ಹಾಸನ: ಒಂದು ಕಡೆ ಕೊರೋನಾ ಮಹಾಮಾರಿ ಆವರಿಸಿ ಹಾಸನ ಜಿಲ್ಲೆಯ ಜನರು ಸಂಕಷ್ಟದಲ್ಲಿ ಸಮಸ್ಯೆ ಎದುರಿಸುತ್ತಿರುವಾಗ ಸರಕಾರವು ದಿಡೀರನೇ ೫೨೬೮ ಬಿಪಿಎಲ್ ಕಾರ್ಡ್ ರದ್ದು ಮಾಡಿರುವುದು ಬಡ ಜನರನ್ನು ಮತ್ತಷ್ಟು ಪಾತಳಕ್ಕೆ ತಳ್ಳಿದಂತಾಗಿದೆ
ಕೊರೋನಾ ಎರಡನೇ ಅಲೆ ಬಂದ ಮೇಲೆ ಪ್ರತಿದಿನ ಸಾವು-ನೋವುಗಳು ಹೆಚ್ಚಾಗುತ್ತಿದೆ. ಇನ್ನು ಲಾಕ್ ಡೌನ್ ಜಾರಿಗೆ ಬಂದು ಕೆಲಸಕ್ಕೆ ಬ್ರೇಕ್ ಹಾಕಲಾಗಿದೆ. ದುಡಿಮೆ ಇಲ್ಲದೇ ಜನರು ಒಂದು ಹೊತ್ತು ಊಟಕ್ಕೂ ಪರದಾಡುವ ಪರಿಸ್ಥಿತಿ ಇರುವಾಗ ದಿಡೀರನೇ ಸಾವಿರಾರು ಜನರ ಬಿಪಿಎಲ್ ಕಾರ್ಡ್ ರದ್ದು ಮಾಡಿರುವುದಾಗಿ ಇನ್ನಷ್ಟು ಸಂಕಷ್ಟಕ್ಕೆ ನೂಕಿದಂತಾಗಿದೆ.
ಇದೆ ವೇಳೆ ಆಹಾರ ಮತ್ತು ನಾಗರೀಕ ಸರಬರಾಜು ಉಪನಿರ್ದೇಶಕ ಪುಟ್ಟಸ್ವಾಮಿ ಮಾಧ್ಯಮಕ್ಕೆ ಮಾಹಿತಿ ನೀಡಿ, ವಾರ್ಷಿಕ ಆಧಾಯ ೧ ಲಕ್ಷದ ೨೦ ಸಾವಿರ ರೂ ಒಳಗೆ ಇದ್ದರೇ ಅಂತಹವರ ಪಡಿತರ ಬಿಪಿಎಲ್ ಕಾರ್ಡ್ ರದ್ದಾಗುವುದಿಲ್ಲ. ಅದಕ್ಕಿಂತ ಮೀರಿ ಆದಾಯ ನಮೋದಿಸಿದ್ದವರ ಕಾರ್ಡನ್ನು ಮಾತ್ರ ರದ್ದು ಮಾಡಲಾಗಿದೆ. ಆಧಾಯ ತೆರಿಗೆ ಕಟ್ಟುವವರ ಸುಮಾರು ೩೪೯೨ ಕಾರ್ಡನ್ನು ಜಿಲ್ಲೆಯಲ್ಲಿ ತಡೆ ಮಾಡಲಾಗಿದೆ. ಇನ್ನು ಆಧಾಯ ದೃಢಿಕರಣದಲ್ಲಿ ಯಾರಾದರೂ ೧ ಲಕ್ಷದ ೨೦ ಸಾವಿರಕ್ಕಿಂತ ಹೆಚ್ಚು ನಮೋದಿಸಿದ್ದವರ ೧೭೭೬ ಕಾರ್ಡನ್ನು ತೆಗೆದು ಎಪಿಎಲ್ ಕಾರ್ಡಿಗೆ ಸಿಗುವ ಸೌಲಭ್ಯ ಸಿಗಲಿದೆ ಎಂದರು. ಹಾಸನ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಇರುವವರು ಒಟ್ಟು ೪ ಲಕ್ಷ ೫೩ ಸಾವಿರ ಜನರು ಇದ್ದು, ಮೇ ತಿಂಗಳ ಪಡಿತರವನ್ನು ಶೇಕಡ ೭೮ ರಷ್ಟು ಈಗಾಗಲೇ ಕೊಡಲಾಗಿದೆ. ಆಯಾ ತಿಂಗಳಲ್ಲಿ ತಿಂಗಳ ಅಂತ್ಯದವರೆಗೂ ಆಹಾರ ದಾನ್ಯವನ್ನು ಕೊಡಬೇಕು ಎಂಬ ಸೂಚನೆ ಕೊಡಲಾಗಿದೆ. ಕೇಂದ್ರದಿAದ ೫ ಕೆಜಿ ಅಕ್ಕಿ ನೀಡಿದರೇ ರಾಜ್ಯ ಸರಕಾರದಿಂದ ೨ ಕೆಜಿ ಅಕ್ಕಿ, ೩ ಕೆಜಿ ರಾಗಿ. ಪ್ರತಿ ವ್ಯಕ್ತಿಗೆ ೭ ಕೆಜಿ ಅಕ್ಕಿ ೩ ಕೆಜಿ ರಾಗಿ ಹಾಗೂ ಪ್ರತಿ ಕಾರ್ಡಿಗೆ ೨ ಕೆಜಿ ಗೋದಿ ಕೊಡಲಾಗುವುದು. ಬಿಪಿಎಲ್ ಕಾರ್ಡ್ ಹೊಂದಿರುವ ಜಿಲ್ಲೆಯ ಎಲ್ಲಾವರ ಬಗ್ಗೆ ನಿಗಾವಹಿಸಿ ರದ್ದು ಮಾಡಲು ಸರಕಾರ ಸೂಚಿಸಿರುವುದರಿಂದ ಪರಿಶೀಲನೆ ಮಾಡುವುದಾಗಿ ಹೇಳಿದರು.