ಸರ್ಕಾರಿ ಸ್ವಾಯತ್ತ ಕಾಲೇಜುಗಳ ಪಟ್ಟಿಯಲ್ಲಿ ಕಲಾ ಕಾಲೇಜಿಗೆ 7 ನೇ ಸ್ಥಾನ

ಕೊರೋನಾ ಸೋಂಕು, ಸಾವಿನ ಸುದ್ದಿಗಳ ನಡುವೆ ಕೆಲವೊಂದು ಸಂತೋಷದ ಸಾಧನೆಗಳು ನಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆ ಬಿತ್ತುತ್ತಿವೆ. ಈಗ ಶಿಕ್ಷಣ ಕ್ಷೇತ್ರದಿಂದ ಅಂತದೊAದು ಖುಷಿ ಸುದ್ದಿ ಹೊರಬಿದ್ದಿದೆ.



 ಸರ್ಕಾರ ಎಜುಕೇಶನ್ ವರ್ಲ್ಡ್ನಲ್ಲಿ ಬಿಡುಗಡೆ ಮಾಡಿರುವ ದೇಶದ ಉನ್ನತ ಶ್ರೇಣಿಯ ಸರ್ಕಾರಿ ಸ್ವಾಯತ್ತ ಕಾಲೇಜುಗಳ ಪಟ್ಟಿಯ ಮೊದಲ 10 ಸ್ಥಾನದಲ್ಲಿ ಹಾಸನ ಜಿಲ್ಲೆಯ ಕಲಾ ಹಾಗೂ ವಾಣಿಜ್ಯ ಕಾಲೇಜು ಸ್ಥಾನ ಪಡೆದಿದೆ. ನಮ್ಮ ರಾಜ್ಯದ ಮೂರು ಕಾಲೇಜುಗಳು ಇಲ್ಲಿವೆ, ಬೆಂಗಳೂರಿನ ನೃಪತುಂಗ ರಸ್ತೆಯ ಸರ್ಕಾರಿ ವಿಜ್ಞಾನ ಕಾಲೇಜು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಹಾಸನದ ಸರ್ಕಾರಿ ಕಲಾ, ಪದವಿ ಕಾಲೇಜು ದೇಶದಲ್ಲಿರುವ ಏಳನೇ ಅತ್ಯುತ್ತಮ ಸ್ವಾಯತ್ತ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾದರೆ, ಕಾರವಾರದ ಕಲಾ ಮತ್ತು ವಿಜ್ಞಾನ ಕಾಲೇಜು ಹತ್ತನೇ ಸ್ಥಾನದಲ್ಲಿದೆ, ಇದರೊಂದಿಗೆ ಶೈಕ್ಷಣಿಕ ಕ್ಷೇತ್ರದಲ್ಲಿನ ರಾಜ್ಯದ ಸಾಧನೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.





ಕಾಲೇಜಿನಲ್ಲಿರುವ ಮೂಲಭೂತ ಸೌಕರ್ಯ, ಶೈಕ್ಷಣಿಕ ವಾತಾವರಣ, ಗುಣಮಟ್ಟದ ಶಿಕ್ಷಣ ಬೋಧಕ ವರ್ಗದ ಸಾಮರ್ಥ್ಯ, ಬೋಧಕ ವರ್ಗಧ ಕ್ಷೇಮಾಭಿವೃಧ್ಧಿ, ಪಠ್ಯಕ್ರಮದ ಶಿಕ್ಷಣ ವ್ಯವಸ್ಥೆ ವಿಧ್ಯಾರ್ಥಿಗಳಿಗೆ ಉದ್ಯೋಗವಕಾಶ, ಕಾಲೇಜಿನ ಮೂಲಭೂತ ಸೌಕರ್ಯ ಹಾಗೂ ಇತರ ಸೌಲಭ್ಯಗಳು ನಾಯಕತ್ವ ಗುಣಗಳು ಹಾಗೂ ಉತ್ತಮ ಆಡಳಿತ ವ್ಯವಸ್ಥೆ ಮತ್ತಿತರ ಮಾನದಂಡಗಳನ್ನೊಳಗೊAಡು ಶ್ರೇಯಾಂಕವನ್ನು ನೀಡಲಾಗುತ್ತದೆ. ನೂರಾರು ಕಾಲೇಜುಗಳ ಸಾಲಿನಲ್ಲಿ ಹಾಸನ ಜಿಲ್ಲೆಯ ಸರ್ಕಾರಿ ಕಲಾ ಕಾಲೇಜೂ ಸಹ ಮುಂಚೂಣಿಯಲ್ಲಿ ನಿಂತಿರುವುದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ.

