ಹಾಸನ: ಜೀವ ಹೋಗುತ್ತೆ ಎಂದು ತಿಳಿದಿದ್ದರೂ ಸಾರ್ವಜನಿಕರಿಗೆ ಇನ್ನು ಜಾಗೃತಿ ಆಗಿಲ್ಲವೇನೋ ಎಂಬAತೆ ಕೊರೋನಾ ಎಂದರೇ ಮಟನ್ ಕೂರ್ಮ ಎಂದು ಕೊಂಡಿರಬೇಕು. ಮಾಸ್ಕ್ ಹಾಕದೆ ಬೆಳಿಗ್ಗೆ ಮತ್ತು ಸಂಜೆ ವಾಯು ವಿಹಾರದಲ್ಲಿ ತೊಡಗಿರುವುದ ನೋಡಿದರೇ ಹಾಸನದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆ ಆಗುವುದಿಲ್ಲವೋ ಎಂಬ ಅನುಮಾನ ಮೂಡಿದೆ.
ಕಳೆದ ವರ್ಷದಲ್ಲಿ ಕೊರೋನಾ ಸೋಂಕು ಹರಡಿದಾಗ ಹೆಚ್ಚು ಕಟ್ಟು ನಿಟ್ಟಾಗಿ ನಿಯಮ ಜಾರಿ ಮಾಡಿದ್ದರು. ಬೆಳಗಿನ ಜಾವದಲ್ಲಿ ಯಾರಾದರೂ ವಾಕ್ ಮಾಡಿದರೇ ಖುದ್ಧಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡರೆ ರಸ್ತೆಗಿಳಿದು ಯಾರು ಮಾಸ್ಕ್ ಹಾಕದೆ ಹೋಗುತ್ತಿದ್ದರೇ ಅಂತವರಿಗೆ ಸ್ಥಳದಲ್ಲಿಯೇ ಶಿಕ್ಷೆ ಕೊಟ್ಟರೇ, ಅನೇಕರಿಗೆ ಪೊಲೀಸ್ ವಸತಿಗೃಹಕ್ಕೆ ಕರೆ ತಂದು ಯೋಗಾಸನ ಮಾಡಿಸುವ ಶಿಕ್ಷೆ ಕೊಟ್ಟು ಬುದ್ದಿವಾದ ಹೇಳಿ ಕಳುಹಿಸುತ್ತಿದ್ದರು. ಈ ವರ್ಷ ಮತ್ತೆ ಕೊರೋನಾ ಎರಡನೇ ಅಲೆ ಪ್ರಾರಂಭವಾಗಿ ಸೋಂಕು ವ್ಯಾಪಾಕವಾಗಿ ಹರಡುತ್ತಿರುವದಲ್ಲದೇ ಸಾವು ನೋವು ಕೂಡ ಹೆಚ್ಚಿನ ರೀತಿ ಆಗುತ್ತಿದ್ದರೂ ಜನರು ಇನ್ನು ಬುದ್ದಿ ಕಲಿತಿಲ್ಲವೊ ಎಂದು ಅನುಮಾನ ಮೂಡಿದೆ. ವಾಯು ವಿಹಾರಕ್ಕಾಗಿ ಬರುವ ಮುಖ್ಯ ಸ್ಥಳವಾದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಾಸ್ಕ್ ಹಾಕದೆ ಇರುವವರ ಸಂಖ್ಯೆಯ ಓಡಾಟ ಜೋರಾಗೆ ಇತ್ತು. ಜನರಿಗೆ ಬುದ್ದಿವಾದ ಹೇಳುವ ದೊಡ್ಡ ದೊಡ್ಡ ಅಧಿಕಾರಿಗಳು ಕೂಡ ಮಾಸ್ಕ್ ಹಾಕದೆ ಇರುವುದು ಕಂಡು ಬಂದಿತು. ಇನ್ನು ರಿಂಗ್ ರಸ್ತೆಯಲ್ಲೂ ಇದೆ ಸಮಸ್ಯೆ ಹಾಗೂ ಹೃದಯ ಭಾಗದಲ್ಲಿರುವ ಮಹಾರಾಜ ಉದ್ಯಾನವನದಲ್ಲಿಯೂ ಕೂಡ ಮಾಸ್ಕ್ ಹಾಕದೆ ವಾಕ್ ಮಾಡುತ್ತಿದ್ದರು. ಮಹಾರಾಜ ಪಾರ್ಕ್ ಒಳಗೆ ಯಾರು ಹೋಗದಂತೆ ಮುಖ್ಯಧ್ವಾರಕ್ಕೆ ಬೀಗ ಹಾಕಲಾಗಿದ್ದರೂ ಗೇಟನ್ನೆ ನೆಗೆದು ಒಳ ಹೋಗುತ್ತಾರೆ. ಇನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಕೂಡ ಮುಖ್ಯಧ್ವಾರಕ್ಕೆ ಬೀಗ ಹಾಕಲಾಗಿದ್ದರೂ ಸಂದಿಯಲ್ಲಿ ನುಗ್ಗಿ ಬರುತ್ತಿದ್ದಾರೆ. ಸರಕಾರ ಜಾರಿಗೆ ತರಲಾಗಿರುವ ನಿಯಮವನ್ನು ಕಟ್ಟುನಿಟ್ಟಾಗಿ ಬಿಗಿ ಗೊಳಿಸದಿದ್ದರೇ ಕೊರೋನಾ ಸೋಂಕಿನ ಸಂಖ್ಯೆಯು ಕಡಿಮೆ ಆಗುವುದಿಲ್ಲ ವರತು ಹೆಚ್ಚಾಗುವ ಸಾಧ್ಯತೆ ಹೆಚ್ಚು ಇದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ.