ಜಿಲ್ಲೆಯಲ್ಲಿಂದು ಹೊಸದಾಗಿ ೧೯೩೩ ಕೋವಿಡ್ ಪ್ರಕರಣಗಳು ಪತ್ತೆ

ಹಾಸನ ಮೇ೨೨ :- ಜಿಲ್ಲೆಯಲ್ಲಿಂದು ಹೊಸದಾಗಿ ೧೯೩೩ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ ೭೨೨೪೨ ಏರಿಕೆಯಾಗಿದೆ. ಕಳೆದ ವರ್ಷವೂ ಸೇರಿದಂತೆ ೨೦೨೧ ಮಾರ್ಚ್ ೨೨ ರಿಂದ ಇದುವರೆಗೆ ಖಚಿತ ಪ್ರಕರಣಗಳ ಒಟ್ಟು ಸಂಖ್ಯೆ ೪೩೦೭೩ ಆಸ್ಪತ್ರೆಯಿಂದ ಇಂದು ೧೯೩೦ ಮಂದಿ ಬಿಡುಗಡೆ ಹೊಂದಿರುವವರು ಸೇರಿದಂತೆ ಒಟ್ಟು ೫೬೯೬೫ ಮಂದಿ ಇದುವರೆಗೆ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ೧೪೩೭೨  ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ೧೩೦ ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ೧೪ ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ೯೦೫ ಕ್ಕೆ ಏರಿಕೆಯಾಗಿದೆ.


ಇಂದು ಪತ್ತೆಯಾದ ೧೯೯೩ ಕೋವಿಡ್ ಪ್ರಕರಣಗಳಲ್ಲಿ ಹಾಸನ ತಾಲ್ಲೂಕಿನಲ್ಲಿ ೬೧೪ ಮಂದಿ, ಅರಕಲಗೂಡು ೨೪೦ ಮಂದಿ, ಅರಸೀಕೆರೆ ೨೫೫ ಮಂದಿ,  ಹೊಳೆನರಸೀಪುರ ೨೩೪ ಮಂದಿ, ಚನ್ನರಾಯಪಟ್ಟಣ ೧೪೧  ಮಂದಿಗೆ,   ಸಕಲೇಶಪುರ ತಾಲ್ಲೂಕಿನಲ್ಲಿ ೧೪೫ ಮಂದಿ, ಆಲೂರು ೧೦೩ ಮಂದಿ, ಬೇಲೂರು ೧೯೮ ಮಂದಿ, ಇತರ ಜಿಲ್ಲೆಯ ೩ ಮಂದಿಗೆ ಕೋವಿಡ್ ಪ್ರಕರಣ ದೃಡಪಟ್ಟಿದೆ. ಇಂದು ಮೃತಪಟ್ಟವರಲ್ಲಿ ಹಾಸನ ತಾಲ್ಲೂಕಿನಲ್ಲಿ ೪ ಮಂದಿ, ಹೊಳೆನರಸೀಪುರ ೩ ಮಂದಿ,  ಚನ್ನರಾಯಪಟ್ಟಣ ೩ ಮಂದಿ, ಸಕಲೇಶಪುರ  ೧ ಮಂದಿ, ಅರಸೀಕೆರೆ ೧ ಮಂದಿ, ಅರಕಲಗೂಡು ೨ ಮಂದಿ  ಸಾವನ್ನಪ್ಪಿದ್ದಾರೆ ಎಂದು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಅವರು ತಿಳಿಸಿದ್ದಾರೆ.


Post a Comment

Previous Post Next Post