ಮೋದಿ ಆಡಳಿತಕ್ಕೆ ೭ ವರ್ಷ ಸರಕಾರಿ ಆಸ್ಪತ್ರೆ ವೈದ್ಯರು-ಸಿಬ್ಬಂದಿಗಳಿಗೆ ಪುಷ್ಪಾರ್ಚನೆ

ಹಾಸನ: ದೇಶದ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಕ್ಕೆ ೭ ವರ್ಷ ತುಂಬಿದ ಹಿನ್ನಲೆಯಲ್ಲಿ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಪುಷ್ಪಾರ್ಚನೆ ಮಾಡಿ ಸಿಹಿ ನೀಡಲಾಯಿತು.


     ಲೋಕ ನಾಯಕ, ಜನ ಮೆಚ್ಚಿದ ನಾಯಕ ಪ್ರಧಾನಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದಿ ಜೀ ಯವರ ಕೇಂದ್ರ ಸರ್ಕಾರವು ೭ ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸೇವೆಯೇ ಸಂಘಟನೆ ಅಡಿಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಪ್ರೀತಂ ಜೆ ಗೌಡ ಅವರ ನೇತೃತ್ವದಲ್ಲಿ ಹಾಸನ ನಗರ ಬಿಜೆಪಿ ವತಿಯಿಂದ ಹಲವಾರು ಸೇವಾ ಕಾರ್ಯಕ್ರಮ ನಡೆಸಲಾಯಿತು. ಭಾನುವಾರದಂದು ಬೆಳಗ್ಗೆ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಹಾಗು ಸಿಬ್ಬಂದಿಯವರಿಗೆ ಪುಷ್ಪಾರ್ಚನೆ ಮಾಡಿ ಸಿಹಿ ಪ್ಯಾಕೇಟ್ ನೀಡಲಾಯಿತು. ನಂತರ ವಿಜಯನಗರ ಬಡಾವಣೆಯಲ್ಲಿ ಕ್ರಿಮಿ ನಾಶಕದ ಔಷದಿ ಸಿಂಪಡಿಸಲಾಯಿತು. ಬಡಾವಣೆಯ ರಸ್ತೆಗಳು ಮನೆಗಳು ಅಂಗಡಿ ಜನ ಸಂದಣಿ ಸ್ಥಳಗಳಲ್ಲಿ ಔಷದಿ ಸಿಂಪಡಿಸಿ ಜನರಿಗೆ ಕರೋನ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಯಿತು. ಇದಾದ ಬಳಿಕ ಹಾಸನ ನಗರದ ವಿವಿಧ ವಾಡ್‌ಗಳಲ್ಲಿ ಸಾರ್ವಜನಿಕರಿಗೆ ಸ್ಟೀಮ್ ತೆಗೆದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು.

       ಈ ಸಂಧರ್ಭದಲ್ಲಿ ಜಿಲ್ಲಾ ಸರ್ಜನ್ ಕೃಷ್ಣಮೂರ್ತಿ, ನಗರಾಧ್ಯಕ್ಷರಾದ ವೇಣುಗೋಪಾಲ್, ಹಾಸನ ನಗರಸಭೆ ಅಧ್ಯಕ್ಷರಾದ ಮೋಹನ್, ಸದಸ್ಯರಾದ ದಯಾನಂದ್, ಸಂತೋಷ್, ಜಿಲ್ಲಾ ಮುಖಂಡರಾದ ನಾಗರತ್ನ, ಶೇಷಮ್ಮ, ಶಿವಪ್ರಸಾದ್,

ಗವಿರಂಗ, ಚಂದು, ಅವಿನಾಶ್, ಮುರಳಿ, ಶಮಂತ್, ನಗರಸಭೆ ಸದಸ್ಯರಾದ ರಕ್ಷಿತ್ ಸಂತೋಷ್, ಸಂದೀಪ್, ಮುರಳಿ ಇತರರು ಉಪಸ್ಥಿತರಿದ್ದರು.


Post a Comment

Previous Post Next Post