ಹಾಸನ: ಕೊರೋನಾ ಮಹಾಮಾರಿ ಆವರಿಸಿ ಪ್ರತಿದಿನ ಪಾಸಿಟಿವ್ ಪ್ರಕರಣ ಹೆಚ್ಚು ಬರುವುದಲ್ಲದೇ ಸಾವುಗಳು ಸಂಭವಿಸುತ್ತಿರುವುದರಿAದ ಜೆಡಿಎಸ್ ಪಕ್ಷದ ಯುವ ಮುಖಂಡ ಸಚಿನ್ ಗೌಡ ನೇತೃತ್ವದಲ್ಲಿ ತಾಲೂಕಿನ ಹನುಮಂತಪುರ ಗ್ರಾಮಕ್ಕೆಲ್ಲಾ ಸ್ಯಾನಿಟೈಸರ್ ಮಾಡಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಜೆಡಿಎಸ್ ಯುವ ಮುಖಂಡ ಸಚನ್ ಗೌಡ ರವರು, ಕೊರೋನಾ ಎಂಬುದು ವ್ಯಾಪಾಕವಾಗಿ ಹರಡುತ್ತಿರುವ ಉದ್ದೇಶದಲ್ಲಿ ಇಡೀ ಹನುಮಂತಪುರ ಗ್ರಾಮಕ್ಕೆ ಟ್ಯಾನಿಟೈಸರ್ ಮಾಡಲಾಗುತ್ತಿದೆ. ಈ ಗ್ರಾಮದಲ್ಲಿ ಕನಿಷ್ಠ ಎಂದರೆ ೭೦ಕ್ಕಿಂತ ಹೆಚ್ಚು ಕೊರೋನಾ ಪಾಸಿಟಿವ್ ಕೇಸು ಪತ್ತೆಯಾಗಿದ್ದರೂ ಜಿಲ್ಲಾಡಳಿತವು ಯಾವ ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದರು. ಜೆಡಿಎಸ್ ಯುವ ಮುಖಂಡರೆಲ್ಲಾ ಸೇರಿ ಹನುಮಂತಪುರ ಗ್ರಾಮದ ಎಲ್ಲಾ ಕಡೆ ಔಷಧಿ ಸಿಂಪಡಿಸಲಾಗುತ್ತಿದೆ. ಮುಂದೆ ಈ ಗ್ರಾಮಕ್ಕೆ ಸೇರಿದ ಹಳ್ಳಿಗಳಲೆಲ್ಲಾ ಸ್ಯಾನಿಟೈಸರ್ ಹಾಕುವ ಕೆಲಸ ಮಾಡುವುದಾಗಿ ಹೇಳಿದರು.
ಇದೆ ವೇಳೆ ಜೆಡಿಎಸ್ ಮುಖಂಡರಾದ ಅವಿಗೌಡ, ಶಶಿಧರ್, ರವಿ, ಶ್ರೀಧರ್, ಸಂತೋಷ್ ಇತರರು ಪಾಲ್ಗೊಂಡಿದ್ದರು.
Tags
ಹಾಸನ