ಅರೇಹಳ್ಳಿಯಲ್ಲಿ ಕೊರೊನಾ ಹೆಚ್ಚಳ: ನಿಯಂತ್ರಣಕ್ಕೆ ಸಕಲ ಸಿದ್ದತೆ: ಪ್ರಜ್ವಲ್

 ಬೇಲೂರು: ತಾಲ್ಲೂಕಿನ ಮಲೆನಾಡು ಭಾಗವಾದ ಅರೇಹಳ್ಳಿ ಹೋಬಳಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದು ನಿಯಂತ್ರಣಕ್ಕೆ ತ್ವರಿತಗತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದ ಪ್ರಜ್ವಲ್‍ರೇವಣ್ಣ ಅಧಿಕಾರಿಗಳಿಗೆ ಸೂಚಿಸಿದರು.

ಅರೇಹಳ್ಳಿಗೆ ಭೇಟಿ ನೀಡಿ ಅಲ್ಲಿನ ಕೋವಿಡ್ ಸೆಂಟರ್ ಹಾಗೂ

ಸಮುದಾಯ ಆಸ್ಪತ್ರೆಯಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ

ನಂತರ ಮಾತನಾಡಿದ ಅವರು, ಅರೇಹಳ್ಳಿ ಭಾಗದಲ್ಲಿ ಶುಚಿತ್ವದ

ಪ್ರಶ್ನೆ ಏನೆ ಇದ್ದರೂ ಅಪ್ಪಟ ಮಲೆನಾಡು ಪ್ರದೇಶವಾಗಿರುವುದರಿಂದ ಕಾಯಿಲೆ ಉಲ್ಪಣಕ್ಕೆ ಅವಕಾಶ ಆಗಲಿದೆ.ಅರೇಹಳ್ಳಿಗೆ ಅಗತ್ಯವಿರುವ ಆಂಬ್ಯುಲೆನ್ಸ್ ಹಾಗೂ ಕೋವಿಡ್‍ಗೆ ಸಂಬಂಧಿಸಿದ ಆಕ್ಸಿಜನ್ ಸಿಲಿಂಡರ್ ಇನ್ನಿತರ ಸವಲತ್ತನ್ನು ನೀಡಲಾಗುತ್ತಿದೆ. 

ಈ ಸಂಬಂಧ ಈಗಾಗಲೇ ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ

ನಡೆಸಲಾಗಿದೆ ಎಂದು ತಿಳಿಸಿದರು.

ವೈದ್ಯ ಸಿಬ್ಬಂದಿ, ಪೊಲೀಸರು, ಆಶಾಕಾರ್ಯಕರ್ತೆಯರು,

ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಆಡಳಿತ ನೌಕರರು ಜೀವದ ಹಂಗು ತೊರೆದು ಕೊರೊನಾ ನಿಯಂತ್ರಣಕ್ಕೆ ಶ್ರಮವಹಿಸುತ್ತಿದ್ದಾರೆ. 

ಅವರಿಗೆ ಸಾರ್ವಜನಿಕರೂ ಸಹಕಾರ ನೀಡಬೇಕಿದೆ. ಕೆಲವೊಂದು ನಿಯಮಗಳನ್ನು ಸ್ವತಃ ಪಾಲಿಸಬೇಕಿದೆ ಎಂದು ಸಲಹೆ ನೀಡಿದರು. ಸಮುದಾಯ ಆಸ್ಪತ್ರೆಗೆ

ಸಂಬಂಧಪಟ್ಟ ದಾದಿಯರು, ನೌಕರರು ಹಾಗೂ ವೈದ್ಯರೊಂದಿಗೆ

ಸಮಾಲೋಚನೆ ನಡೆಸಿದರು. ಶಾಸಕ ಕೆ.ಎಸ್.ಲಿಂಗೇಶ್, ಎಸಿ

ಗಿರೀಶನಂದನ್, ತಹಸೀಲ್ದಾರ್ ಎನ್.ವಿ.ನಟೇಶ್, ತಾ.ಪಂ.ಇಒ

ರವಿಕುಮಾರ್, ಜಿ.ಪಂ.ಸದಸ್ಯೆ ಲತಾಮಂಜೇಶ್ವರಿ, ವೈದ್ಯಾಧಿಕಾರಿ

ವಿಜಯ್, ಡಾ.ನರಸೇಗೌಡ , ಸ್ತ್ರೀ ಮತ್ತು ಪ್ರಸೂತಿ ತಜ್ಞೆ ಹಾಗೂ ಆಡಳಿತಾಧಿಕಾರಿ ಡಾ  ಮಮತಾ,  ನಟರಾಜ್ ಇತರರು

ಇದ್ದರು.


ಪೋಟೋ: 

ಬೇಲೂರು ತಾಲ್ಲೂಕು ಅರೇಹಳ್ಳಿಗೆ ಸಂಸದ ಪ್ರಜ್ವಲ್‍ರೇವಣ್ಣ

ಭೇಟಿ ನೀಡಿ ಕೊರೊನಾ ನಿರ್ವಹಣಾ ಸೆಂಟರ್ ಅನ್ನು ಪರಿಶೀಲಿಸಿ ಆರೋಗ್ಯ ಸಿಬ್ಬಂದಿ ಜತೆ ಚರ್ಚೆ ನಡೆಸಿದರು

Post a Comment

Previous Post Next Post