ಹಾಸನ ಮೇ 24 :- ಕೋವಿಡ್ - 19 ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಮಾನಸಿಕ ಅಸ್ವಸ್ಥರು, ಹಿರಿಯ ನಾಗರೀಕರು ಮತ್ತು ವಿಕಲಚೇತನರು ತಮಗಿರುವ ನ್ಯೂನತೆಯೊಂದಿಗೆ ಕೋವಿಡ್ ನಂತಹ ಸೋಂಕಿನೊAದಿಗೆ ಹೋರಾಡಬೇಕಿದ್ದು, ಅವರಿಗೆ ಔಷಧೋಪಚಾರ, ಆಹಾರ, ಮಾನಸಿಕ ಬೆಂಬಲ, ನೈತಿಕ ಬೆಂಬಲ ಅವಶ್ಯವಿದ್ದು ನ್ಯಾಯಾಂಗವು ಈ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದು ಹಾಸನದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶಿವಣ್ಣರವರು ತಿಳಿಸಿದರು.
ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ರವರು ಮಾನಸಿಕ ಅಸ್ವಸ್ಥತೆ ಮತ್ತು ಮಾನಸಿಕ ದುರ್ಬಲ ವ್ಯಕ್ತಿಗಳ ಯೋಜನೆ 2015 ರ ಸಮಿತಿಯ ಮೂಲಕ ನೀಡಲಾದ ನಿರ್ದೇಶನದಂತೆ ಮಾನಸಿಕ ಅಸ್ವಸ್ಥರು, ಹಿರಿಯ ನಾಗರೀಕರು ಹಾಗೂ ವಿಕಲಚೇತನರು ತಮಗಿರುವ ನ್ಯೂನ್ಯತೆಗಳೊಂದಿಗೆ ಕೋವಿಡ್ ವ್ಯಾಧಿ ಸಮಯದಲ್ಲಿ ದಿನಗಳೆಯುವುದು ದುರ್ಬಲವಾಗಿದ್ದು, ಅವರಿಗೆ ಅವಶ್ಯವಿರುವ ಆಹಾರ, ಔಷಧಗಳನ್ನು ಅವರ ಮನೆಯ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯಾಗಬೇಕೆಂಬ ನಿಟ್ಟಿನಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ವಿಡಿಯೋ ಸಂವಾದದ ಮೂಲಕ ಜಿಲ್ಲಾ ಆರೋಗ್ಯ ಇಲಾಖೆ, ಮಾನಸಿಕ ಆರೋಗ್ಯ ವಿಭಾಗ, ಹಾಸನ ವೈದ್ಯಕೀಯ ಬೋಧಕ ಕಾಲೇಜಿನ ಮಾನಸಿಕ ಆರೋಗ್ಯ ವಿಭಾಗ, ಹಿರಿಯ ನಾಗರೀಕರು ಮತ್ತು ವಿಕಲಚೇತನರ ಸಬಲೀಕರಣ ಇಲಾಖೆ, ನಾಗರೀಕ ಆಹಾರ ಸರಬರಾಜು ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಆರ್.ಸಿ. ಹೆಚ್.ಓ ನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನಿರ್ದೇಶನವನ್ನು ನೀಡಿದರು.
ಮಾನಸಿಕ ಅಸ್ವಸ್ಥರನ್ನು ಗುರುತಿಸಿ ಅವರಿಗೆ ಮಾನಸಿಕ ಸಾಂತ್ವಾನದ ಜೊತೆಗೆ ಅವರ ಮನೆ ಬಾಗಿಲಿಗೆ ಔಷಧಗಳನ್ನು ತಲುಪಿಸಬೇಕು ಅಲ್ಲದೆ ಕೋವಿಡ್ ವ್ಯಾಧಿ ಸಮಯದಲ್ಲಿ ಮಾನಸಿಕ ಅಸ್ವಸ್ಥರು ಮತ್ತು ಅವರ ಕುಟುಂಬದವರಿಗೆ ಆಹಾರವನ್ನು ಉಚಿತವಾಗಿ ಮನೆ ಬಾಗಿಲಿಗೆ ಒದಗಿಸುವ ವ್ಯವಸ್ಥೆಯಾಗಬೇಕು ಎಂದು ನಿರ್ದೇಶನವನ್ನು ನೀಡಿದರು.
