ಹಾಸನ: ಕೆ.ಪಿ.ಎಂ.ಎ. ಕಾಯಿದೆ ಉಲ್ಲಂಘಿಸಿದ ಹಿನ್ನಲೆಯಲ್ಲಿ ತಾಲೂಕಿನ ಶಾಂತಿಗ್ರಾಮದಲ್ಲಿರುವ ಹಾಸನಾಂಬ ಕ್ಲಿನಿಕ್ ಬಾಗಿಲನ್ನು ಮುಚ್ಚಿಸಿ ಬೀಗ ಹಾಕಿಸಿ ಸೀಜ್ ಮಾಡಿದ ಘಟನೆ ಗುರುವಾರ ನಡೆದಿದೆ.
ತಾಲೂಕಿನ ಶಾಂತಿಗ್ರಾಮದಲ್ಲಿರುವ ಹಾಸನಾಂಬ ಕ್ಲಿನಿಕ್ ವಿರುದ್ಧ ಪಿಡಿಒ, ಪೊಲೀಸ್ ಅಧಿಕಾರಿಗಳು, ಅಲ್ಲಿನ ಸ್ಥಳೀಯ ವೈದ್ಯರಿಂದ ಮತ್ತು ಸಾರ್ವಜನಿಕರಿಂದ ದೂರು ಬಂದಿತ್ತು. ಈ ಆಸ್ಪತ್ರೆಯಲ್ಲಿ ಯಾವ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ರೋಗಿಗಳನ್ನು ಕ್ಲಿನಿಕ್ ಒಳಗೆ ಸೇರಿಸಿಕೊಳ್ಳಲಾಗಿತ್ತು. ನಿಯಮ ಪ್ರಕಾರ ಔಷಧಿ ಕೊಡದೆ ಇಂಗ್ಲಿಷ್ ಮೆಡಿಸನ್ ಕೊಡಲಾಗುತ್ತಿತ್ತು, ಕೊರೋನಾ ಸಿಂಟೆನ್ಸ್ ಇರುವವರನ್ನು ಕೊರೋನಾ ಪರೀಕ್ಷೆಗೆ ಕಳುಹಿಸದೆ ಅವರೆ ನೇರವಾಗಿ ಚಿಕಿತ್ಸೆ ನೀಡಿ ಸೋಂಕು ಹೆಚ್ಚಾಗಲು ಕಾರಣಕರ್ತರಾಗುತ್ತಿದ್ದಾರೆ ಎಂಬ ದೂರನ್ನು ಕೊಡಲಾಗಿತ್ತು. ಈ ಬಗ್ಗೆ ಅಲ್ಲಿನ ಪಿ.ಎಸ್.ಐ. ಕೂಡ ಎಚ್ಚರಿಕೆ ಕೊಡಲಾಗಿದ್ದರೂ ಕೇರೆ ಎನ್ನದೆ ತಮ್ಮ ಕೆಲಸ ಮುಂದುವರೆಸಿದ್ದರು. ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದು ಹಾಸನಾಂಬ ಕ್ಲಿನಿಕನ್ನು ಪರಿಶೀಲನೆ ಮಾಡಲು ನಮಗೆ ಸೂಚನೆ ನೀಡಿದ್ದರು. ನಾನು ತಹಸೀಲ್ದಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಶಾಂತಿಗ್ರಾಮ ಪೊಲೀಸ್ ಠಾಣೆಯ ಪಿ.ಎಸ್.ಐ. ಎಲ್ಲಾ ಸೇರಿ ಕ್ಲಿನಿಕ್ ಗೆ ಭೇಟಿ ನೀಡಿದ ವೇಳೆ ಆಲೋಪತಿ ಇಂಗ್ಲಿಷ್ ಮೆಡಿಸನ್ ಅವರೆ ಕೊಡುತ್ತಿರುವುದು ಬೆಳಕಿಗೆ ಬಂದಿತು. ಇನ್ನು ಮೆಡಿಕಲ್ ನಡೆಸುವವರೆ ಅಲ್ಲಿ ಇರಲಿಲ್ಲ. ಮತ್ಯಾರೊ ಕುಳಿತಿದ್ದರು. ಈ ಬಗ್ಗೆ ದೂರು ದಾಖಲಿಸಿ ಹಾಸನಾಂಬ ಕ್ಲಿನಿಕ್ ನ್ನು ಸಂಪೂರ್ಣವಾಗಿ ಬಂದ್ ಮಾಡಿ ಕಾನೂನಿನ ಪ್ರಕಾರ ಬೀಗ ಹಾಕಿ ಸೀಜ್ ಮಾಡಲಾಯಿತು. ಈ ವರದಿಯನ್ನು ಅಧಿಕಾರಿಗಳಾದ ಕಾಂತರಾಜುರವರು ಜಿಲ್ಲಾಧಿಕಾರಿಗಳಿಗೆ ನೀಡಲಿದ್ದು, ಮುಂದೆ ಅವರು ಯಾವ ಆದೇಶ ಕೊಡುತ್ತಾರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆಯ ತಾಲೂಕು ಅಧಿಕಾರಿ ಡಾ. ವಿಜಯ್ ರವರು ಪತ್ರಕರ್ತರಿಗೆ ಮಾಹಿತಿ ನೀಡಿದರು.
