ಶ್ರವಣಬೆಳಗೊಳ:ಕೋವಿಡ್-19 ಸೋಂಕು ಎರಡನೇ ಬಾರಿ ವಿಶ್ವದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಇಂತಹ ಸಂದರ್ಭದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನತೆ ತಮ್ಮ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳಬೇಕು. ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಸೋಂಕು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಗಲಿರುಳು ಶ್ರಮಿಸುತ್ತಿದ್ದು, ಪ್ರತಿಯೊಬ್ಬರೂ ಆರೋಗ್ಯದ ದೃಷ್ಟಿಯಿಂದ ಎಚ್ಚರಿಕೆಯಲ್ಲಿ ಇದ್ದು ಕರೊನಾ ಅಲೆಯನ್ನು ತಡೆಯಲು ಸರ್ಕಾರ ಮತ್ತು ಕರೊನಾ ಸೇನಾನಿಗಳಿಗೆ ಸಹಕರಿಸುವುದು ನಮ್ಮೆಲ್ಲರ ಸಾಮಾಜಿಕ ಕಳಕಳಿಯಾಗಬೇಕು.
ಎಂದಿನAತೆ ವಿಶ್ವದ ಎಲ್ಲಾ ರಾಷ್ಟçಗಳಿಗೆ ಮತ್ತು ಭಾರತ ದೇಶಕ್ಕೆ ಉತ್ತಮ ಆರೋಗ್ಯಕರವಾದ ಪರಿಸ್ಥಿತಿ ಉಂಟಾಗಲಿ ಎಂದು ಗೊಮಟೇಶ್ವರ ಭಗವಾನ್ ಶ್ರೀಶ್ರೀಶ್ರೀ ಬಾಹುಬಲಿ ಸ್ವಾಮಿಯವರಲ್ಲಿ ಪ್ರಾರ್ಥಿಸುತ್ತೇವೆ. ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಸಂದೇಶ ನೀಡಿದರು.
Tags
ಚನ್ನರಾಯಪಟ್ಟಣ