ಗ್ರಾಮೀಣ ಭಾಗದ ಪ್ರತಿ ಮನೆಗಳ ಜನತೆಯನ್ನು ಸಮೀಕ್ಷೆ ನಡೆಸಿ : ಎ.ಟಿ. ರಾಮಸ್ವಾಮಿ

 ರಾಮನಾಥಪುರ:- ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕು ಹೆಚ್ಚಳದ ಹಿನ್ನಲೆಯಲ್ಲಿ ತ್ವರಿತವಾಗಿ ಹಾಗೂ ಪರಿಣಾಮಕಾರಿ ನಿರ್ವಹಣೆ ಮಾಡಿಬೇಕು. ಗ್ರಾಮೀಣ ಭಾಗದ ಪ್ರತಿ ಮನೆಗಳ ಜನತೆಯನ್ನು ಸಮೀಕ್ಷೆ ನಡೆಸಿ, ಔಷಧ ವಿರರಣೆ ಅದ್ಯತೆ ನೀಡಿಬೇಕು ಎಂದು ಸ್ಥಳೀಯ ಅರೋಗ್ಯಾಧಿಕಾರಿಗಳಿಗೆ ಶಾಸಕ ಡಾ. .ಟಿ. ರಾಮಸ್ವಾಮಿ ಸೂಚಿಸಿದರು.



ರಾಮನಾಥಪುರ ಹೋಬಳಿ ಗಂಗೂರು ಗ್ರಾಮದ ಅರೋಗ್ಯ ಕೆಂದ್ರದ ಅವರಣದಲ್ಲಿ ಶಾಸಕ ಡಾ. .ಟಿ. ರಾಮಸ್ವಾಮಿ ಮಾತನಾಡಿದ ಅವರು ಕೊರೊನಾ ಎಂಬ ಮಹಾಮಾರಿ ಸೋಂಕು ಕರಿನರಳು ಗ್ರಾಮೀಣ ಭಾಗದ ಪ್ರತಿ ಹಳ್ಳಿಗಳ ಭಾಗದ ಜನರನ್ನು ಅವರಿಸುತ್ತಿದೆ. ಈಸೋಂಕಿಗೆ ಕಡಿವಾಣ ಹಾಕಬೇಕಾದರೆ ಸ್ವಚ್ಚತೆಗೆ ಅದ್ಯತೆ ಕೊಡುವುದರಜೊತೆಗೆ ಸಾಮಾಜಿಕ ಅಂತರವನ್ನು ಕಾದುಕೊಳ್ಳುತ್ತಿರುವುದರಿಂದ ಮಾತ್ರ ಸಾಧ್ಯ ಎಂಬುದನ್ನು ಜನರು ಅರಿಯಬೇಕಿದೆ. ಸೋಂಕಿತರು ಮನೆಯಿಂದ ಹೊರಬರದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಹಾಗೂ ಮನೆಯಲ್ಲೇ ಐಸೊಲೇಷನ್ ಅಗುವ ಸೋಂಕಿತರಿಗೆ ತಪ್ಪದೇ ಸೀಲ್ ಹಾಕಬೇಕು. ಕೇರ್ ಸೆಂಟರ್ಗಳಲ್ಲಿ ಎಲ್ಲಿಯೂ ಲೋಪವಾಗದಂತೆ ಎಚ್ಚರ ವಹಿಸಬೇಕು. ಸರ್ಕಾರ ಯಾವ್ಯಾವ ಅಂಗಡಿಗಳನ್ನು ತೆರೆಯಬಹುದು ಎಂಬ ನಿರ್ದೇಶನ ನೀಡಿದೆಯೋ ಅಂತಹವರು ಮಾತ್ರ ಅಂಗಡಿಗಳನ್ನು ತೆರೆದು ಸಮಯಕ್ಕೆ ಸರಿಯಾಗಿ ಸಮಾನಾಂತರ ಕಾಯ್ದುಕೊಂಡು ಮತ್ತು ತಪ್ಪದೇ ಮಾಸ್ಕ್ ಹಾಕಿಕೊಂಡು ವ್ಯಾಪಾರ ವಹಿವಾಟು ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳು ಮತ್ತು ಸಿಬ್ಬಂಧಿಗಳಿಗೆ ಸೂಚಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರು ತಹಸಿಲ್ದಾರ್ ವೈ.ಎಂ. ರೇಣುಕುಮಾರ್, ಉಪತಹಸಿಲ್ದಾರ್ ಸಿ ಸ್ವಾಮಿ, ಅರೋಗ್ಯದಿಕಾರಿ ಡಾ. ಸ್ವಾಮೀಗೌಡ, ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ತಾಲ್ಲೂಕು ಅರಣ್ಯ ವಲಯಾಧಿಕಾರಿ ಅರುಣ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಚ್.. ವಿಜಯಕುಮಾರ್, ಕಾರ್ಯದರ್ಶಿ ಎಚ್.ಸಿ. ನಿಂಗಣ್ಣ ಮುಂತಾದವರು ಭಾಗವಹಿಸಿದ್ದರು.

Post a Comment

Previous Post Next Post