ಐಸಿಯುನಲ್ಲಿರುವ ಸಕಲೇಶಪುರ ಹಾನುಬಾಳು ಆರೋಗ್ಯಕೇಂದ್ರಕ್ಕೆ ಚಿಕಿತ್ಸೆ ಎಂದು?

ಡಾಕ್ಟರ್ ಇಲ್ಲದೆ ರೋಗಿಗಳ ಪರದಾಟ

ವೈದರ ನೇಮಕ ಮಾಡಿ ಅಗತ್ಯ ಸೌಲಭ್ಯ ಒದಗಿಸುವಂತೆ ಗ್ರಾಪಂ ಸದಸ್ಯ ಮೋಹನ್ ಅಚ್ಚರಡಿ ಒತ್ತಾಯ

ದಿನದ 24 ಗಂಟೆ ಸೇವೆ ಒದಗಿಸುವಂತೆ  ಆಗ್ರಹ

-ವೆಂಕಟೇಶ್ ಬ್ಯಾಕರವಳ್ಳಿ

ಹಾಸನ: ಶೀತಕೆಮ್ಮು, ಮೈಕೈ ನೋವು ಬೇರೆ, ತಲೆಬೇರೆ ಸಿಡಿಯುತ್ತಿದೆ ಜ್ವರ ಬಂದಂಗೆ ಆಗುತ್ತಿದೆ ತೋರಿಸೋಣ ಅಂದ್ರೆ ‌ಪೇಟೆಗೆ‌‌ ಹೋಗಬೇಕಪ್ಪ ಹಾಳಾದ  ಕೊರೋನಾ ಬೇರೆ ಹೆದರಿಕೆಯಾಗುತ್ತದೆ. ಹೋಗೋಣೋ ಅಂದ್ರ ಬಸ್ ಬೇರೆ ಇಲ್ಲ ಇಂತಹ ಸಂಕಷ್ಟ ಸಂದರ್ಭದಲ್ಲಿ ಹಾನುಬಾಳ್ ಆಸ್ಪತ್ರೆಯಲ್ಲಿ ಡಾಕ್ಟರ್  ಇದಿದ್ದರೆ   ನಮ್ಮಂತಹ ಬಡವರಿಗೆ ಎಷ್ಟು ಅನುಕೂಲವಾಗುವುದು. ಬೆಡ್ ಇಲ್ಲ ಅಂತ ಟಿವಿ ತೋರಿಸುತ್ತಾರೆ ಇರಾ ಸರ್ಕಾರಿ ಆಸ್ಪತ್ರೆಯನ್ನೆ ನೆಟ್ಟು ಇಟ್ಟುಕೊಂಡ್ರೆ ಇದೆಲ್ಲ ಸಮಸ್ಯೆ‌ಇರುತ್ತಾ ... ಈ  ಆಸ್ಪತ್ರೆ ಚೆನ್ನಾಗಿದ್ದರೆ  ಇಂತಹ ಕಷ್ಟದ ಸಂದರ್ಭದಲ್ಲಿ ಎಷ್ಟು ಅನುಕೂಲವಾಗುತ್ತಿತ್ತು. ನಮ್ಮೂರು ರಾಜಾಕಾರಣಿಗಳಿಗೆ ನಮ್ಮಗೋಳು ಅರ್ಥನೇ‌ ಆಗುವುದಿಲ್ಲ.  ಬರೀ ಓಟ್ ಕೇಳೋಕೆ ಬರುತ್ತಾರೆ ಅಷ್ಟೇ ಹಾಳಾಗಿ‌ ಹೋಗ್ಲಿ ಪೇಟೆಗೆ‌ ಹೋಗಿ ಒಂದಿಷ್ಟು ಮಾತ್ರೆ‌ತ ಬಾ ‌ಮಗ  ನಮ್ಮಕಡೆನೂ ಕೊರೋನಾ ಇದೆಯಂತೆ ಜೋಪಾನಾ ಎಂದು ಮನೆಯವರ‌ ಹಾಗೂ ಊರಿನವರ ಬಳಿ ಹೇಳಿಕೊಂಡು  ಆರೋಗ್ಯ ಸವಲತ್ತಿನಿಂದ ವಂಚಿತರಾಗಿರುವ ಸಕಲೇಶಪುರ ತಾಲ್ಲೂಕಿನ ಹಾನುಬಾಳು‌ ಹೋಬಳಿ‌ ಸುತ್ರಮುತ್ತಲ ಬಡವರ ಗೋಳಿನಕಥೆ ಕಥೆ‌ ಇದು.
   ಹೌದು ಕೊರೋನಾ ಮಹಾಮಾರಿ ದೇಶವ್ಯಾಪಿ ಆವರಿಸಿದ್ದು ಎಲ್ಲರನ್ನು ನಿದ್ರೆಗೆಡಿಸಿದೆ. ಬಡವರ ಬದುಕನ್ನು‌ ಕಿತ್ತುಕೊಂಡು ಶಾಶ್ವಕೋಶದೊಳಗೆ‌ ಸೇರಿಕೊಂಡು ಸಂತೋಷ‌ಪಡುತ್ತಿದೆ. ಇದನ್ನು  ತೊಲಗಿಸಲು ಸರ್ಕಾರ ಹಾಗೂ ವೈದ್ಯ ಲೋಕ ಹರಸಾಹಸ ಪಡುತ್ತಿದೆ. ಜಿಲ್ಲೆಯಲ್ಲಿ ಸೊಂಕಿತರ‌ ಸಂಖ್ಯೆ ದಿನದಿಂದ ಏರಿಕೆಯಾಗುತ್ತಿದೆ.ಅದಕ್ಕಾಗಿ ಜಿಲ್ಲಾಡಳಿತ ಅಗತ್ಯ ಸೌಲಭ್ಯ ನೀಡುತ್ತಿದ್ದರೂ ಇದನ್ನು ಸರಿದಾರಿಗೆ‌‌ ತರಲು‌ ಸಾಧ್ಯ ವಾಗುತ್ತಿಲ್ಲ. ಎಲ್ಲೆಡೆ ಆಸ್ಪತ್ರೆಗಳು ಭರ್ತಿಯಾಗಿವೆ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಇಲ್ಲದೆ  ಸಾವನ್ನಪ್ಪುತ್ತಿದ್ದಾರೆ. ಆದರೆ ಹೋಬಳಿ ಕೇಂದ್ರಗಳಲ್ಲಿ  ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದೆ ಅಗತ್ಯ ಸೌಲಭ್ಯಗಳಿಲ್ಲದೆ   ಆಸ್ಪತ್ರೆಗಳೇ ಐಸಿಯು‌ ಚಿಕಿತ್ಸೆಗಾಗಿ ಕಾಯುತ್ತಿರುವುದರಿಂದ ಬಡ ರೋಗಿಗಳು ಪರಿತಪಿಸುವಂತಾಗಿದ್ದು ಅದಕ್ಕೆ ‌ಹಾನುಬಾಳು ಆರೋಗ್ಯ ಕೇಂದ್ರ‌ ಹೊರತಾಗಿಲ್ಲ.

