂದ ತತ್ತರಿಸಿ ಹೋಗಿದ್ದು, ಇದು ಕೇವಲ ಸರ್ಕಾರಗಳ ಜವಾಬ್ದಾರಿಯಾಗಿರದೆ ಸಾರ್ವಜನಿಕರು, ಸಂಘ - ಸಂಸ್ಥೆಗಳು, ಜನಪ್ರತಿನಿಧಿಗಳು, ಮಾಧ್ಯಮದ ಮಿತ್ರರು, ಇಡೀ ಸಮಾಜವು ಒಂದಾಗಿ ಆಂದೋಲನದ ಮಾದರಿಯಲ್ಲಿ ಜಾಗೃತಿ ಮೂಡಿಸಬೇಕಿದೆ ಹಾಗೂ ಅನಗತ್ಯ ಸಾವು - ನೋವುಗಳನ್ನು ತಡೆಯಬೇಕಿದೆ ಎಂದರು. ಈ ದಿಸೆಯಲ್ಲಿ ಆಸಕ್ತ ವೈದ್ಯರೂ ಹಾಗೂ ಯುವಕರನ್ನೂಳಗಂಡ ಹಾಸನ ಹ್ಯುಮೇನಿಟೇರಿಯನ್ ಸರ್ವಿಸ್ ಎಂಬ ಸ್ವಯಂ ಸೇವಾ ಸಂಸ್ಥೆಯು ಅಸ್ತಿತ್ವಕ್ಕೆ ಬಂದಿದ್ದು, ಸಾರ್ವಜನಿಕರಿಗೆ ಸೇವೆ ನೀಡುವ ಸದುದ್ದೇಶದಿಂದ ಸರ್ಕಾರದ ಮಾರ್ಗಸೂಚಿಯಂತೆ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಗೊಳಿಸಿ, ಸಾರ್ವಜನಿಕರಿಗೆ ಸಹಕಾರಿಯಾಗಲು ನಗರದ ಹೊಸಲೈನ್ ರಸ್ತೆಯಲ್ಲಿರುವ ಷರೀಫ್ ಚ್ಯಾರಿಟೀಸ್ ಕಟ್ಟಡದಲ್ಲಿ 100 ಬೆಡ್ ಗಳುಳ್ಳ ತಾತ್ಕಾಲಿಕ ಕೊರೊನ ಕೇರ್ ಕೇಂದ್ರವನ್ನು ಇಂದು ಶುಕ್ರವಾರದಂದು ಬೆಳಿಗ್ಗೆ 11:30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಉದ್ಘಾಟನೆ ನೆರವೇರಿಸುವ ಮೂಲಕ ತನ್ನ ಸೇವೆಯನ್ನು ಆರಂಭಿಸಲಿದೆ ಎಂದು ಹೇಳಿದರು.
ಈ ಕೇಂದ್ರವು ಬೆಂಗಳೂರಿನ ಪ್ರತಿಷ್ಠಿತ ಊಃS ಆಸ್ಪತ್ರೆ ಹಾಗೂ ಶಮಾ ಚ್ಯಾರಿಟೆಬಲ್ ಟ್ರಸ್ಟ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಈಗ ಜಿಲ್ಲಾಡಳಿತವು 45 ಬೆಡ್ ಗಳಿಗೆ ಅನುಮತಿ ನೀಡಿದ್ದು, ನಂತರ ಅವಶ್ಯಕತೆಗನುಗುಣವಾಗಿ ಆರೋಗ್ಯ ಇಲಾಖೆಯ ನಿಯಮಗಳಿಗನುಸಾರವಾಗಿ ಅನುಮತಿ ಪಡೆದು ಬೆಡ್ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದರು. ನುರಿತ ವೈದ್ಯರು, ದಾದಿಯರು, ಹಾಗೂ ಸಿಬ್ಬಂದಿ ವರ್ಗದವರು ಸ್ವಯಂಸೇವಾ ನೆಲೆಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಕೇವಲ ಔಷದಿ, ಆಮ್ಲಜನಕ ಹಾಗು ಲ್ಯಾಬಟೆಸ್ಟಗಳಿಗೆ ಮಾತ್ರ ಕನಿಷ್ಠ ಶುಲ್ಕವನ್ನು ಪಡೆಯಲಾಗುವುದು. ಒಬ್ಬ ರೋಗಿಗೆ ಒಂದು ದಿನಕ್ಕೆ 5 ರಿಂದ 6 ಸಾವಿರ ಕನಿಷ್ಟ ಶುಲ್ಕ ವಿಧಿಸಲಾಗುವುದು. 12 ಜನ ವೈದ್ಯರು, 10 ಜನ ನರ್ಸ್ಗಳು ಇದ್ದಾರೆ. ಅವಶ್ಯಕತೆಗೆ ತಕ್ಕಾಗಿ ಸೇವೆ ನೀಡಲಿದ್ದಾರೆ. ಈ ನಮ್ಮ ಪ್ರಯತ್ನಕ್ಕೆ ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ಮಾರ್ಗದರ್ಶನ, ಪೊಲೀಸ್ ಹಾಗೂ ಸಂಬAಧಪಟ್ಟ ಇಲಾಖೆಗಳು ಮತ್ತು ವಿಶೇಷವಾಗಿ ಮಾಧ್ಯಮದ ಮಿತ್ರರ ಸಹಕಾರ ಅಗತ್ಯವಾಗಿದೆ ಎಂದು ಕೋರಿದರು.
ಸಂಸ್ಥೆಯ ವತಿಯಿಂದ ಹಾಸನ ನಗರ ವ್ಯಾಪ್ತಿಯೊಳಗೆ ರಚಿತ ಅಂಬ್ಯುಲೆನ್ಸ್ ಸೇವೆಯು ಲಭ್ಯವಿರುತ್ತದೆ. ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಹಾಗು ಸೇವೆಗಾಗಿ ಕೆಂದ್ರದ ಸಹಾಯವಾಣಿ ಸಂಖ್ಯೆಗಳಾದ , 7795323108 / 7795343108 / 7795393108 ಯನ್ನು ಸಂಪರ್ಕಿಸ ಬಹುದಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಾಸನ್ ಹ್ಯುಮೇನಿಟೇರಿಯನ್ ಸರ್ವಿಸ್ ಎಂಬ ಸ್ವಯಮ್ ಸೇವಾ ಸಂಸ್ಥೆಯ ವೈದ್ಯರಾದ ಸಯ್ಯಾದ್ ಮೋಸಿನ್, ಡಾ. ಹಬೀಬ್ ರೆಹಮೆನ್, ಎಸ್.ಎಸ್. ಪಾಷಾ, ಅಮ್ಯುನಿ ಪಾಷಾ, ಸದ್ರೂಲ್ಲಾ ಖಾನ್ ಹಾಗೂ ಅತೀಖುರ್ ರೆಹಮನ್ ಇತರರು ಉಪಸ್ಥಿತರಿದ್ದರು.