ನವದೆಹಲಿ : ಹೊಸ ಮಧ್ಯಂತರ ಮಾರ್ಗಸೂಚಿಗಳಿಗೆ ಬದ್ಧರಾಗದಿದ್ದಲ್ಲಿ ಜನಪ್ರಿಯ ಸಾಮಾಜಿಕ ಜಾಲತಾಣ ವೇದಿಕೆಗಳಾದ ಫೇಸ್ ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ನಾಳೆ(ಮೇ26)ಯಿಂದ ಭಾರತದಲ್ಲಿ ನಿಷೇಧಕ್ಕೊಳಪಡಲಿವೆಯೇ? ಎಂಬ ಪ್ರಶ್ನೆಯೊಂದು ವ್ಯಾಪಕವಾಗಿ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.
ಬಹುರಾಷ್ಟ್ರೀಯ ಕಂಪನಿಗಳಿಗೆ ಸೇರಿದ ಈ ಸೋಷಿಯಲ್ ಮೀಡಿಯಾ ಹಾಗೂ ಮೆಸೆಜಿಂಗ್ ಆ್ಯಪ್ಗಳು ಭಾರತದಲ್ಲಿ ಕಾರ್ಯನಿರ್ವಹಿಸಲು ಇರುವ ಹೊಸ ಮಧ್ಯಸ್ಥಿಕೆಯ ಮಾರ್ಗಸೂಚಿಗಳನ್ನು ಪಾಲಿಸಲು ನೀಡಿದ್ದ ಗಡುವು ಇಂದಿಗೆ ಮುಗಿಯಲಿದ್ದು, ಅವುಗಳ ಪಾಲನೆ ಸಂಬಂಧ ಈ ಕಂಪನಿಗಳಿಂದ ಯಾವುದೇ ಕ್ರಮ ಜರುಗಿಲ್ಲ.
ಟ್ವಿಟರ್ ನ ಭಾರತೀಯ ಆವೃತ್ತಿ ಮತ್ತು ಕೂ ಆಪ್ ಗಳು ಮಾತ್ರ ಮೇ 25 ರೊಳಗೆ ಹೊಸ ಮಾರ್ಗಸೂಚಿಗೆ ಬದ್ಧವಾಗಿರುವ ಬಗ್ಗೆ ಪ್ರಕಟಿಸಿವೆ. ಸರಕಾರದ ಮಾರ್ಗಸೂಚಿಗೆ ಬದ್ಧವಾಗುವ ಗುರಿಹೊಂದಿದ್ದೇವೆ, ಆದರೆ ಕೆಲವು ವಿಷಯಗಳ ಬಗ್ಗೆ ಇನ್ನಷ್ಟು ಚರ್ಚೆ ಬಯಸಿದ್ದೇವೆ ಎಂದು ಫೇಸ್ ಬುಕ್ ಇಂದು ಪ್ರಕಟಿಸಿದೆ.