ಹಾಸನ: ಶನಿವಾರ ಮತ್ತು ಭಾನುವಾರದಂದು ಎರಡು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಇರುವುದರಿಂದ ಈದಿನದಲ್ಲಿ ಯಾವ ವ್ಯಾಪಾರ ವಹಿವಾಟು ಮಾಡುವಾಗಿಲ್ಲ. ಮೊದಲೆ ಆಹಾರ ಪದಾರ್ಥಗಳನ್ನು ಕೊಡು ಶೇಖರಣೆ ಮಾಡಲು ಜನರು ರಸ್ತೆಗಳಿದು ಮುಗಿ ಬಿದ್ದಿದ್ದರು. ಇನ್ನು ಎಲ್ಲಾ ರಸ್ತೆಗಳಲ್ಲು ಟ್ರಾಫೀಕ್ ಜಾಮ್ ದೃಶ್ಯ ಕಂಡು ಬಂದರೆ, ಕೆಲವರು ಜನಜಂಗುಳಿ ನೋಡಿ ವ್ಯಾಪಾರ ಮಾಡದೆ ಖಾಲಿ ಕೈಲಿ ಮನೆಗೆ ವಾಪಸ್ ಹೋಗುತ್ತಿದ್ದರು.
ಕೊರೋನಾ ಎಂಬ ಮಹಾಮಾರಿ ಹರಡಿ ಪ್ರತಿದಿನ ಸಾವು ನೋವುಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ವಾರಕ್ಕೆ ಮೂರು ದಿನ ವ್ಯಾಪಾರ ವಹಿವಾಟು ನಡೆಸಲು ಜಿಲ್ಲಾಡಳಿತ ಸೂಚನೆ ನೀಡಿದ ಹಿನ್ನಲೆಯಲ್ಲಿ ಶುಕ್ರವಾರದಂದು ಹಾಸನ ನಗರದ ಸುತ್ತ ಸಾರ್ವಜನಿಕರ ಓಡಾಟ ಹೆಚ್ಚಾಗಿಯೆ ಇತ್ತು. ಇನ್ನು ವಾಹನದ ಓಡಾಟದಲ್ಲೂ ಕೂಡ ಗಣನೀಯವಾಗಿ ಏರಿಕೆ ಕಂಡು ಬಂದಿತು. ಇನ್ನು ನಗರದ ಮಹಾವೀರ ವೃತ್ತಮ ನಗರ ಬಸ್ ನಿಲ್ದಾಣ, ಸಾಲಗಾಮೆ ರಸ್ತೆ, ರಿಂಗ್ ರಸ್ತೆ, ಸಂತೇಪೇಟೆ ರಸ್ತೆ, ಎಂ.ಜಿ. ರಸ್ತೆ, ಬಿ.ಎಂ. ರಸ್ತೆಯಲ್ಲಿ ವಾಹನಗಳ ಓಡಾಟವು ಹೆಚ್ಚಾಗಿ ಆಗಾಗ್ಗೆ ಟ್ರಾಫೀಕ್ ಸಮಸ್ಯೆ ಕಾಣಿಸುತಿತ್ತು. ಸ್ಥಳದಲ್ಲಿದ್ದ ಪೊಲೀಸರಂತು ವಾಹನಗಳ ಟ್ರಾಫೀಕ್ ಜಾಮ್ ತಡೆಯಲು ಹರಸಾಹಸಪಟ್ಟರು. ನಗರ ಬಸ್ ನಿಲ್ದಾಣದ ಒಳಗೆ ತರಕಾರಿ ವ್ಯಾಪಾರ ಮಾಡಲು ಜನರು ನೂಕುನುಗ್ಗಲಿನಲ್ಲಿ ನಿಂತಿದ್ದರು. ಈವೇಳೆ ಸಾಮಾಜಿಕ ಅಂತರ ಯಾವುದು ಇರಲಿಲ್ಲ. ಅನೇಕರು ಮಾಸ್ಕ್ ಗಳನ್ನು ಅರ್ಧಬರ್ದ ಹಾಕಿಕೊಂಡಿದ್ದರೇ ಕೆಲವರಂತು ಮಾಸ್ಕ್ ಪೂರ್ಣ ತೆಗೆದಿದ್ದರು. ಮಾರ್ಷಲ್ಸ್ ತಂಡ ಜಾಗೃತಿ ಮೂಡಿಸುತ್ತಿದ್ದರೂ ಜನರು ಕೇರೆ ಮಾಡುತ್ತಿರಲಿಲ್ಲ. ಅನೇಕ ಪ್ರಾವೀಜನ್ ಸ್ಟೋರ್ ಗಳಲ್ಲು ಕೂಡ ಸಾಮಾಜಿಕ ಅಂತರ ಇಲ್ಲದೆ ವ್ಯಾಪಾರ ಮಾಡುತ್ತಿದ್ದರು. ಶುಕ್ರವಾರದ ದಿನ ನೋಡಿದರೇ ಕೊರೋನಾ ಹರಡುವ ತಾಣ ಎಂಬAತೆ ಕೆಲ ವ್ಯಾಪಾರದ ಸ್ಥಳಗಳು ಕಂಡು ಬಂದಿತು. ಜನಜಂಗುಳಿ ದೃಶ್ಯ ನೋಡಿದ ಅನೇಕ ವೃದ್ಧರು ವ್ಯಾಪಾರ ಮಾಡದೇ ವಾಪಸ್ ಮನೆಗೆ ಹೋಗುತ್ತಿದ್ದರು. ಮನೆ ಹತ್ತಿರದಲ್ಲಿಯೇ ತರಕಾರಿ ವ್ಯಾಪಾರದ ಅಂಗಡಿಗಳಿದ್ದರೂ ದೂರದ ಸ್ಥಳಗಳಿಗೆ ಬಂದು ವ್ಯಾಪಾರ ಮಾಡುತ್ತಿದ್ದರು. ವಾರದ ನಾಲ್ಕು ದಿನ ಲಾಕ್ ಡೌನ್ ಜೊತೆಗೆ ಮೂರು ದಿನ ಬೆಳಿಗ್ಗೆ ವ್ಯಾಪಾರ ಮಾಡಲು ಅವಕಾಶ ಕೊಟ್ಟಿರುವ ಬಗ್ಗೆಯೂ ಸಲ್ಪ ಗಮನವಹಿಸಬೇಕು. ಇಲ್ಲವಾದರೇ ಕೊರೋನಾ ಸೋಂಕು ಕಡಿಮೆ ಆಗುವುದು ಕಷ್ಟವಾಗಬಹುದು ಎಂಬುದು ಕೆಲ ಸಾರ್ವಜನಿಕರ ಅಭಿಪ್ರಾಯವಾಗಿದೆ.