ಆರ್ಥಿಕ ಸಂಕಷ್ಟದಲ್ಲಿರುವ ಮುದ್ರಣಾಕಾರರಿಗೂ ಪರಿಹಾರ ನೀಡಿ

ಹಾಸನ: ಕೊರೊನಾ ಎರಡನೇ ಅಲೆಯಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ೧,೨೫೦ ಕೋಟಿ ರೂ . ಸಹಾಯಧನವನ್ನು ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪರವರು ಬಿಡುಗಡೆ ಮಾಡಿದ್ದಾರೆ. ಈ ಲಾಕ್ ಡೌನ್ ನಿಂದ ಹಲವು ಅಸಂಘಟಿತ ವಲಯಗಳಿಗೆ, ರೈತರಿಗೆ, ದಿನಗೂಲಿ ನೌಕರರಿಗೆ, ಬಡವರು - ನಿರ್ಗತಿಕರಿಗೆ ತೀವ್ರ ಸಂಕಷ್ಟವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಸುಮಾರು ೧,೨೫೦ ಕೋಟಿ ರೂಪಾಯಿಗೂ ಅಧಿಕ ವಿಶೇಷ ಪರಿಹಾರ ಪ್ಯಾಕೇಜ್ ನ್ನು ವಿವಿಧ ವರ್ಗಗಳ ಹಿತರಕ್ಷಣೆಗೆ ಬಿಡುಗಡೆ ಮಾಡಿರುವುದು ಸ್ವಾಗತಾರ್ಹ.


      ಆದರೆ ಕಳೆದ ೨೦೨೦ ರಲ್ಲಿ ಮಹಾಮಾರಿ ಕೊರೋನಾ ವೈರಸ್ ಕಾಣಿಸಿಕೊಂಡ ಸಮಯದಲ್ಲಿಯೂ ಜಿಲ್ಲೆಯ ಎಂಟು ತಾಲ್ಲೂಕು ಕೇಂದ್ರಗಳಲ್ಲಿರುವ ಮುದ್ರಣಾಲಯಗಳು ಸರ್ಕಾರದ ಆದೇಶದ ಪ್ರಕಾರ ಬಾಗಿಲು ಬಂದ್ ಮಾಡಿದ ಪರಿಣಾಮ ಮುದ್ರಣಾಲಯಗಳನೇ ಅವಲಂಬಿಸಿ ಜೀವನ ನಿರ್ವಹಿಸುತ್ತಿದ್ದ ಇಡೀ ಕಾರ್ಮಿಕವರ್ಗ ಕಳೆದ ಒಂದು ವರ್ಷ ಮತ್ತು ೨೦೨೧ ನೇ ಪ್ರಸಕ್ತ ವರ್ಷದಲ್ಲಿಯೂ ಸಹ ಕೆಲಸವಿಲ್ಲದೇ ಜೀವನ ನಿರ್ವಹಣೆ ಮಾಡುವುದಕ್ಕೆ ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ ಇದು ತಮಗೆ ತಿಳಿಯದ ವಿಚಾರವೇನಲ್ಲ . ಮುದ್ರಣಾಲಯಗಳನ್ನು ನಡೆಸುವುದು ಎಷ್ಟು ಸಾಹಸದ ಕೆಲಸ ಅದನ್ನು ಮಾಡಿದವರಿಗೇ ಗೊತ್ತು, ಅದರ ಕಷ್ಟ ಮುದ್ರಣಾಲಯ ಸ್ಥಾಪಿಸಲು ಮಳಿಗೆ ಬಾಡಿಗೆ, ಜೊತೆಗೆ ಮುಂಗಡ ಹಣ, ವಿದ್ಯುತ್ ಛಕ್ತಿ ಅಳವಡಿಕೆಗೆ ವೆಚ್ಚ, ಮುದ್ರಣ ಕೆಲಸಗಾರರ ನೇಮಕ ಅವರಿಗೆ ಮಾಸಿಕ ವೇತನ, ಮುದ್ರಣ ಯಂತ್ರ ಖರೀದಿಸಲು ಹಣಕಾಸು ವ್ಯವಸ್ಥೆಗೆ ಬ್ಯಾಂಕ್‌ಗಳಿAದ ಸಾಲ ಪಡೆದಿದ್ದು ಲಾಕ್ ಡೌನ್ ಕಾರಣದಿಂದ ನಾವುಗಳು ಬ್ಯಾಂಕ್ ನಲ್ಲಿ ಮಾಡಿರುವ ಸಾಲದ ಮೇಲಿನ ಬಡ್ಡಿ ಪಾವತಿಸಲು ಸಾಧ್ಯವಾಗುತ್ತಿಲ್ಲ. 

