ಹಾಸನದಲ್ಲಿ ಜನಜಂಗುಳಿ-ಟ್ರಾಫೀಕ್ ಜಾಮ್

ಹಾಸನ: ವಾರದ ಮೂರು ದಿನಗಳ ಕಾಲ ಅಗತ್ಯವಸ್ತುಗಳ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟಿರುವುದರಿಂದ ನಗರದಲ್ಲಿ ತರಕಾರಿ ಇತರೆ ಅಗತ್ಯವಸ್ತುಗಳ ಕೊಂಡುಕೊಳ್ಳಲು ಜನಜಂಗುಳಿ ಕಂಡು ಬಂದಿದ್ದು, ಜೊತೆಗೆ ಟ್ರಾಫೀಕ್ ಸಮಸ್ಯೆ ಕಾಣಿಸಿತು.


       ನಗರ ಬಸ್ ನಿಲ್ದಾಣ, ಮಹಾವೀರ ವೃತ್ತ, ಸಾಲಗಾಮೆ ರಸ್ತೆ, ಹಾಸನಾಂಬ ದೇವಸ್ಥಾನದ ರಸ್ತೆ, ರಿಂಗ್ ರಸ್ತೆ, ಬಿ.ಎಂ. ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳ ಬಳಿ ಅಗತ್ಯ ವಸ್ತುಗಳ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ವಾರದ ಮೂರು ದಿನ ಮಾತ್ರ ಬೆಳಿಗ್ಗೆ ೧೦ರ ವರೆಗೂ ವ್ಯಾಪಾರ ಮಾಡಬೇಕಾಗಿದೆ. ಉಳಿದ ನಾಲ್ಕು ದಿನಗಳ ಕಾಲ ವ್ಯಾಪಾರ ಮಾಡದೆ ಬಂದ್ ಮಾಡಬೇಕು. ಶನಿವಾರ ಮತ್ತು ಭಾನುವಾರದಂದು ಎರಡು ದಿನ ವ್ಯಾಪಾರಕ್ಕೆ ಅವಕಾಶವಿಲ್ಲದಿರುವುದರಿಂದ ಸೋಮವಾರದಂದು ರಸ್ತೆ ಮೇಲೆ ಜನರ ದಂಡೆ ಆಗಮಿಸಿತ್ತು. ಕೆಲವರು ನಡೆದುಕೊಂಡೆ ಬಂದು ವ್ಯಾಪಾರ ಮಾಡಿದರೇ ಬಹುತೇಕ ಜನರು ತಮ್ಮ ತಮ್ಮ ವಾಹನದ ಮೂಲಕ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಬಂದಿದ್ದರಿAದ ಅಲ್ಲಲ್ಲಿ ಟ್ರಾಫೀಕ್ ಜಾಮ್ ಸಮಸ್ಯೆ ಕಂಡು ಬಂದಿತು. ಎಷ್ಟೆ ಅರಿವು ಮೂಡಿಸಿದರೂ ಜನರು ಮಾತ್ರ ಪಾಲಿಸುವುದಿಲ್ಲ. ಇದರಿಂದಲೇ ಇಂದು ಕೊರೋನಾದ ಸಂಖ್ಯೆ ದಿನೆ ದಿನೆ ಹೆಚ್ಚಾಗುತಿರುವುದು. ಸಾರ್ವಜನಿಕರು ಜಾಗೃತರಾಗದಿದ್ದರೇ ಮತ್ತು ಲಾಕ್ ಡೌನ್ ಆದೇಶ ಜಾರಿಗೆ ತರುವ ಮೊದಲು ಎಲ್ಲಾ ಆಗುಹೋಗುಗಳನ್ನು ಯೋಚಿಸಿ ಮಾಡಬೇಕು ಎಂಬುದು ಅಭಿಪ್ರಾಯವಾಗಿದೆ.


Post a Comment

Previous Post Next Post