ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಜನ್ಮ ದಿನದ ಅಂಗವಾಗಿ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಂದೆ ಜೆಡಿಎಸ್ ಪಕ್ಷದ ಮುಖಂಡರಾದ ಅಗಿಲೆ ಯೋಗೀಶ್ ರವರು ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್ ನೀಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ಕೊರೋನಾ ವಿರುದ್ಧ ಜಾಗೃತಿ ಜಾಗೃತಿ ಮೂಡಿಸುತ್ತಿರುವ ೧೫ ಜನ ವಾರಿರ‍್ಸ್ ಗಳನ್ನು ಗುರುತಿಸಿ ಅವರನ್ನು ಸಾಮಾಜಿಕ ಅಂತರದಲ್ಲಿ ನಿಲ್ಲಿಸಿ ಪ್ರತಿನಿತ್ಯ ಉಪಾಯೋಗಿಸುವ ಅಕ್ಕಿ, ಮಸಾಲೆ ಇತರೆ ಪದಾರ್ಥವನ್ನು ವಿತರಿಸಿದರು. ನಂತರ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ನಾಯಕರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ೮೯ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಕೊರೋನಾ ವಾರಿರ‍್ಸ್ ಗಳಿಗೆ ಆಹಾರದ ಕಿಟ್ ನ್ನು ನೀಡಲಾಗುತ್ತಿದೆ. ಅವರಿಗೆ ದೇವರು ಆರೋಗ್ಯ, ಅಯಾಸ್ಸು, ನೆಮ್ಮದಿ ಹಾಗೂ ಅಧಿಕಾರ ನೀಡಿ ಜನರ ಸೇವೆಗೆ ಅವಕಾಶ ಕೊಡಬೇಕೆಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.
ಇದೆ ವೇಳೆ ಜೆಡಿಎಸ್ ಮುಖಂಡರಾದ ದಸ್ತಗೀರ್ ಇತರರು ಪಾಲ್ಗೊಂಡಿದ್ದರು.
Tags
ಹಾಸನ