      ೨೦೨೧ ರ ವರ್ಷದಲ್ಲಿ ಮುದ್ರಣಾಲಯಗಳ ಮಾಲೀಕರು ಕೆಲಸವೇ ಇಲ್ಲದೆ ಮುದ್ರಣಾಲಯಗಳ ಮಳಿಗೆಗಳಿಗೆ ಬಾಡಿಗೆ ಮತ್ತು ವಿದ್ಯುತ್ ಬಿಲ್, ಕಾರ್ಮಿಕರಿಗೆ ವೇತನ ನೀಡಲು ಸಾಲ ಮಾಡಿಕೊಂಡಿರುವ ಮುದ್ರಣಾಲಯಗಳ ಮಾಲೀಕರ ಪರಿಸ್ಥಿತಿ ಶೋಚನೀಯವಾಗಿದೆ. ಇದು ಒಂದು ವ್ಯಥೆಯಾದರೆ ಇನ್ನೂ ನಮ್ಮಗಳನ್ನೇ ನಂಬಿರುವ ನಮ್ಮ ಕುಟುಂಬ ನಿರ್ವಹಣೆ ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಮಾಡಿರುವ ಸಾಲದ ಹೊರೆ ನಮ್ಮನ್ನು ಭಾದಿಸುತ್ತಿದ್ದು, ಜೀವನ ಮತ್ತು ಉದ್ಯಮ ನಡೆಸಿಕೊಂಡು ಬರಲು ಬಹಳ ಕಷ್ಟವಾಗುತ್ತಿದೆ. ಇದರ ಪರಿಣಾಮ ಜಿಲ್ಲೆಯ ಸುಮಾರು ಮುದ್ರಣ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಇವರ ಜೊತೆಗೆ ಮುದ್ರಣಾಲಯ ನಡೆಸುವವರು ಅಕ್ಷರಶಃ ಬೀದಿ ಪಾಲಾಗಿದ್ದಾರೆ. ಈ ವರ್ಷದಲ್ಲಿ ಕೊರೋನಾ ಮಹಾ ಮಾರಿಯ ಎರಡನೇ ಅಲೆಯ ಪರಿಣಾಮ ಇಡೀ ಜಗತ್ತಿನಲ್ಲಿ ಅದರಲ್ಲೂ ಭಾರತ ದೇಶದಲ್ಲಿ ಅದರಲ್ಲೂ ನಮ್ಮ ಕರ್ನಾಟಕದ ಮೂಲೆಮೂಲೆಗಳಲ್ಲಿ ಸಾವಿರಾರು ಮಂದಿ ಜನರು ಜೀವ ತೆತ್ತಿದ್ದಾರೆ. ಇಂತಹ ಸಂದಿಗ್ಧತೆಯ ಸನ್ನಿವೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಲಾಕ್ ಡೌನ್ ಪರಿಣಾಮ ಎಲ್ಲಾ ವರ್ಗದ ಬಡವರು ಕಾರ್ಮಿಕರು ಒಟ್ಟಾರೆ ಹೇಳುವುದಾದರೆ ಎಲ್ಲರೂ ಸಂಪೂರ್ಣ ಸಂಕಷ್ಟದ ಸಮಯಲ್ಲಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ರಾಜ್ಯದ ಮುಖ್ಯ ಮಂತ್ರಿಗಳು ಪ್ಯಾಕೇಜ್ ಘೋಷಿಸಿದ್ದು, ಇದರಲ್ಲಿ ಮುದ್ರಣ ಕ್ಷೇತ್ರವನ್ನು ಕಡೆಗಣಿಸಿರುವುದು ಖೇದಕರ ಸಂಗತಿಯಾಗಿದೆ. ಮುದ್ರಣ ಕ್ಷೇತ್ರವು ಸಾವಿರಾರು ಮಂದಿ ಕಾರ್ಮಿಕರುಗಳಿಗೆ ಜೀವನಾಶ್ರಯದ ಕೇಂದ್ರಗಳಾಗಿವೆ ಈ ಕ್ಷೇತ್ರವು ದುಡಿಯುವ ವರ್ಗಕ್ಕೆ ಕೆಲಸ ನೀಡಿರುತ್ತದೆ ಜೊತೆಗೆ ಈ ಕ್ಷೇತ್ರದಲ್ಲಿ ಮಾಲೀಕರು ಮತ್ತು ಕಾರ್ಮಿಕರು ಎಂಬ ಬೇಧವಿಲ್ಲ ಇಂತಹ ಕ್ಷೇತ್ರದಲ್ಲಿ ಯಾರೂ ಕೂಡ ಶ್ರೀಮಂತರು ಇಲ್ಲ ಇದ್ದರೂ ಬೆರಳೆಣಿಕೆಯಷ್ಟು ಉಳಿದ ಸಹಸ್ರಾರು ಮಂದಿ ಇತ್ತ ಮಾಲೀಕರು ಅಲ್ಲ. ಅತ್ತ ಕಾರ್ಮಿಕರು ಅಲ್ಲದ ತ್ರಿಶಂಕು ಪರಿಸ್ಥಿತಿ ಯಲ್ಲಿರುವ ಮುದ್ರಣ ಕ್ಷೇತ್ರಕ್ಕೆ ಈ ಬಾರಿಯೂ ಸರ್ಕಾರ ಯಾವುದೇ ಪ್ಯಾಕೇಜ್ ಘೋಷಿಸದೇ ಅನ್ಯಾಯವೆಸಗಿದೆ. ಕಳೆದ ಬಾರಿಯೂ ಯಾವುದೇ ಪರಿಹಾರ ನೀಡದ ಪರಿಣಾಮ ಈ ಕ್ಷೇತ್ರದಲ್ಲಿರುವವರು ಮತ್ತೆ ಸಂಪೂರ್ಣ ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದು ಈ ವರ್ಗಕ್ಕೆ ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿರುವ ವಿಶೇಷ ಪ್ಯಾಕೇಜ್ ನಲ್ಲಿ ಹಾಸನ ಜಿಲ್ಲೆಯ ಮುದ್ರಣಾಕಾರರಿಗೆ ಪರಿಹಾರ ನೀಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ


Post a Comment

Previous Post Next Post