ಹಾಸನ: ನಗರದ ಮಹಾವೀರ ವೃತ್ತ, ಕಲಾಭವನದ ಎದುರು ಮಹಾರಾಜ ಪಾರ್ಕ್ಗೆ ಸೇರಿಕೊಂಡAತೆ ಹಾಕಲಾಗಿರುವ ನೂತನ ಶೆಡ್ ಒಳಗೆ ಪ್ರತಿದಿನ ಬೆಳಿಗ್ಗೆ ಮಾವಿನಹಣ್ಣನ್ನು ತಂದು ಹೋಲ್ ಸೆಲ್ ವ್ಯಾಪಾರಕ್ಕೆ ಮುಂದಾಗುತ್ತಾರೆ. ಇದನ್ನು ಕೊಂಡುಕೊAಡುಕೊಳ್ಳಲು ಕೊರೋನಾವನ್ನು ಕೇರ್ ಮಾಡದೆ ನೂಕುನುಗ್ಗಲಿನಲ್ಲಿ ವ್ಯಾಪಾರಸ್ತರು ಇರುವುದು ಕಂಡು ಬಂದಿತು.
ಅನೇಕ ವಾಹನಗಳಲ್ಲಿ ಮಾವಿನ ಹಣ್ಣುಗಳು ಲೋಡ್ ಗಟ್ಟಲೆ ಶೆಡ್ ಒಳಗೆ ಇಳಿಸುತ್ತಾರೆ. ಈ ಹಣ್ಣನ್ನು ಕೊಂಡುಕೊಳ್ಳಲು ವ್ಯಾಪಾರಸ್ತರು ಮುಗಿ ಬೀಳುತ್ತಾರೆ. ಸರಿಯಾಗಿ ಕೂಡ ಮಾಸ್ಕ್ ಹಾಕದೆ ಮತ್ತು ಸಾಮಾಜಿಕ ಅಂತರ ಕಾಪಾಡದೇ ಒಟ್ಟಿಗೆ ಗುಂಪು-ಗುAಪಾಗಿ ನಿಂತು ವ್ಯಾಪಾರವನ್ನು ಮಾಡುವುದನ್ನು ನೋಡಿದರೇ ಕೊರೋನಾ ಹರಡುವ ಸ್ಥಳವಾಗಿ ಪರಿವರ್ತನೆ ಆಗುವಲ್ಲಿ ಯಾವ ಸಂಶಯವಿಲ್ಲ. ಕೊರೋನಾದಿಂದ ದೂರವಿರಲು ಜಿಲ್ಲಾಡಳಿತವು ಅನೇಕ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಅನೇಕರು ಅದನ್ನು ಗಾಳಿಗೆ ತೂರಿ ತಮಗೆ ಇಷ್ಟ ಬಂದAತೆ ಈರೀತಿ ಗುಂಪಾಗಿ ಇರುವುದರಿಂದಲೇ ಹಾಸನ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ದಿನೆ ದಿನೆ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದೆ. ಜೊತೆಗೆ ಪ್ರತಿ ದಿನ ೨೦ಕ್ಕೂ ಹೆಚ್ಚು ಜನರ ಮಾರಾಣ ಹೋಮವಾಗುತ್ತಿದೆ. ಎಲ್ಲಾವನ್ನು ಸರಕಾರವೇ ಮಾಡಲು ಸಾಧ್ಯವಾಗುವುದಿಲ್ಲ. ಜೊತೆಗೆ ಸಾರ್ವಜನಿಕರು ಕೂಡ ಸಹಕರಿಸಿದರೇ ಮಾತ್ರ ಕೊರೋನಾವನ್ನು ಬಡಿದೋಡಿಸಲು ಸಾಧ್ಯ. ಗುಂಪಾಗಿ ನಿಲ್ಲುವವರನ್ನು ಮೊದಲು ನಿಯಂತ್ರಿಸಬೇಕು. ಇಲ್ಲವಾದರೇ ಜಿಲ್ಲೆಯಲ್ಲಿ ಇನ್ನು ಹೆಚ್ಚಿನ ಸಾವು-ನೋವುಗಳು ಹೆಚ್ಚಾಗಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.