ಸಕಲೇಶಪುರ ಸಮೀಪ ಹಸಡೆ ಗ್ರಾಮದ ಬಳಿ ರಾತ್ರಿ ಬೆಂಗಳೂರು ಕಾರವಾರ ಎಕ್ಸ್ಪ್ರೆಸ್ ರೈಲಿನ ಎಂಜಿನ್ ಸಿಕ್ಕಿ ಕಾಡಾನೆ ಸಾವು.
ರಾತ್ರಿ ಸುಮಾರು 11:15 ಸಮಯದಲ್ಲಿ ಈ ಘಟನೆ ಸಂಬಂಧಿಸಿದೆ. ಹಸಿಡೆ ಬಳಿಯ ವಾಹನ ಕ್ರಾಸಿಂಗ್ ಗೇಟ್ ಬಳಿ ಈ ಘಟನೆ ನಡೆದಿದ್ದು ಗೇಟ್ ಕಾವಲುಗಾರ ರೈಲು ಬರುವ 10 ನಿಮಿಷದ ಮೊದಲು ಗೇಟ್ ಮುಚ್ಚುವಾಗ ಕಾಡಾನೆ ಈ ಸ್ಥಳದಲ್ಲಿ ಕಂಡು ಬಂದಿಲ್ಲ ಆದರೆ ರೈಲು ಬರುವ ಸಂದರ್ಭದಲ್ಲಿ ಏಕಾಏಕಿ ಕಾಡಾನೆ ಕಾಣಿಸಿಕೊಂಡಿದೆ.
ರೈಲು ಗೇಟಿನ ಎರಡು ಕಡೆ ಆಳವಾದ ಚರಂಡಿಗಳಿದ್ದ ಪರಿಣಾಮ ಕಾಡಾನೆ ರೈಲಿನಿಂದ ತಪ್ಪಿಸಿ ಕೊಳ್ಳಲು ಸಾದ್ಯ ವಾಗಿಲ್ಲ.
ರೈಲಿನ ಸದ್ದು.ಹಾರನ್ ಸದ್ದು ಮತ್ತು ರೈಲಿನ ಬಳೆಕನ್ನು ಖಂಡ ಕಾಡಾನೆ ಗಾಬರಿಗೊಂಡು ರೈಲು ಟ್ರಾಕ್ ಮದ್ಯೆ ಸಿಕ್ಕಿಹಾಕಿಕೊಂಡು ಸಾವನೊಪ್ಪಿದೆ.
ಸುಮಾರು ಸಮಯದ ನಂತರ ಕಾಡಾನೆ ಶವವನ್ನು ಕ್ರೇನ್ ಮೂಲಕ ತೆರವು ಗೊಳಿಸಿ ರೈಲು ಸಂಚಾರಕ್ಕೆ ದಾರಿ ಸುಗಮ ಗೊಳಿಸಲಾಯಿತು.
Tags
ಸಕಲೇಶಪುರ