ಮಹಾಮಾರಿ ಸೋಂಕಿಗೆ ಕಡಿವಾಣ ಸ್ವಚ್ಚತೆಗೆ ಜೊತೆಗೆ ಸಾಮಾಜಿಕ ಅಂತರವನ್ನು ಕಾದುಕೊಳ್ಳುತ್ತಿರುವುದರಿಂದ ಮಾತ್ರ ಸಾಧ್ಯ : ಎ.ಟಿ. ರಾಮಸ್ವಾಮಿ

 ರಾಮನಾಥಪುರ;- ಕೊರೊನಾ ಎಂಬ ಮಹಾಮಾರಿ ಸೋಂಕು ಕರಿನರಳು ಗ್ರಾಮೀಣ ಭಾಗದ ಪ್ರತಿ ಹಳ್ಳಿಗಳ ಭಾಗದ ಜನರನ್ನು ಅವರಿಸುತ್ತಿದೆ. ಈ ಸೋಂಕಿಗೆ ಕಡಿವಾಣ ಹಾಕಬೇಕಾದರೆ ಸ್ವಚ್ಚತೆಗೆ ಅದ್ಯತೆ ಕೊಡುವುದರ ಜೊತೆಗೆ ಸಾಮಾಜಿಕ ಅಂತರವನ್ನು ಕಾದುಕೊಳ್ಳುತ್ತಿರುವುದರಿಂದ ಮಾತ್ರ ಸಾಧ್ಯ ಎಂಬುದನ್ನು ಜನರು ಅರಿಯಬೇಕಿದೆ ಎಂದು ಶಾಸಕ ಡಾ. ಎ.ಟಿ. ರಾಮಸ್ವಾಮಿ ಹೇಳಿದರು.



 ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ನಂತರ ಸುಬ್ರಹ್ಮಣ್ಯನಗರದಲ್ಲಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಮನೆ ಅರೈಕೆ ವ್ಯವಸ್ಥೆ ಇಲಲ್ಲದಿದ್ದರೆ ತಾಲ್ಲೂಕಿನಲ್ಲಿರುವ ಕೋವಿಡ್ ಸೋಂಕಿತರು ತಾಲ್ಲೂಕು ಅಡಳಿತ ತೆರೆದಿರುವ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ದಾಖಲಾಗುವ ಮೂಲಕ ಸೋಂಕು ಇತರರಿಗೆ ಹರಡದಂತೆ ಸಾಮಾಜಿಕ ಜವಾಬ್ದಾರಿ ಅರಿಯಬೇಕು. ಸೋಂಕಿತರು ಮನೆಯಲ್ಲಿ ಉಳಿದಿರುವುದರಿಂದ ಕುಟುಂಬದ ಇತರೆ ಸದಸ್ಯರುಗಳೂ ಸೊಂಕು ಹರಡುವ ಸಾಧ್ಯತೆ ಇದೆ. ಕಾರಣ ತಮ್ಮ-ತಮ್ಮ ಮನೆಗಳಲ್ಲಿ ಕೆಲವೊಮ್ಮೆ ಮೂಲಭೂತ ಸೌಲಭ್ಯಗಳು ಕೊರತೆ ಇರುತ್ತದೆ. ಅದ್ದರಿಂದ ಸೋಂಕಿತರು ಹಿಂಜರಿಕೆ ಮಾಡದೇ ಕೋವಿಂಡ್ ಕೇರ್ ಸೆಂಟರ್‌ಗೆ ದಾಖಲಾಗುವಂತೆ ಮನವಿ ಮಾಡಿದರು.

ಕೋವಿಡ್ ಕೇರ್ ಸೆಂಟರ್‌ನಲ್ಲಿ ಉತ್ತಮ ಗುಣಮಟ್ಟದ ಪೌಷ್ಠಿಕಾಂಷದ ಹೊಂದಿರುವ ಅಹಾರಗಳು ದೊರಕುತ್ತಿದ್ದು, ಯಾವುದೇ ಕೊರತೆ ಅಗದಂತೆ ಎಚ್ಚರವಹಿಸಲಾಗಿದೆ. ಸೋಂಕಿತರು ಯಾರು ದೈರ್ಯಗೆಡುವ ಅಗತ್ಯವಿಲ್ಲ. ಉತ್ತಮ ಚಿಕಿತ್ಸೆ ದೊರೆಕುತ್ತಿದೆ. ಅದಷ್ಟು ಬೇಗ ಎಲ್ಲರೂ ಗುಣಮುಕರಾಗುತ್ತಿದ್ದಾರೆ. ಸೋಂಕಿತರು ಮನೆಯಿಂದ ಹೊರಬರದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಹಾಗೂ ಮನೆಯಲ್ಲೇ ಐಸೊಲೇಷನ್ ಅಗುವ ಸೋಂಕಿತರಿಗೆ ತಪ್ಪದೇ ಸೀಲ್ ಹಾಕಬೇಕು. ಕೇರ್ ಸೆಂಟರ್‌ಗಳಲ್ಲಿ ಎಲ್ಲಿಯೂ ಲೋಪವಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.

