ಹಾಸನ: ವಾರದ ನಾಲ್ಕು ದಿನಗಳ ಲಾಕ್ ಡೌನ್ ವೇಳೆ ಪಡಿತರ ವಿತರಣೆಗೆ ಯಾವ ತಡೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.
ಜಿಲ್ಲಾ ಪಂಚಾಯತ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಅವರು, ದಿನ ನಿತ್ಯ ಪದಾರ್ಥಗಳ ವ್ಯಾಪಾರ ಮಾಡಲು ಮಾತ್ರ ಬೆಳಿಗ್ಗೆ ೬ ರಿಂದ ೧೦ರ ವರೆಗೂ ನಾಲ್ಕು ಗಂಟೆಗಳ ಕಾಲ ವಾರದ ಮೂರು ದಿನಗಳ ಕಾಲ ಅವಕಾಶ ಕಲ್ಪಿಸಲಾಗಿದೆ. ಉಳಿದ ನಾಲ್ಕು ದಿನಗಳು ಸಂಪೂರ್ಣ ಲಾಕ್ ಡೌನ್ ಮಾಡಲಾಗುವುದು. ಮೆಡಿಕಲ್ ಮತ್ತು ಆರೋಗ್ಯಕ್ಕೆ ಸಂಬAಧಿಸಿದವು ಮತ್ತು ಹಾಲು ಮಾರಾಟಕ್ಕೆ ಮಾತ್ರ ಅವಕಾಶ ಕೊಡಲಾಗಿದೆ. ಉಳಿದ ಎಲ್ಲಾ ಚಟುವಟಿಕೆಗಳನ್ನು ಮೂರು ದಿವಸಗಳ ಕಾಲ ನಿಗಧಿ ಮಾಡಿದ ಸಮಯಕ್ಕೆ ತೆಗೆದು ಬಾಗಿಲು ಮುಚ್ಚಬೇಕಾಗಿದೆ. ಪಡಿತರ ವ್ಯವಸ್ಥೆಯು ಮಾತ್ರ ಎಲ್ಲಾ ದಿನಗಳಲ್ಲಿ ಮುಂದುವರೆಯಲಿದೆ ಎಂದರು. ಮೇ.೨೪ ರವರೆಗೂ ಲಾಕ್ ಡೌನ್ ಮುಂದುವರೆಯಲಿದ್ದು, ನಂತರ ಇನ್ನು ಒಂದು ವಾರಗಳ ಕಾಲ ವಿಸ್ತರಣೆ ಆಗುವ ಸಾಧ್ಯತೆ ಇದೆ. ನಮ್ಮಲ್ಲಿ ೩೫೦ ಬೆಡ್ ಗಳಿಗೆ ಆಕ್ಸಿಜನ್ ವ್ಯವಸ್ಥೆ ಇದ್ದು, ಆಕ್ಸಿಜನ್ ಪೈಪ್ ಲೈನ್ ವ್ಯವಸ್ಥೆ ಇದ್ದರೂ ಆಕ್ಸಿಜನ್ ಲಭ್ಯವಿರುವುದಿಲ್ಲ. ಹೆಚ್ಚಿನ ಆಕ್ಸಿಜನ್ ಹಾಸಿಗೆ ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಆದರೇ ರಾಜ್ಯದಲ್ಲಿಯೇ ಆಕ್ಸಿಜನ್ ಕೊರತೆ ಇರುವುದರಿಂದ ಮುಂದಿನ ಕ್ರಮ ಏನು ಕೈಗೊಳ್ಳಬೇಕು ನಿರ್ಧಾರ ಮಾಡಬೇಕಾಗುತ್ತದೆ. ಪ್ರತಿ ಖಾಸಗಿ ನರ್ಸಿಂಗ್ ಹೋಂಗಳಿಗೆ ಹಿಮ್ಸ್ ನ ವೈದ್ಯರು ಹೋಗಿ ಬೇಟಿ ನೀಡಿ ಈಗಾಗಲೇ ಒಂದು ಸುತ್ತಿನ ಸಲಹೆ ಮತ್ತು ಆಡಿಟನ್ನು ಮಾಡಿ ಬಂದಿದ್ದಾರೆ. ಪ್ರತಿ ವಾರಗಳು ಹೆಚ್ಚಿನ ಆಡಿಟ್ ಮಾಡುವ ಮೂಲಕ ಆಕ್ಸಿಜನ್ ಬಳಕೆಯನ್ನು ನಿಯಂತ್ರಿಸಬೇಕಾಗಿದೆ. ಸರಕಾರದ ನಿಯಮದಂತೆ ನಾವು ಕಾರ್ಯನಿರ್ವಹಿಸಬೇಕಾಗಿರುವ ಅನಿವಾರ್ಯತೆ ಒಳಗಾಗಿದ್ದೇವೆ. ಪ್ರತಿ ದಿನ ೪ಕಿಲೋ ಆಮ್ಲಜನಕ ಬರಲು ಪ್ರಾರಂಭಿಸಿದರೇ ಸಮಸ್ಯೆ ಕಡಿಮೆ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ ಎಂದರು.