ದಾಯಾದಿ ಕಲಹಕ್ಕೆ 4 ಬಲಿ ಕುಟುಂಬ ಸದಸ್ಯರ ಆಕ್ರಂದನ: ಸ್ಥಳಕ್ಕೆ ಎಸ್ಪಿ ಭೇಟಿ ಪರಿಶೀಲನೆ

ಹೊಳೆನರಸೀಪುರ/ಹಾಸನ: ಕೇವಲ ಎರಡು ಕಾಲು ಎಕರೆ ಜಮೀನು ವಿಚಾರಕ್ಕೆ ದಾಯಾದಿಗಳ ನಡುವೆ ಉಂಟಾದ ಕಲಹ ವಿಕೋಪಕ್ಕೆ ಹೋಗಿ ನಾಲ್ವರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಮಾರಗೋಡನಹಳ್ಳಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಒಂದು ಕಡೆಯ ರವಿಕುಮಾರ್(35),ಮಂಜೇಶ್ (35), ಮಲ್ಲೇಶ್ (62) ಮತ್ತೊಂದು ಕಡೆಯ
ಪಾಪಣ್ಣ ಕೊಲೆಯಾದವರು. ಮೊದಲು ರವಿ, ಮಂಜೇಶ್ ಮತ್ತು ಮಲ್ಲೇಶ್ ಅವರ ಜೀವ ತೆಗೆದ ಪಾಪಣ್ಣ ಕಡೆಗೆ ತಾನೂ ಹತ್ಯೆಯಾಗಿದ್ದಾನೆ.

ಘಟನೆ ಹಿನ್ನೆಲೆ: 
ಹೊಳೇನರಸೀಪುರ ತಾಲ್ಲೂಕು ಕಸಬಾ ಹೋಬಳಿ ಮಾರಗೌಡನಹಳ್ಳಿ ಗ್ರಾಮದ ಸರ್ವೆ ನಂ 80/138 ರಲ್ಲಿ ಒಟ್ಟು 17.24 ಎಕರೆ ಜಮೀನಿದೆ. ಇದನ್ನು ಪಾಲು ಮಾಡಿಕೊಳ್ಳುವ ವಿಚಾರದಲ್ಲಿ ಮಲ್ಲೇಶ ಮತ್ತು ಸ್ವಾಮಿಗೌಡ ಎಂಬುವರ ನಡುವೆ ಗಲಾಟೆ ನಡೆಯುತ್ತಿತ್ತು.
ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.
ಒಟ್ಟು ಜಮೀನಿನ ಪೈಕಿ 2.1/4 ಎಕರೆ ಜಮೀನು ಊರಿನ ಪಕ್ಕದಲ್ಲೇ ಇದ್ದು ಈ ಜಮೀನಿನ ವಿಚಾರವಾಗಿ ಕಲಹ ನಡೆಯುತ್ತಲೇ ಇತ್ತು. ಸ್ವಾಮಿಗೌಡ ಮತ್ತು ಅವರ ಕಡೆಯವರಾದ ಪ್ರದೀಪ, ಯೋಗೇಶ ಎಂಬುವರು ಆಗಾಗ್ಗೆ ಬಂದು ಜಮೀನು ಉಳುಮೆ ಮಾಡಿ ತೊಂದರೆ ಕೊಡುತ್ತಿದ್ದರು ಎನ್ನಲಾಗಿದೆ.
ಈ ನಡುವೆ ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಜಮೀನು ಉಳುಮೆ ಮಾಡಲು ಮಲ್ಲೇಶ, ಈತನ ಪುತ್ರ ಮಂಜೇಶ ಮತ್ತು ಅಳಿಯ ರವಿಕುಮಾರ ಎಂಬುವರು ತೆರಳಿದ್ದರು.
ಇದನ್ನು ತಿಳಿದ ಪಾಪಣ್ಣಿ, ಯೋಗೇಶ, ಪ್ರದೀಪ ಎಂಬುವರು ಸ್ಥಳಕ್ಕೆ ಬಂದು ಗಲಾಟೆ ಮಾಡಿದ್ದಾರೆ. ಇದು ವಿಕೋಪಕ್ಕೆ ಹೋಗಿ ಪಾಪಣ್ಣಿ ಎಂಬಾತ ಭರ್ಜಿಯಿಂದ ಮೂವರಿಗೆ ಚುಚ್ಚಿದ್ದಾನೆ. ಗಂಭೀರ ಗಾಯಗೊಂಡ ಮೂವರನ್ನು ತಾಲೂಕು ಆಸ್ಪತ್ರೆಗೆ ತರಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ತೀರ್ಪಿಗೂ ತಲೆಭಾಗಲಿಲ್ಲ:
ಎರಡು ಕಾಲು ಎಕರೆ ಜಮೀನು ವಿವಾದ ಹಿನ್ನೆಲೆಯಲ್ಲಿ ಸೋದರ ಸಂಬAಧಿಗಳಾದ ಮಲ್ಲೇಶ್ ಮತ್ತು ಪಾಪಣ್ಣ ಕುಟುಂಬಗಳ ನಡುವೆ ಕಳೆದ ಕೆಲ ವರ್ಷಗಳಿಂದ ಜಗಳ ನಡೆಯುತ್ತಿತ್ತು. ಇದು ಪೊಲೀಸ್ ಠಾಣೆ ಮೆಟ್ಟಿಲೇರಿ ನಂತರ ನ್ಯಾಯಾಲಯದವರೆಗೂ ಹೋಗಿತ್ತು.
ಬಳಿಕ ನಡೆದ ಸುದೀರ್ಘ ವಿಚಾರಣೆಯಲ್ಲಿ ಮಲ್ಲೇಶ್ ಕುಟುಂಬದ ಪರ ತೀರ್ಪು ಹೊರ ಬಿದ್ದಿತ್ತು. ಇದರಿಂದ ಪಾಪಣ್ಣ ಹಾಗೂ ಇತರರು ಜಮೀನು ನಮ್ಮಂತೆ ಆಗಲಿಲ್ಲವಲ್ಲ ಎಂದು ಆಕ್ರೋಶಗೊಂಡಿದ್ದರು. ಹೇಗಾದರೂ ಮಾಡಿ ನಮ್ಮ ವಿರೋಧಿಗಳನ್ನು ಮುಗಿಸಿದರೆ ಜಮೀನು ನಮಗೇ ಸೇರಲಿದೆ ಎಂದು ಎಣಿಸಿದ ಪಾಪಣ್ಣ ಮತ್ತು ಇತರರು, ಏಕಾಏಕಿ ಮೂವರ ಮೇಲೆ ಮಾರಕಾಸ್ತçಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ನಂತರ ತೀವ್ರವಾಗಿ ಗಾಯಗೊಂಡಿದ್ದ ಪಾಪಣ್ಣಿ ಸಹ ಮೃತಪಟ್ಟಿದ್ದಾನೆ. ಅಲ್ಲಿಗೆ ಜಮೀನು ವಿವಾದ ನಾಲ್ವರ ಕೊಲೆಯಲ್ಲಿ ಅಂತ್ಯವಾಗಿದೆ.
ನಾಲ್ವರ ಕೊಲೆ ಪ್ರಕರಣ ಅಕ್ಷರಶಃ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ಇದರಿಂದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಸುದ್ದಿ ತಿಳಿಯುತ್ತಿದ್ದಂತೆಯೇ ಎಸ್ಪಿ ಆರ್.ಶ್ರೀನಿವಾಸ್‌ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬAಧ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

Previous Post Next Post