120 ವರ್ಷಗಳ ಹಳೇ ಆಸ್ಪತ್ರೆಗೆ ವೈದ್ಯರಿಲ್ಲ:

 ಹಾನುಬಾಳು ಪ್ರಾಥಮಿಕ ಆರೋಗ್ಯ  ಕೇಂದ್ರವು ನೂರಾರು ವರ್ಷಗಳ ಹಳೆಯದಾಗಿದ್ದು ಅಂದಾಜು 1900 ನೆಯ ಇಸವಿಯಲ್ಲಿ ಪ್ರಾರಂಭವಾಗಿದೆ. ಹಾನುಬಾಳು ಹೋಬಳಿ ಕೇಂದ್ರವಾಗಿದ್ದು ಈ ಆಸ್ಪತ್ರೆಯನ್ನು ಸುಮಾರು 30 ರಿಂದ 35 ಗ್ರಾಮಗಳ ಬಡ ಕೂಲಿ ಕಾರ್ಮಿಕರು ಈ ಆರೋಗ್ಯ ಕೇಂದ್ರವನ್ನೆ ಅವಲಂಬಿಸಿದ್ದಾರೆ, ಕಳೆದ 3 ವರ್ಷಗಳಿಂದ ಈ ಆರೋಗ್ಯ ಕೇಂದ್ರದಲ್ಲಿ ಡಾಕ್ಟರ್‌ ಇಲ್ಲದೆ ರೋಗಿಗಳು ತಾಲ್ಲೂಕು ಆಸ್ಪತ್ರೆ ಹಾಗೂ ಇಲ್ಲ ಖಾಸಗಿ ಆಸ್ಪತ್ರೆಯನ್ನು ಅವಲಂಬಿಸಬೇಕಾಗಿದೆ. ಹಾಗೆ ಹಾನುಬಾಳು ಹೋಬಳಿ ವ್ಯಾಪ್ತಿಯಲ್ಲಿ ಬರುವ ಕ್ಯಾಮನಹಳ್ಳಿ, ಕುಂಬರಡಿ, ಹಾಗು ದೇವಲದಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸಹ ವೈದ್ಯರು ಇಲ್ಲದಿರುವುದರಿಂದ  ಆ ಭಾಗದ ಜನರ ಗೋಳು ಕೇಳುವವರಿಲ್ಲದಂತಾಗಿದೆ

ಅಗತ್ಯ ಸೌಲಭ್ಯಗಳಿಲ್ಲ:

