ಹಾಸನ: ಕೊರೋನಾ ಲಾಕ್ ಡೌನ್ ನಿಂದ ಕೋಳಿ ಸಾಕಾಣಿಕೆದಾರರಿಗೆ. ಬಾರಿ ನಷ್ಟವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇತರ ವ್ಯಾಪಾರ ಕ್ಷೇತ್ರಗಳಿಗೂ ಘೋಷಣೆ ಮಾಡಿರುವ ಪ್ಯಾಕೇಜ್ ಅಂತೆ ಕೋಳಿ ಸಾಕಾಣಿಕೆ ದಾರರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಅಖಿಲ ಕರ್ನಾಟಕ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ನಿರ್ದೇಶಕ ಹಾಗೂ ಹಾಸನ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
ರಾಜ್ಯದಲ್ಲಿ ೨೫ ಸಾವಿರಕ್ಕೂ ಹೆಚ್ಚು ಕೋಳಿ ಸಾಕಾಣಿಕೆದಾರರು ಕರೋನಾ ಲಾಕ್ಡೌನ್ ನಿಯಮದಿಂದ ವ್ಯಾಪಾರ ಕುಸಿತಗೊಂಡು ರೈತರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದು, ರೈತರಾದ ನಾವು ವ್ಯವಸಾಯದ ಉಪಕಸುಬು ಕೋಳಿ ಸಾಕಾಣಿಕೆ ಉದ್ಯಮದಲ್ಲಿ ತೊಡಗಿಸಿಕೊಂಡು ಈ ದೇಶಕ್ಕೆ ಆಹಾರ ಭದ್ರತೆ ಒದಗಿಸುತ್ತಿರುವುದು ಸರಿಯಷ್ಟೇ. ಯಾವುದೇ ಸಾಂಕ್ರಾಮಿಕ ರೋಗ ಬಂದರು ಕೋಳಿ ಸಾಕಾಣಿಕೆದಾರರಿಗೆ .ಹೊಡೆತ ತಪ್ಪಿದ್ದಲ್ಲ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಕೋಳಿ ಸಾಕಾಣಿಕೆದಾರರು ತೀವ್ರ ನಷ್ಟ ಅನುಭವಿಸಿದ್ದು ಈ ವರ್ಷವೂ ಲಾಕ್ಡೌನ್ ಇಂದ ಎಲ್ಲ. ರೈತರಿಗೂ ನಷ್ಟವಾಗುತ್ತಿದೆ. ರಾಜ್ಯದಲ್ಲಿ ಶೇಕಡಾ ೫೦ರಷ್ಟು ಕೋಳಿ ವ್ಯಾಪಾರ ಕುಸಿತವಾಗಿದೆ. ಒಂದು ಕೆಜಿ ಮಾಂಸದ ಬೆಲೆ ಐವತ್ತರಿಂದ ಅರವತ್ತು ರೂಪಾಯಿ ಮಾರಾಟವಾಗುತ್ತಿರುವುದರ ಪರಿಣಾಮ ರೈತರು ಲಕ್ಷಾಂತರ ರೂ ನಷ್ಟ ಅನುಭವಿಸುತ್ತಿದ್ದಾರೆ. ಈ ಉದ್ಯಮದಲ್ಲಿ ದುಡಿಯುತ್ತಿರುವ ೨೫,೦೦೦ ಸಾವಿರ ಕೋಳಿ ಸಾಕಾಣಿಕೆದಾರರ ಕುಟುಂಬಕ್ಕೆ ಅಕುಲವಾಗುವಂತೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಹಾಗೂ ಕೋಳಿ ಸಾಕಾಣಿಕೆಗೆ ವಿದ್ಯುತ್ತನ್ನು ಉಚಿತವಾಗಿ ನೀಡಬೇಕೆಂದು ಕೋಳಿ ಸಾಕಾಣಿಕೆ ದಾರರ ಸಂಕಷ್ಟಕ್ಕೆ ಸ್ಪಂದಿಸಬೇಕೆAದು ಚಂದ್ರಶೇಖರ್ ಮನವಿ ಮಾಡಿದ್ದಾರೆ.