ದೆಹಲಿ ಮೂಲದ ಸೆಂಟರ್ ಫಾರ್ ಪೊರ್ರಾಸಿಂಗ್ ಮತ್ತು ರಿಸರ್ಚ್ (ಛಿ ಜಿoಡಿe) ಸಂಸ್ಥೆ 28.06.2019 ರ ಯು.ಜಿ.ಸಿ (ಯೂನಿರ್ವಸಿಟಿ ಗ್ರಾಂಟ್ ಕಮಿಷನ್) ಪಟ್ಟಿಯಂತೆ ಇರುವ ಖಾಸಗಿ ಸ್ವಾಯತ್ತ, ಸರ್ಕಾರಿ ಸ್ವಾಯತ್ತ ಹಾಗೂ ಸ್ವಾಯತ್ತತೆ ಇಲ್ಲದ ಕಾಲೇಜುಗಳ ಗ್ರೇಡಿಂಗ್ ಕಾರ್ಯ ಮಾಡಿದೆ.

ದೇಶದಾದ್ಯಂತ ಸರ್ಕಾರಿ ಕಾಲೇಜುಗಳ ಪೈಕಿ ಸ್ವಾಯತ್ತ ಸಂಸ್ಥೆಗಳು, ಯು.ಜಿ.ಸಿ ನೀಡಿರುವ ಸ್ಥಾನಮಾನದಿಂದ ಏಳನೇ ಸ್ಥಾನದಲ್ಲಿ ನಿಲ್ಲುತ್ತದೆ. ಇದೇರೀತಿ ನಮ್ಮ ಹಾಸನದ ಸರ್ಕಾರಿ ವಿಜ್ಞಾನ ಕಾಲೇಜು 31 ನೆ ಸ್ಥಾನದಲ್ಲಿದೆ.


ಆಡಳಿತ ವಿಚಾರಕ್ಕೆ ಸಂಬAಧಿಸಿದ ದೇಶದಲ್ಲಿ ಯು.ಜಿ.ಸಿ ಮಾನ್ಯತೆ ಪಡೆದ 827 ಕಾಲೇಜುಗಳಿದ್ದು ಅವುಗಳಲ್ಲಿ ಕೆಲವು ಕಾಲೇಜುಗಳು ಖಾಸಗಿ ಸ್ವಾಯತ್ತ ಸಂಸ್ಥೆಗಳಾಗಿದ್ದು 107ರಷ್ಟು ಸರ್ಕಾರದ ಸ್ವಾಯತ್ತ ಕಾಲೇಜುಗಳಗಿವೆ. ಸ್ವಾಯತ್ತ ಸಂಸ್ಥೆಗಳಾಗಿದ್ದು, ಇದರಲ್ಲಿ ಸರ್ಕಾರಿ ಸ್ವಾಯತ್ತ ಹಾಗು ಖಾಸಗಿ ಸ್ವಾಯತ್ತ ಕಾಲೇಜುಗಳು ಪ್ರತ್ಯೇಕ ವಿಭಾಗದಲ್ಲಿ ನಿಲ್ಲುತ್ತವೆ. ಖಾಸಗಿ ಸ್ವಾಯತ್ತ ಕಾಲೇಜುಗಳ ಪಟ್ಟಿಯಲ್ಲಿ ಮುಂಬೈನ ಸಂತ ಗ್ಝೇವಿಯರ್ ಕಾಲೇಜು ಪ್ರಥಮ ಸ್ಥಾನದಲ್ಲಿದ್ದರೆ, ಬೆಂಗಳೂರಿನ ಸಂಟ್‌ಜೋಸೆಫರ್ ಕಾಲೇಜು ದ್ವಿತೀಯ ಹಾಗೂ ಬೆಂಗಳೂರು ಮೌಂಟ್ ಕಾರ್ವೆಲ್ ಕಾಲೇಜು ನಾಲ್ಕನೇ ಸ್ಥಾನದಲ್ಲಿದೆ.