 ಇನ್ನು ಹಾನುಬಾಳು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಕ್ತ ತಪಾಸಣೆ ಮಾಡಲಾಗುತ್ತದೆಯಾದರು  ಲ್ಯಾಬ್  ವ್ಯವಸ್ಥೆ ಹಾಗು ಅಗತ್ಯ ಸಲಕರಣೆಗಳ ಕೊರತೆಯಿಂದಾಗಿ ರಕ್ತ ಸಂಗ್ರಹಿಸಿ ಸಕಲೇಶಪುರ ತಾಲ್ಲೂಕು ಆಸ್ಪತ್ರೆಗೆ ಕಳುಹಿಸಿ ಅಲ್ಲಿ ಪರೀಕ್ಷೆ ನಡೆಸಿ ರಿಪೋರ್ಟ್ ನೀಡಲಾಗುತ್ತಿದೆ, ತುರ್ತು ಪರಿಸ್ಥಿತಿಯಲ್ಲಿ ಮತ್ತು ಕೋವಿಡ್ ನಂತಹ ಇಂತಹ ಸ್ಥಿತಿಗಳಲ್ಲಿ ಗ್ರಾಮಗಳನ್ನು ಭೇಟಿ ನೀಡಲು ಅಗತ್ಯ ವಾಹನ ಸೌಲಭ್ಯ ಕೂಡ ಇರುವುದಿಲ್ಲಾ, ಹಾನುಬಾಳು ಹೋಬಳಿ ಕೇಂದ್ರವಾಗಿರುವುದರಿಂದ ಹಳ್ಳಿಯ ಕೂಲಿ ಕಾರ್ಮಿಕರು ಹೆರಿಗೆ ಹಾಗು ಇನ್ನಿತರ ಆರೋಗ್ಯ ಸಮಸ್ಯೆಗೆ ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆ ಯನ್ನೇ ಅವಲಂಬಿಸಿರುವುದರಿಂದ ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕನಿಷ್ಠ 50 ಹಾಸಿಗೆಗಳ ಆಸ್ಪತ್ರೆಯನ್ನಾಗಿಸಿ ವೈದ್ಯರು ತಂಗಲು ವಸತಿ ಗೃಹ ಕೂಡ ಇರುವುದರಿಂದ ಅಗತ್ಯ ವೈದ್ಯರು,  ಸ್ಟಾಪ್ ಹಾಗೂ ಇತರ ವೈದ್ಯಕೀಯ ಸೌಲಭ್ಯಗಳೊಂದಿಗೆ ದಿನದ 24 ಗಂಟೆಗಳ ಸೇವೆಯನ್ನು ಒದಗಿಸುವ ಜೊತೆಗೆ ತುರ್ತು ಪರಿಸ್ಥಿತಿಗಾಗಿ ಒಂದು ಅಂಬುಲೆನ್ಸ್ ಅನ್ನು ಒದಗಿಸಬೇಕು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.



ಇಲ್ಲಿಯ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಈಗಾಗಲೇ  ಜಿಲ್ಲಾಡಳಿತ ಗಮನ ಸೆಳೆಯಲಾಗಿದೆ. ಆದರೆ ಯಾವುದೇ ಪ್ರಯೋಜವಾಗಿಲ್ಲ.ನಮ್ಮಮನವಿಗಳಿಗೆ ಸ್ಪಂದಿಸುವಂತೆ ಕಾಣುತ್ತಿಲ್ಲ ಕಾರಣ ಗ್ರಾಮ ಪಂಚಾಯಿತಿ ಹಾನುಬಾಳು ವತಿಯಿಂದ ಹಾಗೂ ದಲಿತ ಸಂಘರ್ಷ ಸಮಿತಿ ವತಿಯಿಂದ ಈಗಾಗಲೇ  ಅನೇಕ ಮನವಿಗಳನ್ನು ನಾನೆ ಖುದ್ದಾಗಿ ನೀಡಿದ್ದೇನೆ ಹಾಗಾಗಿ ಪಕ್ಷಾತೀತವಾದ ಸಾಮೂಹಿಕ ಹೋರಾಟದ ಅಗತ್ಯವಿದೆ .ಹಾನುಬಾಳು ಭಾಗದಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಭಾವ ಇರುವ ಅನೇಕ ರಾಜಕೀಯ ಧುರೀಣರಿದ್ದರು ಆಸ್ಪತ್ರೆ ವಿಷಯದಲ್ಲಿ ನಿರಾಸಕ್ತಿ ಹೊಂದಿದ್ದಾರೆ.. ಈ ಭಾಗದ ಎಲ್ಲಾ ವಿವಿಧ ರಾಜಕೀಯ ಪಕ್ಷದ ಕಾರ್ಯಕರ್ತರು, ವಿವಿಧ ಸಂಘಟನೆಗಳ ಮುಖಂಡರು ಹಾಗು ಜನಸಾಮಾನ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ರೂಪಿಸಲಾಗುವುದು ಆಸ್ಪತ್ರೆ ಸಮಸ್ಯೆ ಬಗೆಹರಿಸಲು ಎಲ್ಲರೂ ಕೈ ಜೋಡಿಸಬೇಕಿದೆ

_ಮೋಹನ್ ಕುಮಾರ್ ಅಚ್ಚರಡಿ 
ಗ್ರಾಮಪಂಚಾಯಿತಿ ಸದಸ್ಯರು  ಹಾಗೂ ಹೋರಾಟಗಾರರು

Post a Comment

Previous Post Next Post