ಡಿಸಿ ಆರ್. ಗಿರೀಶ್ ಕೊರೋನಾ ಸೋಂಕಿತರನ್ನು ಪರಿಶೀಲನೆ ನಡೆಸಿ ಆರೋಗ್ಯ ವಿಚಾರಿಸಿ ಸೂಚನೆ

ಹಾಸನ: ತಾಲೂಕಿನ ಶಾಂತಿಗ್ರಾಮ ಹೋಬಳಿಯ ಹೊಂಗೆರೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಆರ್. ಗಿರೀಶ್ ರವರು ಗುರುವಾರದಂದು ಬೆಳಿಗ್ಗೆ ದಿಡೀರ್ ಭೇಟಿ ನೀಡಿ ಕೊರೋನಾ ಸೋಂಕಿತರನ್ನು ಪರಿಶೀಲನೆ ನಡೆಸಿ ಆರೋಗ್ಯ ವಿಚಾರಿಸಿ ಸೂಚನೆ ನೀಡಿದರು. 


      ಗ್ರಾಮಗಳಿಗೆ ತೆರಳಿದ ಜಿಲ್ಲಾಧಿಕಾರಿಗಳು ಕೊವಿಡ್ ಸೊಂಕಿತರ ಅರೋಗ್ಯ ವಿಚಾರಿಸಿ, ನೀಡಲಾಗಿರುವ ಔಷಧೋಪಚಾರ, ಚಿಕಿತ್ಸಾ ಸೌಲಭ್ಯ, ದೈನಂದಿನ ಪಾಲನೆ ಬಗ್ಗೆ ಮಾಹಿತಿ ಪಡೆದರು. ಸೋಂಕಿತರನ್ನು ಅವರ ಮನೆಗಳ ಮಂದೆಯೆ ನಿಂತು ಮಾತನಾಡಿಸಿ ಅವರ ಮನೆಯಲ್ಲಿ ಸೂಕ್ತ ಸೌಲಭ್ಯಗಳಿಲ್ಲದವರು ಕೊವಿದ್ ಕೇರ್ ಕೇಂದ್ರಗಳಿಗೆ ಸ್ಥಳಾಂತರವಾಗುವAತೆ ಸೂಚಿಸಿದರು. ಹತ್ತಿರದಲ್ಲಿರುವ ಶಾಲೆಗಳಿಗೆ ಕೊರೋನಾ ಸೋಂಕಿರ‍್ನು ಸೇರಿಸಿ ನೋಡಿಕೊಳ್ಳಬೇಕು. ಪ್ರತಿನಿತ್ಯ ವೈದ್ಯರು ಬಂದು ತಪಾಸಣೆ ಮಾಡಬೇಕು. ಮಾಸ್ಕ್ ಹಾಕದವರಿಗೆ ತಿಳಿ ಮಾತನ್ನು ಹೇಳಿ ಜಾಗೃತಿ ಮೂಡಿಸಿದರು. ಆಶಾ ಕಾರ್ಯಕರ್ತೆಯರ ಕೆಲಸದ ಬಗ್ಗೆ ವಿಚಾರಿಸಿ ನಿಗಾವಹಿಸಲು ಸೂಚಿಸಿದರು.

       ಇದೆ ವೇಳೆ ತಹಸೀಲ್ದಾರ್ ಶಿವಶಂಕರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ವಿಜಯ್ ಹಾಗೂ ಶಾಂತಿಗ್ರಾಮ ಪೊಲೀಸ್ ಠಾಣೆ ಪಿ.ಎಸ್.ಐ ಇತರರು ಉಪಸ್ಥಿತರಿದ್ದರು.


Post a Comment

Previous Post Next Post