ತೊಳಲು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಕೋವೀಡ್ ೧೯ ಕುರಿತು ಗ್ರಾಮಮಟ್ಟದ ಸಪ್ತಾಹ ಸಭೆ ಶಾಸಕರ ನೇತೃತ್ವದಲ್ಲಿ ನಡೆಯಿತು.
ಇತ್ತೀಚೆಗೆ ಕೋವೀಡ್ ಅಲೆ ವ್ಯಾಪಕವಾಗಿ ಹರಡುತ್ತಿದೆ.ಅದರಲ್ಲೂ ಗ್ರಾಮೀಣ ಭಾಗಗಳಲ್ಲೇ ಹೆಚ್ಚು ಕಾಣಿಸುತ್ತಿರುವ ಹಿನ್ನಲೆಯಲ್ಲಿ ತೊಳಲು ,ಹುನಗುನಹಳ್ಳಿ,ದಬ್ಬೆ,ಚೀಕನಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಸದಸ್ಯರು,ಪಿಡಿಓ ಹಾಗೂ ಗ್ರಾಪಂ ಅಧ್ಯಕ್ಷರಿಗೆ ಶಾಸಕ ಕೆ ಎಸ್ ಲಿಂಗೇಶ್ ಅವರ ಅಧ್ಯಕ್ಷತೆಯಲ್ಲಿ ಕೋವೀಡ್ ೧೯ ವಿರುದ್ಧ ಜಾಗೃತಿ ಗ್ರಾಮಮಟ್ಟದ ಸಭೆ ನಡೆಸಲಾಯಿತು.
ಈ ಸಂರ‍್ಭದಲ್ಲಿ ಮಾತನಾಡಿದ ಶಾಸಕ ಕೆ ಎಸ್ ಲಿಂಗೇಶ್ ಹೊರಜಿಲ್ಲೆ ಹಾಗೂ ರಾಜ್ಯದ ಹಲವು ಕಡೆ ಕೆಲಸ ಮಾಡುವ ಕರ‍್ಮೀಕರು ಹಾಗೂ ಊರಿನ ಜನರು ಕೋವೀಡ್ ಹಿನ್ನಲೆಯಲ್ಲಿ ಈಗ ತಮ್ಮ ಊರಿನ ಕಡೆ ಬರುತ್ತಿದ್ದು,ಹೊರಗಡೆಯಿಂದ ಬಂದವರಿಂದಲೇ ಕೋವೀಡ್ ಸಾಂಕ್ರಾಮಿಕ ರೋಗ ಹೆಚ್ಚಾಗಿ ಸಮುದಾಯಗಳಿಗೆ ಹಬ್ಬುತ್ತಿದೆ. ಇಂತಹ ಸಮಯದಲ್ಲಿ ಆಶಾ ಕರ‍್ಯರ‍್ತೆಯರು,ಅಂಗನವಾಡಿ ಕರ‍್ಯರ‍್ತೆಯರು ಪ್ರತೀ ಮನೆ ಬಾಗಿಲಿಗೆ ತೆರಳಿ ಅಲ್ಲಿ ಬೇರೆ ಊರಿಂದ ಬಂದವರ ವಿಳಾಸ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬೇಕು.ಪ್ರತೀ ಗ್ರಾಮಗಳಲ್ಲೂ ೫೦ ಕ್ಕಿಂತ ಹೆಚ್ಚು ಜನರು ಬೇರೆ ಊರಿಂದ ಬರುತ್ತಿದ್ದು ಬಂದಂತವರ ಮೇಲೆ ಯಾವುದೇ ರೀತಿಯಲ್ಲಿ ಮುಲಾಜಿಲ್ಲದೆ ಅಂತವರನ್ನು ಹೊಂ ಕ್ವಾರೆಂಟೇನ್ ನಲ್ಲಿ ಇಡಬೇಕು ಎಂದು ಆಶಾ ಕರ‍್ಯರ‍್ತೆ ಯರು ಹಾಗೂ ಅಂಗನವಾಡಿ ಶಿಕ್ಷಕರಿಗೆ ತಿಳಿಸಿದರು.
ಹೋಂ ಕ್ವಾರೆಂಟೇನ್ ಗೆ ಒಪ್ಪದವರ ಮೇಲೆ ಪೋಲೀಸ್ ಇಲಾಖೆಗೆ ದೂರು ದಾಖಲಿಸಿ ಅವರನ್ನು ಕ್ವಾರೆಂಟೇನ್ ಮಾಡಲಾಗುವುದು.
ಸ್ವಚ್ಚತೆಗೆ ಹೆಚ್ಚಿನ ಆದ್ಯತೆಯನ್ನು ಪ್ರತೀ ಗ್ರಾಮ ಪಂಚಾಯತಿ ಯಲ್ಲಿ ನೀಡಬೇಕು ಎಂದು ಸೂಚಿಸಿದರು.
ಅಭಿವೃದ್ಧಿ ಅಧಿಕಾರಿ ಆರತಿ ಮಾತನಾಡಿ ಈಗಾಗಲೇ ನಮ್ಮ ವ್ಯಾಪ್ತಿಯಲ್ಲಿ ಸುಮಾರು ೭೬ ಜನರಿಗೆ ಪಾಸಿಟಿವ್ ಕಾಣಿಸಿಕೊಂಡಿದ್ದು ಅವರನ್ನು ಕ್ವಾರೆಂಟೇನ್ ಮಾಡಲಾಗಿದ್ದು,ಎರಡನೇ ಸಂರ‍್ಕ ಹೊಂದಿದ್ದವರನ್ನು ಹೊಂ ಕ್ವಾರೆಂಟೇನ್ ನಲ್ಲಿರಲು ಸೂಚಿಸಲಾಗಿದೆ. ಪ್ರತೀ ಗ್ರಾಮದಲ್ಲೂ ಸಹ ಸ್ಯಾನಿಟೈಜರ್ ಮಾಡಿಸಲಾಗುತ್ತಿದೆ ಎಂದರು.
ಈ ಸಂರ‍್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷೆ ರಂಜಿತಾ ಹಾಜರಿದ್ದರು.
ಂಣಣಚಿಛಿhmeಟಿಣs ಚಿಡಿeಚಿ
