ಹಾಸನ: ರಾಜ್ಯದಲ್ಲಿ ಆವರಿಸಿರುವ ಎರಡನೇ ಅಲೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ಸರಕಾರವು ಸಂಪೂರ್ಣ ವಿಫಲವಾಗಿದ್ದು, ಪ್ರಧಾನಿ ಕೊಟ್ಟ ಹಾಸನ ಜಿಲ್ಲೆಯನ್ನು ಕಡೆಗಣಿಸಬೇಡಿ ಬ್ಲಾಕ್ ಫಂಗಸ್ ಚಿಕಿತ್ಸೆಗಾಗಿ ಜಿಲ್ಲೆಯಲ್ಲೆ ಒಂದು ಸೆಂಟರ್ ತೆಗೆಯುವಂತೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮನವಿ ಮಾಡಿ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ಕೊರೋನಾ ಹೆಚ್ಚಾಗುತ್ತಿದ್ದು, ಅದರಲ್ಲೂ ಹಾಸನ ಜಿಲ್ಲೆಯಲ್ಲಿ ಪ್ರತಿದಿನ ೨ ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗಿ, ದಿನ ೨೦ಕ್ಕೂ ಹೆಚ್ಚು ಜನರು ಸಾವನಪ್ಪುತ್ತಿದ್ದಾರೆ. ಶೇಕಡ ೪೫ ಇದ್ದು, ಕಡಿಮೆ ಆಗಿರುವುದಿಲ್ಲ. ಜೊತೆಗೆ ಬ್ಲಾಕ್ ಫಂಗಸ್ ಬಂದು ಜಿಲ್ಲೆಯಲ್ಲಿ ನಾಲ್ವರು ಸಾವನಪ್ಪಿದ್ದಾರೆ. ಇಲ್ಲಿಂದ ಬೆಂಗಳೂರು ಆಸ್ಪತ್ರೆಗೆ ಪಂಗಸ್ ರೋಗಿ ಹೋಗಿದ್ದು, ಬೆಳಿಗ್ಗೆಯಿಂದ ರಾತ್ರಿ ೧೦ರ ವರೆಗೂ ಆಸ್ಪತ್ರೆಗೆ ಸೇರಿಸಿಕೊಳ್ಳದ ಮಟ್ಟದಲ್ಲಿ ಸರಕಾರವಿದೆ ಎಂದು ದೂರಿದರು. ಪತ್ತೆ ಹಚ್ಚದೆ ಇಷ್ಟೊಂದು ಬಂದಿದೆ. ಪತ್ತೆ ಹಚ್ಚಿದರೇ ಹೆಚ್ಚಾಗಬಹುದು. ಹಾಸನ, ಮಡಿಕೇರಿ, ಚಿಕ್ಕಮಗಳೂರು ಸೆಂಟರ್ ಜಾಗವಾಗಿದೆ. ಮುಖ್ಯಮಂತ್ರಿ ಇರುವ ಊರಿಗೆ ಸೆಂಟರ್ ಸೇರಿ ರಾಜ್ಯದ ೭ ಕಡೆಗಳಲ್ಲಿ ಸೆಂಟರ್ ಮಾಡಿ ಏಕೆ ನಮ್ಮ ಜಿಲ್ಲೆಯನ್ನು ಕಡೆಗಣಿಸಿದ್ದಾರೆ ಎಂದು ಪ್ರಶ್ನೆ ಮಾಡಿದರು. ಪ್ರಧಾನಿಯನ್ನು ಕೊಟ್ಟ ಜಿಲ್ಲೆಯನ್ನು ಕಡೆಗಣಿಸಬೇಡಿ. ಕೂಡಲೇ ಇಲ್ಲೊಂದು ಸೆಂಟರ್ ತೆಗೆಯಬೇಕು ಎಂಬುದು ನನ್ನ ಒತ್ತಾಯವಾಗಿದೆ ಎಂದರು.
