ಹಿಮ್ಮತ್ ಸಿಂಗ್ ಕಾ ಬಟ್ಟೆ ಕಾರ್ಖಾನೆ ಮುಂದೆ ಕಾಂಗ್ರೆಸ್ ಪ್ರತಿಭಟನೆ

ಹಾಸನ: ಕೊರೋನಾ ಆವರಿಸಿ ಪ್ರತಿನಿತ್ಯ ಸಾವು-ನೋವು ಅನುಭವಿಸುತ್ತಿರುವ ಹಿನ್ನಲೆಯಲ್ಲಿ ಸರಕಾರವು ಲಾಕ್ವ ಡೌನ್ ಆದೇಶ ತಂದಿದ್ದರೂ ಎಲ್ಲಾವನ್ನು ಉಲ್ಲಂಘಿಸಿ ಸಾವಿರಾರು ಜನ ಕಾರ್ಮಿಕರೊಂದಿಗೆ ಕೆಲಸ ನಡೆಸುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಹೆಚ್.ಕೆ. ಮಹೇಶ್ ನೇತೃತ್ವದಲ್ಲಿ ಹಿಮ್ಮತ್ ಸಿಂಗ್ ಕಾ ಬಟ್ಟೆ ಕಾರ್ಖಾನೆ ಮುಂದೆ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಲಾಯಿತು.