ಹಿರಿಯ ನಾಗರೀಕರ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆಯ ಅಧಿಕಾರಿಯವರೊಂದಿಗೆ ಮಾತನಾಡಿ ವಿಕಲಚೇತನರಿಗೆ ವ್ಯಾಧಿ ಸಮಯದಲ್ಲಿ ನಾಗರೀಕ ಆಹಾರ ಸರಬರಾಜು ಇಲಾಖೆಯಿಂದ ಉಚಿತವಾಗಿ ಪಡಿತರವನ್ನು ಮನೆ ಬಾಗಿಲಿಗೆ ವಿತರಣೆ ಮಾಡಲು ಕ್ರಮ ವಹಿಸಬೇಕು ಎಂದರು.
ಮಾನಸಿಕ ಅಸ್ವಸ್ಥರು, ಹಿರಿಯ ನಾಗರೀಕರು ಮತ್ತು ವಿಕಲಚೇತನರಿಗೆ ಕೋವಿಡ್ ವ್ಯಾಧಿ ಸಮಯದಲ್ಲಿ ಯಾವುದೇ ಗುರುತಿನ ಚೀಟಿ ಇಲ್ಲದೇ, ಯಾವುದೇ ವಯಸ್ಸಿನ ಮಿತಿಯಿಲ್ಲದೆ ಆಧ್ಯತಾ ಅಧಾರ ಮೇಲೆ ಲಸಿಕೆಯನ್ನು ಹಾಕಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮತ್ತು ಆರ್ ಸಿ ಹೆಚ್ ಓ ಅಧಿಕಾರಿಯವರಿಗೆ ನಿರ್ದೇಶನವನ್ನು ನೀಡಿದರಲ್ಲದೆ ಕೋವಿಡ್ ಬಾಧಿತರಿಗೆ ಸೋಂಕು ನಿವಾರಣಾ ಔಷಧಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ನಿಗಾ ವಹಿಸಬೇಕೆಂದು ಜಿಲ್ಲಾ ನ್ಯಾಯಾಧೀಶರಾದ ಶಿವಣ್ಣರವರು ತಿಳಿಸಿದರು.
ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಬಿ.ಕೆ. ರವಿಕಾಂತರವರು ಮಾತನಾಡಿ ಕಾನೂನು ಸೇವೆಗಳ ಪ್ರಾಧಿಕಾರದಿಂದ ಹಿರಿಯ ನಾಗರೀಕರು, ವಿಕಲಚೇತನರಿಗೆ, ಮಾನಸಿಕ ಅಸ್ವಸ್ಥರು ಕಾನೂನು ನೆರವು ಪಡೆಯಲು ಅರ್ಹರಿದ್ದು ಕೋವಿಡ್ ವ್ಯಾಧಿ ಸಮಯದಲ್ಲಿ ಇವರೆಲ್ಲರು ಉಚಿತವಾಗಿ ಆಹಾರ, ಔಷಧೋಪಚಾರ, ಮಾನಸಿಕ ಸ್ಥೆöÊರ್ಯವನ್ನು ಪಡೆಯಬಹುದಾಗಿದ್ದು ಇವರಿಗೆ ಕೋವಿಡ್ ಲಸಿಕೆಯನ್ನು ಹಾಕಲು ರಾಜ್ಯ ಮಟ್ಟದಲ್ಲಿಯೇ ಸಂಬAಧಿಸಿದ ಅಧಿಕಾರಿಗಳೊಂದಿಗೆ ರಾಜ್ಯ ಕಾನೂನು ಪ್ರಾಧಿಕಾರವು ಚರ್ಚಿಸಿ ನಿರ್ದೇಶನವನ್ನು ನೀಡಿದ್ದು ಜಿಲ್ಲಾ ಮಟ್ಟ , ತಾಲೂಕು ಮಟ್ಟ ಮತ್ತು ಗ್ರಾಮ ಮಟ್ಟದಲ್ಲಿ ಕ್ರಮವಹಿಸಿ ಮಾನಸಿಕ ಅಸ್ವಸ್ಥರು, ಹಿರಿಯ ನಾಗರೀಕರು ಮತ್ತು ವಿಕಲಚೇತನರನ್ನು ಕೋವಿಡ್ ವ್ಯಾಧಿಯಿಂದ ರಕ್ಷಿಸಬೇಕೆಂದು ತಿಳಿಸಿದರು.