ಮೆಲ್ಬೋರ್ನ್: ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್ಮನ್ ಬ್ರಾಡ್ ಹಾಡ್ಜ್ ಐಪಿಎಲ್ ಟೂರ್ನಿಯಲ್ಲಿ ವಿವಿಧ ತಂಡಗಳ ಪರ ಆಡಿದ್ದಾರೆ. ಆದರೆ ಈ ಪೈಕಿ ಕೊಚ್ಚಿ ಟಸ್ಕರ್ಸ್ ಕೇರಳ ತಂಡದಿಂದ ತಮಗೆ ಈಗಲೂ ಶೇ. 35ರಷ್ಟು ವೇತನ ಬಾಕಿ ಇದೆ ಎಂದು ಹಾಡ್ಜ್ ಹೇಳಿದ್ದಾರೆ. ಅಲ್ಲದೆ ಆ ಹಣ ಎಲ್ಲಿದೆ ಎಂದು ಹುಡುಕಿ ಕೊಡುವಂತೆಯೂ ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ವಿವಿಧ ತಂಡಗಳ ಪರ ಆಡಿದ ಆಸ್ಟ್ರೇಲಿಯಾದ
ಮಾಜಿ ಬ್ಯಾಟ್ಸ್ಮನ್ ಬ್ರಾಡ್ ಹಾಡ್ಜ್ಗೆ ಕೊಚ್ಚಿ ಟಸ್ಕರ್ಸ್ ಕೇರಳ ತಂಡದಿಂದ ತಮಗೆ ಈಗಲೂ ಶೇ. 35ರಷ್ಟು ವೇತನ ಬಾಕಿ ಇದೆ ಈ ಹಣವನ್ನು ಹುಡಉಕಿ ಕೋಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆ.
2010ರಲ್ಲಿ ಬ್ರಾಡ್ ಹಾಡ್ಜ್ ಅವರನ್ನು 3 ಕೋಟಿ ರೂ. ಮೊತ್ತಕ್ಕೆ ಖರೀದಿಸಿದ್ದು ಇವರು ಮಾಡಿರುವ ಟ್ವೀಟ್ ಪ್ರಾಕರ 92 ಲಕ್ಷ ರೂ. ಸಂಭಾವನೆ ಬಾಕಿ ಉಳಿದಿದೆ. ಕೊಚ್ಚಿ ಟಸ್ಕರ್ಸ್ 2011ರಲ್ಲಿ ವಾರ್ಷಿಕ ಪಾವತಿಯ ಮೊತ್ತ 155.3 ಕೋಟಿ ರೂ. ಬಾಕಿ ಉಳಿಸಿಕೊಂಡ ಕಾರಣದಿಂದಾಗಿ ಬಿಸಿಸಿಐ, ಐಪಿಎಲ್ನಿಂದ ಅದನ್ನು ಹೊರದಬ್ಬಿತ್ತು. ಎಸ್. ಶ್ರೀಶಾಂತ್, ಮಹೇಲ ಜಯವರ್ಧನೆ, ವಿನಯ್ ಕುಮಾರ್ ಮುಂತಾದ ಆಟಗಾರರೂ ಕೊಚ್ಚಿ ಟಸ್ಕರ್ಸ್ ಪರ ಆಡಿದ್ದರು.