    ಇಡೀ ಪ್ರಪಂಚದಲ್ಲಿಯೇ ಕೊರೋನಾ ಮಹಾಮಾರಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರವು ಲಾಕ್ ಡೌನ್ ನಿಯಮ ಜಾರಿಗೆ ತಂದಿದೆ. ಆದರೇ ಬಡವರಿಗೆ ಒಂದು ನೀತಿಯಲ್ಲಿ ಮತ್ತು ಶ್ರೀಮಂತರಿಗೆ ಮತ್ತೊಂದು ರೀತಿ ಲಾಕ್ ಡೌನ್ ನನ್ನು ರೀತಿ ಜಾರಿಗೆ ಬಂದಿದೆ. ನಗರದ ಹೊರವಲಯ ಕೈಗಾರಿಕ ಪ್ರದೇಶ ಹನುಮಂತಪುರ ಬಳಿ ಇರುವ ಹಿಮ್ಮತ್ ಸಿಂಗ್ ಕಾ ಬಟ್ಟೆ ಕಾರ್ಖಾನೆ ಕಂಪನಿಯಲ್ಲಿ ಕೆಲಸಗಾರರನ್ನು ತೆಗೆದುಕೊಂಡು ಕೆಲಸ ನಡೆಸಲು ೨೪ ಗಂಟೆಗಳ ಕಾಲ ಶೇಕಡ ೫೦ ರಷ್ಟು ಅನುಮತಿ ನೀಡಿದ್ದು, ಆದರೇ ಕಂಪನಿ ಒಳಗೆ ನೋಡಿದರೇ ಸಾವಿರಾರು ಜನರು ಕೆಲಸ ಮಾಡುತ್ತಿದ್ದಾರೆ. ಇದು ರಾಜ್ಯ ಸರಕಾರದು ನೀತಿನಾ, ಜಿಲ್ಲಾಡಳಿತದ್ದು ನ್ಯಾಯಾನಾ ಎಂದು ದೂರಿದರು. ಈಬಗ್ಗೆ ಬಟ್ಟೆ ಕಂಪನಿ ನಡೆಸುತ್ತಿರುವವರಿಗೆ ಪ್ರಶ್ನೆ ಮಾಡಲಾಗುತ್ತಿಲ್ಲ. ಬಿತ್ತನೆ ಆಲೂಗೆಡ್ಡೆ ವ್ಯಾಪಾರ ಮಾಡಲು ರೈತರು ಬಂದರೇ ಬೆಳಿಗ್ಗೆ ೧೦ ಗಂಟೆಗೆ ಬಂದ್ ಮಾಡಿಸುತ್ತೀರಾ! ಪುಲ್ ಲಾಕ್ ಡೌನ್ ಇದ್ರೆ ಅವಕಾಶವೇ ಕೊಡುವುದಿಲ್ಲ. ಇವೆಲ್ಲಾ ಜಿಲ್ಲಾಡಳಿತಕ್ಕೆ ಕಾಣಿಸುವುದಿಲ್ಲವೇ ಎಂದು ಪ್ರಶ್ನೆ ಮಾಡಿದರು. ಇದೆಲ್ಲಾ ನೋಡಿದರೇ ಇಂತಹ ಕಂಪನಿಗಳಿAದ ಜಿಲ್ಲಾಡಳಿತ ಏನಾದರೂ ಹಣ ಪಡೆದಿದಿಯಾ? ಇಲ್ಲವೆ ಜಿಲ್ಲಾ ಉಸ್ತುವಾರಿ ಸಚಿವರು ಹಣ ಪಡೆದಿದ್ದಾರ ಎಂದ ಅವರು, ಕೊರೋನಾದಲ್ಲಿ ಇಂಡಸ್ಟಿçಯಲ್ ಗೊಂದು ನ್ಯಾಯಾನಾ? ಮನುಷ್ಯರ ಪ್ರಾಣ ಎಲ್ಲ ಒಂದೆತಾನೆ ಎಂದು ಪ್ರಶ್ನೆ ಮಾಡಿದರು. ಪ್ರತಿದಿನ ೨,೫೦೦ ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗುತ್ತಿದ್ದು, ಹಿಮ್ಮತ್ ಸಿಂಗ್ ಕಾ ಕಂಪನಿಯೊAದರಲ್ಲೆ ಪ್ರತಿದಿನ ನೂರಾರು ಕೊರೋನಾ ಸೋಂಕು ದಾಖಲಾಗುತ್ತಿದೆ. ಇದಕ್ಕೆ ಹೊಣೆ ಯಾರು? ಜಿಲ್ಲಾ ಉಸ್ತುವಾರಿ ಸಚಿವರು, ಈ ಸರಕಾರ ಇದಕ್ಕೆ ನೇರ ಹೊಣೆ ಆದರೇ ಮುಖ್ಯವಾಗಿ ಹಾಸನ ಕ್ಷೇತ್ರದ ಶಾಸಕ ಪ್ರೀತಮ್ .ಜೆ. ಗೌಡ ಕಾರಣ. ಕೊರೋನಾ ಬಂದಿದೆ ನನಗೆ ಎಂದು ಬೆಂಗಳೂರಿನಲ್ಲಿ ಮಲಗಿ, ಆಕ್ಸಿಜನ್ ಕೊಡಿಸಿದ್ದೀನಿ ಎಂದು ಹೇಳುವವರು ಇಂತಹ ಕಂಪನಿಗಳೆಲ್ಲಾ ಕಾಣುತ್ತಿಲ್ಲವೇ ಎಂದರು. ಅವರು ಕೂಡ ಹಣ ತೆಗೆದುಕೊಳ್ಳುವಲ್ಲಿ ಬಾಗಿಯಾಗಿದ್ದಾರೆ ಎಂದು ಆರೋಪ ಮಾಡುವುದಾಗಿ ಹೇಳಿದರು. ಕೂಡಲೇ ಎಚ್ಚೆತ್ತುಕೊಂಡು ಈ ಬಟ್ಟೆ ಕಂಪನಿಯನ್ನು ಬಂದ್ ಮಾಡಿಸಬೇಕು ಇಲ್ಲವಾದರೇ ನಾಳೆ ಜಿಲ್ಲಾಡಳಿತದ ಮುಂದೆ ಧರಣಿ ಮಾಡುವುದಾಗಿ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಸದಸ್ಯರಾದ ಹೆಚ್.ಕೆ. ಮಹೇಶ್ ಎಚ್ಚರಿಸಿದರು.

    ಇದೆ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಆಡುವಳ್ಳಿ ಲೋಕೇಶ್, ಗುರು, ಪ್ರವೀಣ್, ಸುಪ್ರೀತ್, ಚಂದ್ರು, ಪುರುಷೋತ್ತಮ್, ಅಸ್ಲಾಂ ಪಾಷಾ, ನಂದನ್ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post