ಹಾಸನ: ಸುಖಸುಮ್ಮನೆ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಚಾಲಕರಿಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ರವರೆ ರಸ್ತೆಗಿಳಿದು ಬಿಸಿ ಮುಟ್ಟಿಸಿದರು.
ಕೊರೋನಾ ಸೋಂಕು ವ್ಯಾಪಾಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ನಿಯಂತ್ರಿಸಲು ಬೆಳಿಗ್ಗೆ ೬ ರಿಂದ ೧೦ ಗಂಟೆಯವರೆಗೂ ಅಗತ್ಯ ವಸ್ತುಗಳನ್ನು ವ್ಯಾಪಾರ ಮಾಡಲು ಮತ್ತು ಕೊಂಡುಕೊಳ್ಳಲು ಅವಕಾಶ ನೀಡಿದ್ದರೂ ನಂತರದಲ್ಲೂ ಕೂಡ ವಾಹನ ಸಂಚರಿಸುತ್ತಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ನಗರದ ಎನ್.ಆರ್. ವೃತ್ತದಲ್ಲಿ ತಾವೆ ಸ್ವತಃ ನಿಂತು ಗಮನಿಸಿದರು. ಕೆಲ ವಾಹನ ಚಾಲಕರನ್ನು ಅಡ್ಡ ಹಾಕಿ ನಿಲ್ಲಿಸಿ ಬಿದ್ದು ವಾದ ಹೇಳಿದಲ್ಲದೇ ದಂಢದ ಬಿಸಿ ಮುಟ್ಟಿಸಿದರು. ಪೊಲೀಸ್ ಅಧಿಕಾರಿಗಳು ಕೂಡ ಮುಖ್ಯ ವೃತ್ತದಲ್ಲಿ ನಿಂತು ದಂಢ ಹಾಕುತ್ತಿದ್ದರು.
Tags
ಹಾಸನ