ಹಾಸನ: ಕೊರೋನಾ ಸೋಂಕಿನಿAದ ಪ್ರತಿನಿತ್ಯ ಸಾವು ಮತ್ತು ನೊವಿನ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಿದ್ದು, ಸರಿಯಾಗಿ ಕ್ರಮಕೈಗೊಳ್ಳದಿದ್ದರೇ ಬಿಜೆಪಿ ಸರಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರಾದ ಬಿ.ಪಿ. ಮಂಜೇಗೌಡ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರದಂದು ಮಾತನಾಡಿ, ಜಿಲ್ಲೆಯಿಂದ ಕೋವಿಡ್‌ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ವಿಪರೀತವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ೫೫,೮೪೧ ದಾಟಿದೆ. ಸಾವಿನ ಸಂಖ್ಯೆಯೂ ೭೦೩ ಕ್ಕೇರಿದೆ. ಆದರೆ ಇನ್ನೂ ಸಾವಿನ ಪ್ರಮಾಣ ಹೆಚ್ಚು ಇದ್ದು, ಸಂಬAಧಿಸಿದAತೆ ನಿಖರವಾದ ಮಾಹಿತಿಯನ್ನು ಕೊಡುತ್ತಿಲ್ಲ. ವೆಂಟಿಲೇಟರ್, ರೆಮ್‌ಡಿಸಿವರ್ ಕೊರತೆಯಿಂದ ಅಪಾರ ಸಾವುಗಳು ಸಂಭವಿಸುತ್ತಿವೆ . ಇದಕ್ಕೆ ಪರಿಹಾರ ಇನ್ನು ಸಿಕ್ಕಿರುವುದಿಲ್ಲ ಎಂದು ದೂರಿದರು. ಸರ್ಕಾರ ಹಾಗೂ ಜಿಲ್ಲಾಡಳಿತ ಇದನ್ನು ಗಮನಕ್ಕೆ ತೆಗೆದುಕೊಂಡಿಲ್ಲ. ಈ ಜೊತೆಗೆ ಕೋವಿಡ್ ವ್ಯಾಕ್ಸಿನ್ ಕೂಡ ಸಿಗುತ್ತಿಲ್ಲ. ಕೊರೊನಾ ಸೋಂಕಿತರು ಯಾವ ಕಾರಣಕ್ಕೆ ಸಾವನ್ನಪ್ಪುತ್ತಿದ್ದಾರೆ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕು. ರೈತರಿಗೆ, ಜನಸಾಮಾನ್ಯರಿಗೆ ಕೊರೊನಾ ಬಗ್ಗೆ ಹೆಚ್ಚು ತಿಳಿದಿಲ್ಲ. ಅವರು ಮುಗ್ಧರಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿAದ ಹೆಚ್ಚು ಹಣ ಪಡೆಯುತ್ತಿದ್ದಾರೆ. ರೆಮ್‌ಡಿಸಿವರ್ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಆಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿದರೆ ಸತ್ಯಾಂಶ ತಿಳಿಯುತ್ತದೆ ಎಂದರು. ಹಿಮ್ಸ್ ಆಸ್ಪತ್ರೆ ಸೇರಿದಂತೆ ಎಲ್ಲಾ ಖಾಸಗಿ ಆಸ್ಪತ್ರೆಗಳಿಂದ ೮೨ ವೆಂಟಿಲೇಟರ್ ಬೆಡ್‌ಗಳಿವೆ. ೩೪೨ ಆಕ್ಸಿಜನ್ ಬೆಡ್ ಇದೆ. ದಿನಕ್ಕೆ ೨,೫೦೦ ದಿಂದ ೩,೦೦೦ ಸೋಂಕಿತರು ಜಿಲ್ಲೆಯಲ್ಲಿ ಪತ್ತೆಯಾಗುತ್ತಿದ್ದಾರೆ. ತೀವ್ರ ಸೋಂಕಿತರಿಗೆ ವೆಂಟಿಲೇಟರ್, ಆಕ್ಸಿಜನ್ ಇರುವ ಬೆಡ್ ಸಿಗುತ್ತಿಲ್ಲ. ರೆಮ್‌ಡಿಸಿವರ್ ಕೂಡ ಸಿಗದಂತಾಗಿದೆ. ಈ ಎಲ್ಲಾ ಕಾರಣಗಳಿಂದ ಸಾವಿನ ಪ್ರಮಾಣ ಜಾಸ್ತಿಯಾಗುತ್ತಿದೆ ಎಂದು ಆತಂಕವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ಹಾಸನ ಜಿಲ್ಲೆಗೆ ಪಿಕ್ನಿಕ್ ಬಂದಾಗೆ ಬಂದು ಹೋಗುತ್ತಿದ್ದಾರೆ. ಕೊರೋನಾ ವಿಚಾರವಾಗಿ ಸ್ಥಳೀಯ ಶಾಸಕರು ಏಕೆ ಗಮನಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಇಷ್ಟೊಂದು ಜನರು ಸಾವನಪ್ಪಲು ಸರಕಾರವೇ ನೇರ ಹೊಣೆ. ಕೊರೋನಾ ವೇಳೆ ಯಾವ ರಾಜಕೀಯ ಬೇಡ ಎಂದು ಇದೆ ವೇಳೆ ತಿಳಿಸಿದರು.
. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ರವರು ಗಂಭೀರವಾಗಿ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲಾಡಳಿತ ಕೂಡ ಕೈಚೆಲ್ಲಿ ಕುಳಿತಿದೆ. ರಾಜ್ಯ ಸರ್ಕಾರ ಹಾಸನ ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ವೆಂಟಿಲೇಟರ್, ಆಕ್ಸಿಜನ್, ರೆಮ್ಡಿಸಿವರ್ ಸಮರ್ಪಕವಾಗಿ ಪೂರೈಸಬೇಕು. ಇಲ್ಲದಿದ್ದರೆ ಜನರೇ ಬೀದಿಗಿಳಿಯುತ್ತಾರೆ. ನಮ್ಮ ಹಾಸನ ವಿಧಾನಸಭಾ ಕ್ಷೇತ್ರದ ಜನರು ಇದನ್ನು ಸೂಕ್ಷ÷್ಮವಾಗಿ ಗಮನಿಸುತ್ತಿದ್ದು,. ಸರಿಯಾಗಿ ಕ್ರಮ ಕೈಗೊಳ್ಳದಿದ್ದರೆ ಈ ರಾಜ್ಯ ಸರ್ಕಾರಕ್ಕೆ ಹಾಗೂ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ ಅವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ವಿಶ್ವನಾಥ್, ರವೀಶ್, ಅಬ್ದೂಲ್ ಆದಿಲ್, ಪ್ರಕಾಶ್ ಇತರರು ಉಪಸ್ಥಿತರಿದ್ದರು.