ಹಾಸನ: ಜಿಲ್ಲಾ ಹಿಮ್ಸ್ ಸರ್ಜನ್ ವರ್ಗಾವಣೆಯನ್ನು ತಡೆಯದಿದ್ದರೇ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಮಾಡುವುದಾಗಿ ಹೇಳಿಕೆ ನೀಡಿರುವ ಮಾಜಿ ಸಚಿವ ಹೆಚ್.ಡಿ. ರೇವಣ್ಣನವರ ನಿಲುವನ್ನು ಖಂಡಿಸುವುದಾಗಿ ಮುಸ್ಲಿಂ ಸರ್ಕೂಲರ್ ಫಾರಂನ ಅಕ್ಮಲ್ ಜಾವಿದ್ ಮತ್ತು ಡಿ.ಎಸ್.ಎಸ್. ಮುಖಂಡರಾದ ಎನ್.ಜೆ. ದಿನೇಶ್ ರವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಜಿಲ್ಲೆಯ ಉನ್ನತ ಮಟ್ಟದ ಅಧಿಕಾರಿಗಳು, ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಪ್ಯಾಕೇಜು ಮಾಡುತ್ತಾ ದುರ್ಬಲ ವರ್ಗದವರಿಗೆ ವಂಚನೆ ಮಾಡುತ್ತಾ ಹಾಗೂ ಜಿಲ್ಲೆಯ ಸಾಮಾನ್ಯ ಜನರಿಗೆ ವಂಚಿಸುತ್ತಾ ನಾಗರೀಕರ ಹಣವನ್ನು ಕಾಪಾಡಲು ವಂಚಿತರಾಗಿದ್ದಾರೆ ಎಂದು ದೂರಿದರು. ಜಿಲ್ಲೆ ಜನತೆಯ ಕಷ್ಟ-ಸುಖಗಳನ್ನು, ಸಾವು-ನೋವುಗಳನ್ನು ಹಳ್ಳಿ ಹಳ್ಳಿಗಳಲ್ಲಿ ನಿಮಗೆ ಮತ ನೀಡಿರುವ ಪ್ರಜೆಗಳಿಗೆ ಸ್ಪಂದಿಸದೇ ಅನರ್ಹರಾಗಿರುವ ಸರ್ಜನ್ ಪರವಾಗಿ ನಿಂತಿದ್ದಾರೆ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ಸ್ವಾಮಿಗೌಡ ಇತರರು ಉಪಸ್ಥಿತರಿದ್ದರು.
Tags
ಹಾಸನ