ಹಾಸನ: ನಗರದ ಶ್ರೀಗಂಧದ ಕೋಟಿ ಹಿಂಬಾಗ, ಕೆ.ಆರ್. ಪುರಂನಲ್ಲಿರುವ ಜೀವಸಂಜೀವಿನಿ ರಕ್ತಕೇಂದ್ರ ಆವರಣದಲ್ಲಿ ನವಕರ್ನಾಟಕ ಯುವಶಕ್ತಿ ಹಾಸನ ಜಿಲ್ಲಾ ಘಟಕದಿಂದ ಬೃಹತ್ ರಕ್ತದಾನ ಶಿಬಿರ ನಡೆಸಲಾಯಿತು.
ಭಾನುವಾರದಂದು ಬೆಳಗಿನಿಂದ ಮದ್ಯಾಹ್ನದವರೆಗೂ ನವಕರ್ನಾಟಕ ಯುವಶಕ್ತಿ ಘಟಕದ ಕಾರ್ಯಕರ್ತರು ಸ್ವಯಂ ಪ್ರೇರಿತವಾಗಿ ಬಂದು ರಕ್ತದಾನ ಮಾಡಿದರು. ಕೊರೋನಾ ಎಂಬ ಮಹಾಮಾರಿ ಆವರಿಸಿರುವ ತುರ್ತು ಸಂದರ್ಭದಲ್ಲಿ ರಕ್ತದ ಕೊರತೆ ಹೆಚ್ಚು ಕಂಡು ಬರುತ್ತಿದೆ. ಅಪಘಾತ ಹಾಗೂ ಹೆರಿಗೆ ಇತರೆ ತುರ್ತು ವೇಳೆ ರಕ್ತದ ಅವಶ್ಯಕತೆ ಎದುರಾಗುತ್ತದೆ. ಈಗಾಗಲೇ ಸರಕಾರವು ೧೮ ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ಹಾಕಲು ಮುಂದಾಗಿದ್ದು, ಲಸಿಕೆ ಹಾಕಿಸಿಕೊಂಡವರು ೬೦ ದಿನಗಲ ಕಾಲ ರಕ್ತದಾನ ಮಾಡುವಂತಿಲ್ಲ ಎಂದರು. ಯರ‍್ಯಾರು ಇನ್ನು ವ್ಯಾಕ್ಸೀನೇಷನ್ ಹಾಕಿಸಿಕೊಂಡಿರುವುದಿಲ್ಲ ಅಂತವರು ರಕ್ತದಾನವನ್ನು ಮಾಡುವ ಮೂಲಕ ರಕ್ತದ ಕೂರತೆಯನ್ನು ದೂರ ಮಾಡಬೇಕಾಗಿದೆ. ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಮತ್ತೋಬ್ಬರ ಜೀವ ಉಳಿಸೋಣ ನಿಟ್ಟಿನಲ್ಲಿ ಜೀವಸಂಜೀವಿನಿ ರಕ್ತಕೇಂದ್ರ ಜೊತೆಯಲ್ಲಿ ಇಂತಹ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ನವಕರ್ನಾಟಕ ಯುವ ಶಕ್ತಿ ವೇದಿಕೆಯ ರಾಜ್ಯ ಉಪಾಧ್ಯಕ್ಷ ಡಿ. ಶಂಕರಗೌಡ ಹೇಳಿದರು.
ಇದೆ ವೇಳೆ ಜೀವಸಂಜೀವಿನಿ ರಕ್ತಕೇಂದ್ರದ ರವಿಕುಮಾರ್, ಮೋಹನ್ ಕುಮಾರ್, ನವಕರ್ನಾಟಕ ಯುವಶಕ್ತಿ ಘಟಕದ ಆಲುರು ತಾಲೂಕು ಅಧ್ಯಕ್ಷ ನಂದೀಶ್, ಕಟ್ಟಾಯ ಹೋಬಳಿ ಘಟಕದ ಅಧ್ಯಕ್ಷ ಅಮೃತ್, ನಿಟ್ಟೂರು ಹೋಬ್ಳಿಯ ಶರತ್ ಕುಮಾರ್, ತಾಲೂಕು ಉಪಾಧ್ಯಕ್ಷ ಕಿರಣ್ ಕುಮಾರ್, ಜಿ.ಪಿ. ನಂದೀಶ್, ಆಟೋ ಘಟಕ ಸಂಘದ ಹೇಮಂತ್, ನಾಗರಾಜು, ಯುವ ಘಟಕದ ಕಿರಣ್, ಬೇಲೂರು ತಾಲೂಕು ಅಧ್ಯಕ್ಷ ಗಿರೀಶ್, ಹಗರೆಯ ಭಾನುಕುಮಾರ್ ಇತರರು ಉಪಸ್ಥಿತರಿದ್ದರು.