ಕೊರೋನಾ ನಿರ್ವಹಣೆಗಾಗಿ ಕೇಂದ್ರ ಸರಕಾರವು ಕಳೆದ ತಿಂಗಳೇ ಹಣವನ್ನು ರಾಜ್ಯ ಸರಕಾರಕ್ಕೆ ಬಿಡುಗಡೆ ಮಾಡಿತ್ತು. ಆದರೇ ಒಂದುವರೆ ತಿಂಗಳುಗಳ ಕಾಲ ತಡಮಾಡಿ ಇಂದು ೧೦ ಕೋಟಿ ರೂಗಳನ್ನು ಕೊಟ್ಟಿದೆ. ಇತರೆ ಜಿಲ್ಲೆಗಳಿಗೆ ೨೦ ಕೋಟಿ ರೂ ನೀಡಿದೆ. ಕೊರೋನಾ ಪಾಸಿಟಿವ್ ಪ್ರಕರಣದಲ್ಲಿ ಹಾಸನ ಜಿಲ್ಲೆ ರಾಜ್ಯದಲ್ಲಿಯೇ ೨ನೇ ಸ್ಥಾನದಲ್ಲಿದೆ. ಹೊಳೆನರಸೀಪುರ ತಾಲೂಕಿನ ೨೧೦ ಹಳ್ಳಿಗಳಲ್ಲಿ ಪ್ರತಿ ಹಳ್ಳಿಯಲ್ಲೂ ೧೦ ರಿಂದ ೧೫ ಜನರಿಗೆ ಸೋಂಕು ತಗಲಿದೆ. ಇದರಲ್ಲಿ ೧೬ ಹಳ್ಳಿಗಳಲ್ಲಿ ಮಾತ್ರ ಪಾಸಿಟಿವ್ ಕೇಸು ಇರುವುದಿಲ್ಲ. ಇನ್ನು ೫ ದಿನಗಳಲ್ಲಿ ಪ್ರತಿ ಹಳ್ಳಿಯಲ್ಲೂ ಕಡ್ಡಾಯವಾಗಿ ಕೊರೋನಾ ಪರೀಕ್ಷೆ ಮಾಡಿಸಲು ತೀರ್ಮಾನಿಸಿದ್ದೇನೆ. ಇನ್ನು ಆಶಾ ಕಾರ್ಯಕರ್ತೆಯರ ಸಂಬಳ ನೀಡಿರುವುದಿಲ್ಲ ಎಂದು ಬೇಸರವ್ಯಕ್ತಪಡಿಸಿದರು.
ಕೊರೋನಾ ಬಂದAತಹ ರೋಗಿಗಳಿಗೆ ಸರಿಯಾಗಿ ಔಷಧಿ ಕೊಡದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಆತಂಕವ್ಯಕ್ತಪಡಿಸದರು. ನಾನು ಗಲಾಟಿ ಮಾಡಿದ ಮೇಲೆ ಹಾಸನಕ್ಕೆ ೪೦ ವಿಂಟಿಲೇಟರ್ ಕೊಟ್ಟಿದ್ದಾರೆ. ಆದರೇ ಇಲ್ಲಿನ ಸ್ಥಳೀಯ ಶಾಸಕರಾದ ಪ್ರೀತಮ್ ಜೆ. ಗೌಡ ನಾನು ಕೊಡಿಸಿದ್ದು ಅಂತಾರೆ! ಯಾರಾದರೂ ಆಗಲಿ ಕೊಡಿಸಿದರೇ ಸಾಕು ಎಂದು ಕುಟುಕಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತು ನಾನು ಲೆಟರ್ ಬರೆದಿದ್ದೇವು. ಆದರೇ ಈಗ ಲೆಕ್ಕಕ್ಕೆ ಇಲ್ಲವಾಗಿದೆ ಎಂದು ಹೇಳಿದರು.
ಕೊರೋನಾ ಪಾಸಿಟಿವ್ ಬಂದು ಚನ್ನರಾಯಪಟ್ಟಣದ ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಸ್ವಾಮಿಗೌಡ ರವರು ಸಾವನಪ್ಪಿದಾಗ ಸರಕಾರದಿಂದ ೧ ಲಕ್ಷ ರೂಗಳ ಮಾತ್ರ ಪರಿಹಾರ ನೀಡಿದ್ದು, ಇನ್ನು ೫ ಲಕ್ಷ ರೂಗಳನ್ನು ಕೊಡಬೇಕು ಹಾಗೂ ಪತ್ರಕರ್ತರು ಸಂಕಷ್ಟದಲ್ಲಿ ಇದ್ದು, ಎಲ್ಲಾ ಪತ್ರಕರ್ತರಿಗೂ ತಿಂಗಳಿಗೆ ೧೦ ಸಾವಿರ ರೂಗಳ ಕೊಟ್ಟು, ೨೦ ಲಕ್ಷದ ವಿಮೆ ಮಾಡಿಸಬೇಕು ಎಂದು ಆಗ್ರಹಿಸಿದರು