ಹತ್ತು ಅಗ್ರ ಶ್ರೇಯಾಂಕದ ಸರ್ಕಾರಿ ಸ್ವಾಯತ್ತ ಕಾಲೇಜುಗಳ ಪಟ್ಟಿ ಇಂತಿದೆ;

1) ಸರ್ಕಾರಿ ವಿಜ್ಞಾನ ಕಾಲೇಜು - ನೃಪತುಂಗ ರಸ್ತೆ ಬೆಂಗಳೂರು, 2) ಮಹಾರಾಜಾಸ್ ಕಾಲೇಜು ಕೊಚ್ಚಿ, 3) ಸರ್ಕಾರಿ ಮಹಿಳಾ ಪದವಿ ಕಾಲೇಜು-ಬೇಗಂಪೇಟೆ ಹೈದರಾಬಾದ್, 5) ಸರೋಜಿನಿ ನಾಯ್ಡು ಸ್ವಾಯತ್ತ ಸರ್ಕಾರಿ ಮಹಿಳಾ ಸ್ನಾತಕೋತ್ತರ ಕಾಲೇಜು-ಭೂಪಾಲ್, ಕೊಚ್ಚಿ ಮಾಮುನಿವರ್ ಸ್ನಾತಕೋತ್ತರ ಅಧ್ಯಯನ ಕಾಲೇಜು, ಲಾಸ್‌ಪೇಟ್ ಪಾಂಡಿಚೆರಿ, ಸರ್ಕಾರಿ ಹೊಲ್ಕರ್ (ಮಾದರಿ ಸ್ವಾಯತ್ತ) ವಿಜ್ಞಾನ ಕಾಲೇಜು-ಇಂದೇರ್ ಸರ್ಕಾರಿ ಎಂ.ಕೆ.ಬಿ ಕಲಾ ಮತ್ತು ವಿಜ್ಞಾನ ಕಾಲೇಜು-ಜಬಲಾಪುರ್, ಸರ್ಕಾರಿ ಕಲಾ ಕಾಲೇಜು- ಹಾಸನ, ಮಾತಾ ಜೀಜಾ ಬಾಯಿ ವನಿತೆಯರ ಸರ್ಕಾರಿ ಸ್ನಾತಕೋತ್ತರ ಕಾಲೇಜು ಮೋತಿ ಇಂದೋರ್, ಡಾ|| ಟಿ.ಎಸ್ ಕೃಷ್ಣ ಸರ್ಕಾರಿ ಪದವಿ ಕಾಲೇಜು-ವಿಶಾಖ ಪಟ್ಟಣ, ಸರ್ಕಾರಿ ಎಂ.ಎಲ್.ಬಿ ಮಹಿಳಾ ಸ್ನಾತಕೋತ್ತರ ಕಾಲೇಜು- , ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು- ಕಾರವಾರ.


ಅಗ್ರ ಶ್ರೇಣಿಯಲ್ಲಿರುವ ಇತರ ಕಾಲೇಜುಗಳು:- 


ಇದಲ್ಲದೆ ಬಳ್ಳಾರಿಯ ಶ್ರೀಮತಿ ಸರಳ ದೇವಿ, ಸತೀಶ್ ಚಂದ್ರ ಅಗರ್‌ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 14 ನೇ ಸ್ಥಾನದಲ್ಲಿದ್ದು, 20ನೇ ಸ್ಥಾನದಲ್ಲಿ ಮೈಸೂರಿನ ಯುವರಾಜ ಕಾಲೇಜು, 24ನೇ ಸ್ಥಾನದಲ್ಲಿ ಬೆಂಗಳೂರಿನ ಕಲಾ, ವಾಣಿಜ್ಯ ಕಾಲೇಜು, 26 ನೇ ಸ್ಥಾನದಲ್ಲಿ ಮಹಾರಾಣಿ ಮಹಿಳಾ ಮತ್ತು ಮಾನೀಜೇಟ್ ಕಾಲೇಜು, 29ನೇ ಸ್ಥಾನದಲ್ಲಿ ಬೆಂಗಳೂರಿನ ವಿಜಯ ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ 31ನೇ ಸ್ಥಾನದಲ್ಲಿ ಹಾಸನದ ಸರ್ಕಾರಿ ವಿಜ್ಞಾನ ಕಾಲೇಜು. 34ನೇ ಸ್ಥಾನದಲ್ಲಿ ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜು ಸ್ಥಾನ ಪಡೆದಿದೆ.