ಸರ್ಕಾರದಿಂದ ನಿಗಧಿ ಮಾಡಿರುವ ವೇಳೆಯಲ್ಲಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ತರಕಾರಿ ಅಂಗಡಿಯವರು, ಖಾಸಗಿ ಕ್ಲಿನಿಕ್‌ಗಳು, ಮೆಡಿಕಲ್ ಶಾಪ್‌ಗಳು, ದಿನಸಿ ಅಂಗಡಿಗಳು, ಹಣ್ಣು ಮುಂತಾದ ಅಂಗಡಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ವಿಫಲವಾಗುತ್ತಿವೆ. ಇದರಿಂದ ಕೋವಿಡ್ ಸೋಂಕು ದಿನೇ ದಿನೇ ವೇಗವಾಗಿ ಹರಡುತ್ತಿದ್ದು ಯಾರೂ ಸಹ ಅನಾವಶ್ಯಕವಾಗಿ ಮನೆಯಿಮದ ಹೊರಬರಬಾರದು ಸರ್ಕಾರ ಯಾವ್ಯಾವ ಅಂಗಡಿಗಳನ್ನು ತೆರೆಯಬಹುದು ಎಂಬ ನಿರ್ದೇಶನ ನೀಡಿದೆಯೋ ಅಂತಹವರು ಮಾತ್ರ ಅಂಗಡಿಗಳನ್ನು ತೆರೆದು ಸಮಯಕ್ಕೆ ಸರಿಯಾಗಿ ಸಮಾನಾಂತರ ಕಾಯ್ದುಕೊಂಡು ಮತ್ತು ತಪ್ಪದೇ ಮಾಸ್ಕ್ ಹಾಕಿಕೊಂಡು ವ್ಯಾಪಾರ ವಹಿವಾಟು ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದರು.

 ವಾರದಲ್ಲಿ ಮೂರು ದಿವಸ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ತರಕಾರಿ, ದಿನಸಿ, ಕಟ್ಟಡ ಸಾಮಗ್ರಿಗಳು ಹಾಗೂ ಕೃಷಿ ಸಂಬAಧಿತ ವಸ್ತುಗಳ ಅಂಗಡಿಗಳನ್ನು ತೆರಯಲು ಅವಕಾಶ ನೀಡಿದೆ. ಬೇರೆ ಅಂಗಡಿ ಮುಗ್ಗಟ್ಟುಗಳು ತೆರೆದಿದ್ದಲ್ಲಿ ಮುಲಾಜಿಲ್ಲದೇ ದಂಡ ವಿಧಿಸಲಾಗುವುದು ದಂಡ ವಿಧಿಸಿದ ನಂತರವೂ ಬಾಗಿಲು ತೆರೆದರೆ ಅಂಗಡಿಯನ್ನು ಇಂತಿಷ್ಟು ತಿಂಗಳು ಸೀಲ್ ಮಾಡಲಾಗುವುದು ಎಂದು ಎಚ್ಚರಿಸಿದರು. ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು ಹೊರಗಿನಿಂದ ಬಂದವರ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿ ಆಯಾ ದಿನದ ಮಾಹಿತಿಯನ್ನು ಸಂಬAಧ ಪಟ್ಟವರಲ್ಲಿ ತಿಳಿಸಬೇಕು ಎಂದರು.

ತಹಸಿಲ್ದಾರ್ ವೈ.ಎಂ. ರೇಣುಕುಮಾರ್, ಅರೋಗ್ಯದಿಕಾರಿ ಡಾ. ಸ್ವಾಮೀಗೌಡ, ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ತಾಲ್ಲೂಕು ಅರಣ್ಯ ವಲಯಾಧಿಕಾರಿ ಅರುಣ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಚ್.ಇ. ವಿಜಯಕುಮಾರ್, ಕಾರ್ಯದರ್ಶಿ ಎಚ್.ಸಿ. ನಿಂಗಣ್ಣ ಮುಂತಾದವರು ಇದ್ದರು.

Post a Comment

Previous Post Next Post