ಬೆಂಗಳೂರು: ಅಶ್ಲೀಲ ಸಿಡಿ ವಿಡಿಯೋದಲ್ಲಿ ಇರುವುದು ನಾನೇ ಎಂದು ವಿಶೇಷ ತನಿಖಾ ತಂಡದ(ಎಸ್ಐಟಿ) ಮುಂದೆ
ಒಪ್ಪಿಕೊಂಡ ಮಾಜಿ ಸಚಿವ ರಮೇಶ್ ಜಾರಕಿಹೊಳಿ.
ಇಂದು ಸಂಬಂಧ ಎಸ್ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ರಮೇಶ್ ಜಾರಕಿಹೊಳಿ ಹಾಜರಾಗಿ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ದೂರಿನಲ್ಲಿ ನೀಡಿರುವ ವಿಡಿಯೋ ತುಣುಕಿನಲ್ಲಿ ಇರುವುದು ನಾನೇ. ಜತೆಗೆ ಇರುವ ಯುವತಿ ಹಲವು ದಿನಗಳಿಂದ ನನಗೆ ಪರಿಚಯವಿದ್ದಳು. ಸಹಮತದಿಂದ ಇಬ್ಬರು ಒಟ್ಟಿಗೆ ಇದ್ದವು. ಆದರೆ, ಕದ್ದು ವಿಡಿಯೋ ಮಾಡಿರುವುದು ನನಗೆ ಗೊತ್ತಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಸ್ಐಟಿ ಮುಂದೆ ಒಪ್ಪಿಕೊಂಡಿದ್ದಾರೆ.
Tags
ರಾಜ್ಯ