ಹಾಸನ ಕಲಾ ಹಾಗೂ ವಾಣಿಜ್ಯ ಕಾಲೇಜು ಪರಿಚಯ

1946 ರಲ್ಲಿ ಹಾಸನ ನಗರದಲ್ಲಿ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಪ್ರಾರಂಭವಾಯಿತು. 1984 ರಲ್ಲಿ ಕಲಾ ವಾಣಿಜ್ಯ ಕಾಲೇಜು ಹಾಗೂ ವಿಜ್ಞಾನ ಕಾಲೇಜುಗಳನ್ನು ಪ್ರತ್ಯೇಕಿಸಲಾಯಿತು. 2015-16 ರಲ್ಲಿ ಸರ್ಕಾರಿ ಕಲಾ ಹಾಗೂ ವಾಣಿಜ್ಯ ಸ್ನಾತಕೋತ್ತರ ಕಾಲೇಜು ಸ್ವಾಯತ್ತತೆ ಪಡೆದ ಕಾಲೇಜಾಗಿ ಪರಿವರ್ತನೆಗೊಂಡಿದ್ದು, ಈ ಕಾಲೇಜು 1984 ರಿಂದ ಈ ವರೆಗೆ 25 ಜನ ಪ್ರಾಂಶುಪಾಲರನ್ನು ಕಂಡಿದೆ.

ಡಾ. ಡಿ.ಜಿ.ಕೃಷ್ಣೇಗೌಡ ಅವರು ಪ್ರಾಂಶುಪಾಲರಾಗಿದ್ದಾಗ 2015-16 ನೇ ಸಾಲಿನಲ್ಲಿ ಈ ಕಾಲೇಜು ಸ್ವಾಯತ್ತತೆ ಪಡೆಯಿತು. ಹಾಲಿ ಡಾ. ಟಿ.ಆರ್. ಮಹೇಂದ್ರ ಕುಮಾರ್ ಅವರು 31.07.2020 ರಿಂದ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿದ್ದಾರೆೆ. ಕಾಲೇಜಿನ ಈ ಸಾಧನೆಗಾಗಿ ಕಾರಣರಾಗಿರುವ ಎಲ್ಲಾ ಪ್ರಾಧ್ಯಾಪಕರು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರಾದ ಡಾ.ಬಿ.ಆರ್.ಮಹೇಂದ್ರಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಕಾಲೇಜಿ ಈ ಸಾಧನೆಗೆ ಜಿಲ್ಲಾಡಳಿತ ಹಾಗೂ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಹಾಸನದ ಕಲಾ ಮತ್ತು ವಾಣಿಜ್ಯ ಹಾಗೂ ಸ್ನಾತ್ತಕೋತ್ತರ ಕಾಲೇಜಿನಲ್ಲಿ 16 ಸಹಪ್ರಾಧ್ಯಾಪಕರು, 30 ಸಹಾಯಕ ಪ್ರಾಧ್ಯಾಪಕರು, 1 ದೈಹಿಕ ಶಿಕ್ಷಣ ಪ್ರಾಧ್ಯಾಪಕರು, ಗ್ರಂಥ ಪಾಲಕರು, 55 ಅಥಿತಿ ಉಪನ್ಯಾಸಕರು ಹಾಗೂ ಇತರೆ ಸಿಬ್ಬಂದಿಗಳಿದ್ದಾರೆ.

ಕಾಲೇಜಿನ ಮೂರು ವರ್ಷಗಳ ಕಲಾ ವಿಭಾಗದಲ್ಲಿ 1074 ವಿದ್ಯಾರ್ಥಿಗಳು, ಬಿ.ಕಾಂ ನಲ್ಲಿ 1087 ಬಿ.ಬಿ.ಎಂ ನಲ್ಲಿ 202, ವಿದ್ಯಾರ್ಥಿಗಳು ಸೇರಿದಂತೆ ರಾಜಕೀಯ ಶಾಸ್ತç, ಸಮಾಜಶಾಸ್ತç, ಅರ್ಥಶಾಸ್ತç ಹಾಗೂ ಎಂ.ಕಾA ಗಳನ್ನು ಸೇರಿದಂತೆ 236 ವಿಧ್ಯಾರ್ಥಿಗಳು ಹಾಗೂ ಸ್ನಾತ್ತಕೋತ್ತರ ವಿಭಾಗದಲ್ಲಿನ 216 ವಿಧ್ಯಾರ್ಥಿಗಳನ್ನು ಒಳಗೊಂಡಿದೆ. ಒಟ್ಟು 2579 ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಕಲಿಯುತ್ತಿದ್ದಾರೆ. ಇದರಲ್ಲಿ 1037 ಪರಿಶಿಷ್ಠ ಜಾತಿ 68 ಪರಿಶಿಷ್ಠ ಪಂಗಡದ ವಿದ್ಯಾರ್ಥಿಗಳು ಹಾಗೂ 1447 ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

Post a Comment

Previous Post Next Post