ಹಾಸನ: ಪಿಪಿಇ ಕಿಟ್ ಧರಿಸಿದರೂ ಕೊರೋನಾ ರೋಗಿಗಳನ್ನು ನೋಡಲು ನಿರ್ಬಂಧ ಏರಿದ ಹಿನ್ನಲೆಯಲ್ಲಿ ಹಾಸನ ಜಿಲ್ಲಾ ಸರಕಾರಿ ಕೋವಿಡ್ ಆಸ್ಪತ್ರೆ ಮುಂದೆ ಸಂಬAಧಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಶಾಂತಿ ಕಾಪಾಡಲು ಪೊಲೀಸರು ಬರಬೇಕಾಯಿತು.
ಕೊರೋನಾ ಪಾಸಿಟಿವ್ ಬಂದ ರೋಗಿಗಳನ್ನು ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗುತ್ತಿದ್ದು, ರೋಗಿಗಳನ್ನು ನೋಡಲು ಪ್ರತಿನಿತ್ಯ ಸಂಬAಧಿಕರು ಪಿಪಿಇ ಕಿಟ್ ಧರಿಸಿ ಬಂದು ಹೋಗುತ್ತಾರೆ. ಆದರೇ ಬಂದವರು ಸುಮ್ಮನೆ ಹೋಗದೆ ಒಳಗೆ ಬಂದಾಗ ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದು ಬಿಡಲಾಗುತ್ತದೆ ಎಂಬುದು ಒಂದು ಕಡೆ ಆದರೇ, ರೋಗಿಯ ಸಂಬAಧಿಕರು ನೋಡಲು ಒಬ್ಬರು ಬಾರದೆ ನಾಲ್ಕೆöÊದು ಜನರು ಬರುತ್ತಿರುವುದು ರೋಗಿಗೆ ಚಿಕಿತ್ಸೆ ಕೊಡಲು ಸಮಸ್ಯೆ ಉಂಟಾಗುತ್ತದೆ ಎಂಬುದು ಮತ್ತೊಂದು ಕಾರಣವಾಗಿದೆ. ಇದರಿಂದಲೇ ಶುಕ್ರವಾರದಂದು ರೋಗಿಗಳನ್ನು ನೋಡಲು ದಿಡೀರ್ ನಿಷೇಧ ಮಾಡಲಾಗಿದೆ ಎಂಬುದು ಆರೋಪವಾಗಿದೆ. ರೋಗಿಗಳ ನೋಡಲು ಸಂಬAಧಿಕರಿಗೆ ನಿರ್ಬಂಧ ಏರಿದಾಗ ಪಿಪಿಇ ಕಿಟ್ ಹಾಕಿಕೊಂಡೆ ಘೋಷಣೆ ಕೂಗಿದಾಗ ಸ್ಥಳಕ್ಕೆ ಬಂದ ಪೊಲೀಸರು ಹೊರ ಕಳುಹಿಸಿದರು.
ಇನ್ನು ರೋಗಿಗಳ ನೋಡಲು ಬಂದ ಸಂಬAಧಿಕರು ಮಾತನಾಡಿ, ನೀವು ಆಸ್ಪತ್ರೆ ಒಳಗೆ ಸೋಂಕು ರೋಗಿಯನ್ನು ನೋಡಲು ಹೋಗಿ ಇಡೀ ಕುಟುಂಬಕ್ಕೆ ಸೋಂಕು ಹರಡುತ್ತೀರಿ ಎಂದು ಕಾರಣ ಹೇಳಿ ಪಿಪಿಇ ಕಿಟ್ ಹಾಕಿಕೊಂಡು ಕೊರೋನಾ ರೋಗಿಯನ್ನು ನೋಡಲು ಹೋದರೇ ನಮ್ಮನ್ನು ಬುಧವಾರ ಸಂಜೆಯಿAದ ಒಳ ಹೋಗಲು ತಡೆಯುತ್ತಿದ್ದಾರೆ. ಆಗಾಗ್ಗೆ ವಾಂತಿ ಮಾಡಿಕೊಳ್ಳುತ್ತಾರೆ. ಅದನ್ನು ನೋಡಲುಲ ಅಲ್ಲಿ ಯಾವ ನರ್ಸ್ಗಳು ಬರುವುದಿಲ್ಲ. ನಾವು ಹೋಗೋಣ ಎಂದರೆ ನಮ್ಮನ್ನು ಬಿಡುತ್ತಿಲ್ಲ ಎಂದು ದೂರಿದರು. ನಾವೇನೂ ಗಲಾಟಿ ಮಾಡಿದರೂ ಜಿಲ್ಲಾಡಳೀತದ ಆದೇಶವಾಗಿದೆ ಎಂದು ನೆನ್ನೆ ಸಂಜೆಯಿAದ ಯಾರನ್ನು ಒಳ ಬಿಡುತ್ತಿಲ್ಲ. ತುಂಬ ಸಿರಿಯಸ್ ಇರುವವರ ಕಡೆಯವರ ಒಬ್ಬರನ್ನು ಒಳಗೆ ಬಿಟ್ಟರೆ ಸಾಕು. ಹೀಗ ಬಿಡುತ್ತಿಲ್ಲ. ಆದರೇ 60 ವರ್ಷ ಆದವರಿಗೆ ಬಿಡುವುದಾಗಿ ಹೇಳಿದ್ದಾರೆ ಎಂದರು. ನಾವು ಮೆಡಿಸನ್ ತರಲು ಹೊರ ಬಂದಾಗ ಮತ್ತೆ ಒಳ ಬಿಡಲಿಲ್ಲ ಎಂಬುದು ಸಂಬAಧಿಕರ ಅಳಲು ಆಗಿದೆ.