ರಸ್ತೆಗೇನಾದರೂ ನಿಮ್ಮ ವಾಹನ ಇಳಿದರೇ ಲಾಕ್ ಡೌನ್ ಮುಗಿಯುವರೆಗೂ ವಾಪಸ್ ಸಿಗಲ್ಲ.

ಹಾಸನ: ದ್ವೀಚಕ್ರ ವಾಹನ, ಕಾರು, ಆಟೋ ಇತರೆ ಯಾವ ವಾಹನಗಳು ಏನಾದರೂ ರಸ್ತೆಗೀಳಿದರೇ ನಿಮ್ಮ ವಾಹನಗಳು ಲಾಕ್ ಡೌನ್ ಮುಗಿಯುವವರೆಗೂ ವಾಪಸ್ ಸಿಗುವುದಿಲ್ಲ.




      ಈಗಾಗಲೇ ಸರಕಾರ ಜಾರಿಗೆ ತರಲಾಗಿರುವ ನಿಯಮಗಳನ್ನು ಯತವತ್ತಾಗಿ ಕಾಪಾಡಲು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಿದ್ಧರಾಗಿದ್ದಾರೆ. ಯಾವುದೇ ಬೈಕ್, ಕಾರು, ಆಟೋ ಇತರೆ ಯಾವ ವಾಹನಗಳ ಓಡಾಟಕ್ಕೂ ಅವಕಾಶವಿಲ್ಲ. ತರಕಾರಿ, ಹಣ್ಣು, ಹಾಲು, ಮಾಂಸ, ದಿನಸಿ, ಔಷಧಿ ಹಾಗೂ ಅಗತ್ಯ ವಸ್ತುಗಳನ್ನು ತರಲು ನಡೆದುಕೊಂಡು ನಿಗಧಿತ ಸಮಯದಲ್ಲೆ ಹೋಗಿ ಬರಬೇಕಾಗಿದೆ. ಆಸ್ಪತ್ರೆ ಮತ್ತು ಔಷದಿ ಹೆಸರು ಹೇಳಿಕೊಂಡು ವಾಹನದಲ್ಲಿ ಓಡಾಡುವಂತಿಲ್ಲ. ಅನಗತ್ಯವಾಗಿ ತಿರುಗಾಡುವ ವಾಹನಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗುತ್ತದೆ. ಯಾರಾದರೂ ಗುಂಪಾಗಿ ಜನರು ಸೇರಿದರೇ ಅವರ ವಿರುದ್ಧವು ಕೇಸು ದಾಖಲಿಸಲಾಗುತ್ತದೆ. ಬೆಳಿಗ್ಗೆ ೬ ರಿಂದ ೧೦ರ ವರೆಗೂ ಮಾತ್ರ ನಡೆದುಕೊಂಡು ಹೋಗಿ ಅಗತ್ಯ ವಸ್ತುಗಳ ಖರೀದಿ ಮಾಡಲು ಸಮಯ ಕೊಡಲಾಗಿದ್ದು, ನಂತರದಲ್ಲಿ ಏನಾದರೂ ಅನಗತ್ಯವಾಗಿ ರಸ್ತೆಗೆ ಬಂದವರಿಗೆ ಪೊಲೀಸ್ ರುಚಿ ತೋರಿಸಬೇಕಾಗುತ್ತದೆ. ಲಾಕ್ ಡೌನ್ ಮೊದಲ ದಿನದಲ್ಲಿ ಅನಗತ್ಯವಾಗಿ ಓಡಾಡುವ ಅನೇಕ ವಾಹನಗಳನ್ನು ಸೀಜ್ ಮಾಡಿ ದಂಢ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಖುದ್ಧಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೆ ರಸ್ತೆಯಲ್ಲಿ ನಿಂತು ಅನಗತ್ಯ ಓಡಾಡುವ ವಾಹನಗಳಿಗೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಖರೀದಿ ಮಾಡಬೇಕಾದರೇ ಮನೆ ಹತ್ತಿರ ಇರುವ ಅಂಗಡಿಗಳಲ್ಲೆ ಖರೀದಿಯನ್ನು ಮಾಡಲು ವಾಹನ ಬಳಸದೆ ನಡೆದುಕೊಂಡು ಹೋಗಬೇಕು. ಅನಗತ್ಯವಾಗಿ ಹೊರಗಡೆ ಯಾರು ಬರಬಾರದು. ಏನಾದರೂ ಬಂದರೇ ಅಂತಹ ವಾಹನವನ್ನು ಪೊಲೀಸ್ ಇಲಾಖೆ ವಶಪಡಿಸಿಕೊಳ್ಳುತ್ತದೆ. ಸಾರ್ವಜನಿಕರು ಕಾನೂನು ನಿಯಮವನ್ನು ಅರ್ಥ ಮಾಡಿಕೊಳ್ಳಬೇಕು ಎಂಬುದು ನಮ್ಮ ಮನವಿ. ಸೋಮವಾರ ಮದ್ಯಾಹ್ನದ ವೇಳೆಗೆ ಹಾಸನ ಹೊಂದರಲ್ಲೆ ೫೫೪ ದ್ವೀಚಕ್ರ ವಾಹನ ಮತ್ತು ೩೭ ನಾಲ್ಕು ಚಕ್ರದ ವಾಹನವನ್ನು ಸೀಜ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ತಿಳಿಸಿದ್ದಾರೆ.


Post a Comment

Previous Post Next Post