ಕೋವಿಡ್-19 ನಿಮಿತ್ತ ಗುತ್ತಿಗೆ ಆಧಾರದ ಮೇಲೆ ವೈದ್ಯಾಧಿಕಾರಿಗಳ ನೇಮಕ

 ಸರ್ಕಾರಿ ಆದೇಶ ಸಂಖ್ಯೆ ಆಕುಕ ೨೮೨ ಹೆಚ್.ಎಸ್.ಹೆಚ್ ೨೦೨೧ ದಿನಾಂಕ:-೧೭/೦೪/೨೦೨೧ ರಲ್ಲಿ ಆದೇಶಿಸಿರುವಂತೆ ತಾಲ್ಲೂಕು ಆಸ್ಪತ್ರೆಗಳಲ್ಲಿ ರಚಿಸಲಾದ ಐಸಿಯುಗಳು ಮತ್ತು ಆಮ್ಲಜನಕ ಬೆಂಬಲಿತ ೬ ಹಾಸಿಗೆಗಳನ್ನು ಕಾರ್ಯಗತಗೊಳಿಸಲು ೦೬ ತಿಂಗಳ ಅವಧಿಗೆ  ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ  ವೈದ್ಯಾಧಿಕಾರಿಗಳನ್ನು (ಎಂ.ಬಿ.ಬಿ.ಎಸ್ ವೈದ್ಯರು) ನೇಮಿಸಿಕೊಳ್ಳಲು ಅನುಮತಿ ನೀಡಿ ಆದೇಶಿಸಿರುವ ಪ್ರಯುಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.



ಆಸಕ್ತಿಯುಳ್ಳ ಅಭ್ಯರ್ಥಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಹಾಸನ ಇಲ್ಲಿ ಬಯೋಡೇಟಾ ಮತ್ತು ವಿದ್ಯಾರ್ಹತೆಗೆ ಸಂಬAಧಿಸಿದ ಮೂಲ ದಾಖಲೆ ಮತ್ತು ಜೆರಾಕ್ಸ್ ಪ್ರತಿಗಳೊಂದಿಗೆ            ದಿನಾಂಕ:೧೯/೦೫/೨೦೨೧ ರಿಂದ  ದಿನಾಂಕ:-೨೯/೦೫/೨೦೨೧ ರವರೆಗೆ ಪ್ರತಿ ದಿನ ಬೆಳಿಗ್ಗೆ ೧೧.೦೦ ಗಂಟೆಗೆ ದಾಖಲಾತಿಗಳ ಪರಿಶೀಲನೆಗೆ ಹಾಜರಾಗಲು ಸೂಚಿಸಿದೆ.


ಹುದ್ದೆಯ ವಿವರ : ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ

ಹುದ್ದೆಗಳ ಸಂಖ್ಯೆ : ೨೧

ವಿದ್ಯಾರ್ಹತೆ : ಎಂ.ಬಿ.ಬಿ.ಎಸ್

ಮಾಸಿಕ ಗೌರವಧನ: ೬೦,೦೦೦/-

ನಿಬAಧನೆ ಮತ್ತು ಷರತ್ತುಗಳು:-

೧. ಸಿಬ್ಬಂದಿಗಳನ್ನು ಕೋವಿಡ್-೧೯ ನಿರ್ವಹಣೆಗೆ ಬಳಸಿಕೊಳ್ಳಲಾಗುವುದು.

೨. ವೇತನವನ್ನು ನಿಯಮಾನುಸಾರ ಪಾವತಿಸಲಾಗುತ್ತದೆ.

೩. ಅಭ್ಯರ್ಥಿಗಳು ೪೦ ವರ್ಷಗಳ ವಯೋಮಿತಿಯೊಳಗೆ ಇರತಕ್ಕದ್ದು.

೪. ಆಯ್ಕೆಯ ಅಂತಿಮ ನಿರ್ಧಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಹಾಸನ ಇವರದ್ದಾಗಿರುತ್ತದೆ.

೫. ಸದರಿ ಹುದ್ದೆಗಳ ನೇಮಕಾತಿಯು ತಾತ್ಕಾಲಿಕವಾಗಿರುತ್ತದೆ.



Post a Comment

Previous Post Next Post