ರಾಮನಾಥಪುರ;- ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಗ್ರಾ.ಪಂ ನವರು ನೀಡುವ ಆದೇಶದಂತೆ ನಡೆದುಕೊಳ್ಳದೇ ಅಂಗಡಿಯವರು ಅಂತರ ಕಾಪಾಡದೇ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ವಿವಿಧ ಅಂಗಡಿ ಮಾಲಿಕರುಗಳಿಗೆ ಸುಮಾರು ೨೬ ಸಾವಿರ ರೂ ದಂಡ ವಿಧಿಸಿದ್ದೇವೆ ಎಂದು ರಾಮನಾಥಪುರ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ವಿಜಯಕುಮಾರ್ ತಿಳಿಸಿದರು.
ಇಂದು ಸೋಮವಾರ ಬೆಳಿಗ್ಗೆ ರಾಮನಾಥಪುರ ಗ್ರಾಮ ಪಂಚಾಯಿತಿ, ನಾಡಕಛೇರಿ ಮತ್ತು ಕೊಣನೂರು ಠಾಣೆ ಪೋಲಿಸ್ ಸಿಬ್ಬಂದಿ ವರ್ಗ ಎಲ್ಲಾ ಇಲಾಖೆಯ ಸಿಬ್ಬಂದಿಗಳು ಸೇರಿ ಇಲ್ಲಿಯ ಬಸವೇಶ್ವರ ವೃತ್ತದಲ್ಲಿ ನಡೆಯುತ್ತಿದ್ದ ಸಂತೆಗೆ ಬಂದಿದ್ದ ವ್ಯಾಪಾರಸ್ಥರು, ಹಾಗೂ ಸಾರ್ವಜನಿಕರನ್ನು ಇಲ್ಲಿಯ ಪಟ್ಟಾಭಿರಾಮ ಗ್ರಾಮಾಂತರ ಶಾಲೆಯ ಅವರಣಕ್ಕೆ ಸ್ಥಾಳಾಂತರಿಸಿ ವ್ಯಾಪಾರದ ಅನುಕೂಲ ಮಾಡಿ ಅಂತರ ಸರಿಪಡಿಸಿದರು.
ಜಿಲ್ಲೆಯಾದ್ಯಂತ ದಿನಸಿ ಅಂಗಡಿಗಳು ವಾರದಲ್ಲಿ ಮೂರು ದಿನ ಮಾತ್ರ ತೆರೆಯಬೇಕು ಉಳಿದ ದಿನಗಳು ಪೂರ್ಣ ಲಾಕ್‌ಡೌನ್ ಎಂಬುದಾಗಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು ಅವರ ಆದೇಶದಂತೆ ನಮ್ಮ ಪಂಚಾಯತಿವತಿಯಿAದಲೂ ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ತಿಳಿಯುವ ಹಾಗೆ ಗೂಡ್ಸ್ ಅಟೋ ಮತ್ತು ಟ್ರಾಕ್ಟರ್ ಮುಖ್ಯಾಂತರ ಪ್ರಚಾರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಅಂಗಡಿಯವರು ಸಮಯ ಮೀರಿದ ಮೇಲೆ ತೆರೆದಿದ್ದರೆ ಹಾಗೂ ಇತರೆ ದಿನಗಳಲ್ಲಿ ತೆರೆದಿದ್ದರೆ ಮುಲಾಜಿಲ್ಲದೇ ಪ್ರಕರಣ ದಾಖಲಿಸಲಾಗುವುದು ಎಂದರು.
ಅರಕಲಗೂಡು ತಾಲ್ಲೂಕು ಅರಣ್ಯ ವಲಯಾಧಿಕಾರಿ ಅರುಣ್, ರಾಮನಾಥಪುರ ನಾಡಕಚೇರಿ ಉಪತಹಸಿಲ್ದಾರ್ ಸಿ ಸ್ವಾಮಿ, ಪಂಚಾಯಿತಿ ಕಾರ್ಯದರ್ಶಿ ಎಚ್.ಸಿ. ನಿಂಗಣ್ಣ, ಪಿ.ಎಸ್.ಐ. ರಾಜಣ್ಣ, ಶ್ರೀನಿವಾಸ್, ಹರೀಶ್, ವಿ.ಎ. ಧಮೇಶ್ ಮುಂತಾದವರು ಇದ್ದರು.
.